HomePage_Banner
HomePage_Banner
HomePage_Banner

ನೀರು ಮಿತವಾಗಿ ಬಳಸಲು ನ.ಪಂ. ಸೂಚನೆ

ಸುಳ್ಯ ನಗರ ನೀರು ಸರಬರಾಜು ಆಗುತ್ತಿರುವ ಪಯಸ್ವಿನಿ ನದಿಯಲ್ಲಿ ನೀರಿನ ಹರಿಯುವ ಕಡಿಮೆ ಆಗುತ್ತಿರುವುದರಿಂದ ಮತ್ತು ಕೊಳವೆ ಬಾವಿಗಳಲ್ಲಿ ಕೂಡ ನೀರಿನ ಮೂಲ ಕಡಿಮೆ ಆಗುತ್ತಿದೆ. ಆದ್ದರಿಂದ ಹಾಲಿ ಇರುವ ನೀರನ್ನು ಮಳೆ ಬರುವ ತನಕ ಮಿತವಾಗಿ ಬಳಸಿಕೊಳ್ಳಬೇಕಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಕಟ್ಟಡ ರಚನೆ, ಗಿಡಮರಗಳಿಗೆ ಉಪಯೋಗ ಮಾಡುವುದನ್ನು ಸದ್ಯಕ್ಕೆ ನಿಷೇಧಿಸಲಾಗಿದೆ. ಮುಂದಿನ ಆದೇಶದ ತನಕ ಸಾರ್ವಜನಿಕರಿಗೆ ನೀರನ್ನು ಮುಖ್ಯ ಪೇಟೆ ವಠಾರ ಕಲ್ಲುಮುಟ್ಲು, ಗುರುಂಪು, ರಥಬೀದಿ, ಕೆರೆಮೂಲೆ, ಕುರುಂಜಿಭಾಗ್, ಅಂಬೆಟಡ್ಕ, ದೇವಸ್ಯ, ಜ್ಯೋತಿಸರ್ಕಲ್ ವರೆಗೆ ಪ್ರತಿ 2 ದಿನಕ್ಕೊಮ್ಮೆ ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆವರಗೆ ಗಾಂಧಿನಗರ ಪೇಟೆ, ನಾವೂರು, ಬೋರುಗುಡ್ಡೆ, ಜಟ್ಟಿಪಳ್ಳ, ಕಾನತ್ತಿಲ, ಸೂರ್ತಿಲ, ಕಾಯರ್ತೋಡಿ, ಕೊಡಿಯಾಲಬೈಲು ವ್ಯಾಪ್ತಿಗೆ ಪ್ರತಿ 2 ದಿನಕ್ಕೊಮ್ಮೆ ಬೆಳಿಗ್ಗೆ 6.00 ರಿಂದ ರಾತ್ರಿ 12.00 ರವರೇಗೆ ನೀರು ಸರಬರಾಜು ಮಾಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.