HomePage_Banner
HomePage_Banner
Breaking News

ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಬೈಕ್‌ಗಳ ಸರಣಿ ಅಪಘಾತ

ಸಹಸವಾರ ಕುಶಾಲಪ್ಪ ಗೌಡ ಮೃತ್ಯು – ಓರ್ವ ಗಂಭೀರ – ಮೂವರಿಗೆ ಗಾಯ
ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಮೇ ೧೬ರಂದು ರಾತ್ರಿ ಬೈಕ್‌ಗಳ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಟೈಲರ್ ಕುಶಾಲಪ್ಪ ಗೌಡರವರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಅಪಘಾತದಲ್ಲಿ ಓರ್ವನಿಗೆ ತೀವ್ರ ಗಾಯವಾಗಿದ್ದು, ಮೂವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ಮತ್ತು ಅಪಘಾತ ಎಸಗಿ ಪರಾರಿಯಾದ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಮೇ ೧೬ರಂದು ರಾತ್ರಿ ಎಪಿಎಂಸಿ ರಸ್ತೆಯಲ್ಲಿ ಬೈಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಬೈಕೊಂದು ಆಲ್ಫಾ ಸ್ಟೋರ್ ಕೋಳಿ ಮಾಂಸ ಮಾರಾಟ ಸಂಸ್ಥೆಯ ಬಳಿ ಎದುರಿನಿಂದ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿ. ಪುತ್ತೂರು ಸಿಟಿ ಆಸ್ಪತ್ರೆಯ ಬಳಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿತ್ತು. ಆಲ್ಪಾಸ್ಟೋರ್ ಬಳಿ ನಡೆದ ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಸವಾರ ಆರ್ಯಾಪು ಗ್ರಾಮದ ಒಳತಡ್ಕ ಪಿಲಿಪಂಜರ ನಿವಾಸಿ ಶೀನಪ್ಪ ಭಂಡಾರಿಯವರ ಪುತ್ರ ಸಾಲ್ಮರದಲ್ಲಿ ಸೆಲೂನ್ ಅಂಗಡಿ ನಡೆಸುತ್ತಿರುವ ಸಂತೋಷ್ (೩೭ ವ.) ಮತ್ತು ಅವರ ಹಿಂಬದಿ ಸವಾರರಾಗಿದ್ದ ಆರ್ಯಾಪು ಗ್ರಾಮದ ಬೊಲ್ಲನಗುಡ್ಡೆ ದಿ| ಶಿವಪ್ಪ ಗೌಡರ ಪುತ್ರ ಸಾಲ್ಮರದಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಕುಶಾಲಪ್ಪ ಗೌಡ (೫೫ ವ.)ರವರು ಗಾಯಗೊಂಡಿದ್ದರು. ಗಾಯಾಳುಗಳಿಬ್ಬರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯಗೊಂಡ ಕುಶಾಲಪ್ಪ ಗೌಡರವರನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕುಶಾಲಪ್ಪ ಗೌಡರವರು ತಡ ರಾತ್ರಿ ಮೃತಪಟ್ಟಿದ್ದಾರೆ. ಅಪಘಾತ ಎಸಗಿದ ಬೈಕ್‌ನಿಂದ ಇನ್ನೊಂದು ಅಪಘಾತ: ಎಪಿಎಂಸಿ ರಸ್ತೆಯ ಆಲ್ಫಾ ಸ್ಟೋರ್ ಬಳಿ ಅಪಘಾತ ಎಸಗಿದ ಬೈಕ್ ಮುಂದೆ ಹೋಗಿ ಪುತ್ತೂರು ಸಿಟಿ ಆಸ್ಪತ್ರೆಯ ಬಳಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ನಲ್ಲಿದ್ದವರು ಗಾಯಗೊಂಡಿದ್ದಾರೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ ಸವಾರ ಸವಣೂರು ಮಾಂತೂರು ನಿವಾಸಿ ಅಬ್ದುಲ್ ಸಲೀಮ್ ಎಂಬವರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಬೈಕ್‌ನಲಿದ್ದ ಬ್ರಹ್ಮನಗರ ನಿವಾಸಿಗಳಾದ ಸವಾರ ಸುದರ್ಶನ್ ಮತ್ತು ಸಹಸವಾರ ಸಂಪತ್ ರವರು ಕೂಡಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಯ ಕುರಿತು ಪುತ್ತೂರು ಸಂಚಾರ ಪೊಲೀಸರು ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟೈಲರ್ ವೃತ್ತಿಯಲ್ಲಿದ್ದ ಕುಶಾಲಪ್ಪ ಗೌಡ: ಮೂಲತಃ ಬೆಳ್ಳಾರೆಯ ತಂಟೆಪ್ಪಾಡಿಯ ಪ್ರಸ್ತುತ ಆರ್ಯಾಪು ಗ್ರಾಮದ ಬೊಲ್ಲಣಗುಡ್ಡೆ ನಿವಾಸಿ ಕುಶಾಲಪ್ಪ ಗೌಡರು ಸಾಲ್ಮರ ಬಳಿ ಟೈಲರ್ ವೃತ್ತಿ ನಡೆಸುತ್ತಿದ್ದರು. ಪ್ರತಿ ದಿನ ಅವರು ಸಂಜೆ ಅಂಗಡಿ ಬಾಗಿಲು ಮುಚ್ಚಿ ಪುತ್ತೂರು ಪೇಟೆಯ ತನಕ ನಡೆದು ಕೊಂಡು ಹೋಗಿ ಅಲ್ಲಿಂದ ಸಿಕ್ಕಿದ ವಾಹನದಲ್ಲಿ ಮನೆ ಕಡೆ ತೆರಳುತ್ತಿದ್ದರು. ಅವರ ಅಂಗಡಿಯ ಪಕ್ಕದಲ್ಲಿ ಸೆಲೂನ್ ಅಂಗಡಿ ನಡೆಸುತ್ತಿರುವ ಸಂತೋಷ್ ಭಂಡಾರಿಯವರ ಮನೆ ಕೂಡಾ ಆರ್ಯಾಪು ಗ್ರಾಮದಲ್ಲಿ ಇರುವ ಹಿನ್ನೆಲೆಯಲ್ಲಿ ಕೆಲವೊಂದು ಬಾರಿ ಅವರ ಬೈಕ್‌ನಲ್ಲಿ ಮನೆ ಕಡೆ ಹೋಗುತ್ತಿದ್ದರು. ಮೇ ೧೬ರಂದು ಸಂತೋಷ್‌ರವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೃತರು ಪತ್ನಿ ವಾಗ್ದೇವಿ, ಪುತ್ರಿಯರಾದ ಶಿಲ್ಪಾ, ಶ್ರೀಶಾಂತಿ, ಪುತ್ರ ರಾದ ಹರ್ಷ, ಹಿತೇಶ್ ಮತ್ತು ಸಹೋದರ ಕರಿಯಪ್ಪ ಗೌಡ, ಸಹೋದರಿಯರಾದ ದೇವಕಿ, ಪೂವಮ್ಮ, ಜಾನಕಿರವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.