Breaking News

ನ.ಪಂ ಚುನಾವಣೆ : ಆರು ವಾರ್ಡ್‌ಗಳ ಬಿಜೆಪಿ ಅಭ್ಯರ್ಥಿ ಘೋಷಣೆ


ಸುಳ್ಯ ನ.ಪಂ ಚುನಾವಣೆಗೆ ಸ್ಪರ್ಧಿಸುವ ಆರು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದರು.
20 ವಾರ್ಡ್‌ಗಳಲ್ಲಿ 14 ರಲ್ಲಿ ಪ್ರಥಮ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆ ಆಗಿತ್ತು.
ಕೊಯಿಕುಳಿ ವಾರ್ಡ್ ಸಂಖ್ಯೆ 2 ರಲ್ಲಿ ಬಾಲಕೃಷ್ಣ ರೈ ದುಗಲಡ್ಕ, ಜಯನಗರ ವಾರ್ಡ್ 3 ರಲ್ಲಿ ರೋಹಿತ್ ಕೊಯಿಂಗೋಡಿ, ಕುರುಂಜಿಬಾಗ್ ವಾರ್ಡ್ 8 ರಲ್ಲಿ ಶೀಲಾ ಅರುಣ್, ಕುರುಂಜಿಗುಡ್ಡೆ ವಾರ್ಡ್ 9 ರಲ್ಲಿ ಪೂಜಿತಾ ಶಿವಪ್ರಸಾದ್, ಕೇರ್ಪಳ ವಾರ್ಡ್ 10 ರಲ್ಲಿ ವಿನಯಕುಮಾರ್ ಕಂದಡ್ಕ, ಕಾನತ್ತಿಲ ವಾರ್ಡ್ 20 ರಲ್ಲಿ ಸರೋಜಿನಿ ಪೆಲ್ತಡ್ಕ ಅಭ್ಯರ್ಥಿಗಳಾಗಿ ಆಯ್ಕೆಯಾದರು.
ಹಲವು ಅಭ್ಯರ್ಥಿ ಆಕಾಂಕ್ಷಿಗಳಿದ್ದು ತೀವ್ರ ಕುತೂಹಲ ಕೆರಳಿಸಿದ್ದ 10 ನೇ ವಾರ್ಡ್‌ನಲ್ಲಿ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರನ್ನು ಪಕ್ಷ ಕಣಕ್ಕಿಳಿಸಿದರೆ, ಎಂಟು ಮಂದಿ ಆಕಾಂಕ್ಷಿಗಳಿದ್ದ ಸಾಮಾನ್ಯ ಮಹಿಳಾ ಮೀಸಲು 20 ನೇ ವಾರ್ಡ್‌ನಲ್ಲಿ ಮಾಜಿ ಸದಸ್ಯೆ ಸರೋಜಿನಿ ಪೆಲ್ತಡ್ಕ ಅವರಿಗೆ ಟಿಕೆಟ್ ಒಲಿದಿದೆ. ಕುತೂಹಲ ಕೆರಳಿಸಿದ್ದ ಎರಡನೇ ವಾರ್ಡ್‌ನಲ್ಲಿ ಬಾಲಕೃಷ್ಣ ರೈ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.