Breaking News

ಕನಕಮಜಲು ಶಾಲೆಯ ಸ್ಥಳದಾನಿ ನರಿಯೂರು ಗುಡ್ಡಪ್ಪ ಗೌಡ ವಿಧಿವಶ

ಕನಕಮಜಲು ಗ್ರಾಮದ ನರಿಯೂರು ದಿ.ರಾಮಣ್ಣ ಗೌಡರ ಪುತ್ರ ನರಿಯೂರು ಗುಡ್ಡಪ್ಪ ಗೌಡ ಅವರು ವಯೋಸಹಜ ಅಸೌಖ್ಯದಿಂದಾಗಿ ಮೇ.18ರಂದು ಬೆಳಿಗ್ಗೆ ವಿಧಿವಶರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳದಾನಿಗಳಾದ ಗುಡ್ಡಪ್ಪ ಗೌಡರು ಈ ಹಿಂದೆ ಕನಕಮಜಲು ಹಾಗೂ ಜಾಲ್ಸೂರು ಗ್ರಾಮ ಒಟ್ಟಾಗಿ ಇದ್ದ ಸಂದರ್ಭದಲ್ಲಿ ಅಂದಿನ ಜಾಲ್ಸೂರು ಮಂಡಲ ಪಂಚಾಯತ್ ನ ಉಪ ಪ್ರಧಾನರಾಗಿದ್ದರು. ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಜಾಲ್ಸೂರು ಇದರ ಮಾಜಿ ಅಧ್ಯಕ್ಷರಾಗಿರುವ ನರಿಯೂರು ಗುಡ್ಡಪ್ಪ ಗೌಡ ಅವರಿಗೆ ಇತ್ತೀಚೆಗೆ ಕನಕಮಜಲು ಶಾಲಾ ಶತಮಾನೋತ್ಸವದ ಸಂದರ್ಭದಲ್ಲಿ ಸ್ಥಳದಾನಿಗಳ ಪರವಾಗಿ ಸನ್ಮಾನಿಸಿ, ಗೌರವಿಸಲಾಗಿತ್ತು.

ಮೃತರು ಪತ್ನಿ ಶ್ರೀಮತಿ ಲೀಲಾವತಿ, ಪುತ್ರರಾದ ರಾಮಚಂದ್ರ ಗೌಡ ನರಿಯೂರು, ಕೇಶವಾನಂದ ನರಿಯೂರು, ಉಮೇಶ್ಚಂದ್ರ ನರಿಯೂರು, ನ್ಯಾಯವಾದಿ ಚಂದ್ರಶೇಖರ ನರಿಯೂರು, ಪುತ್ರಿಯರಾದ ತಿಲೋತ್ತಮೆ, ಚಂದ್ರಕಲಾ, ವಿಜಯಕುಮಾರಿ, ಪುಷ್ಪಾವತಿ, ಸಹೋದರ ದುಗ್ಗಪ್ಪ ಗೌಡ ನರಿಯೂರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಗುಡ್ಡಪ್ಪ ಗೌಡ ಅವರು ಹಲವು ವರ್ಷಗಳ ಕಾಲ ಕನಕಮಜಲಿನಲ್ಲಿ ಪಟೇಲರಾಗಿ ಕರ್ತವ್ಯ ನಿರ್ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.