HomePage_Banner
HomePage_Banner
HomePage_Banner

ನ.ಪಂ. ಚುನಾವಣಾ ಅಭ್ಯರ್ಥಿಗಳ ಪರಿಚಯ : ಕೆರೆಮೂಲೆ ವಾರ್ಡ್ – ಲೊಕೇಶ್ ಕೆರೆಮೂಲೆ (ಬಿ.ಜೆ.ಪಿ.)

ಸುಳ್ಯ ನಗರ ಪಂಚಾಯತ್‌ನ ಕೆರೆಮೂಲೆ ವಾರ್ಡ್‌ನಿಂದ ಲೋಕೇಶ್ ಕೆರೆಮೂಲೆಯವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಸುಳ್ಯ ಕಸಬಾ ಕೆರೆಮೂಲೆ ಈಶ್ವರಪ್ಪ ಗೌಡ ಮತ್ತು ವೇದಾವತಿ ದಂಪತಿಗಳ ಪುತ್ರರಾಗಿರುವ ಲೊಕೋಶ್ ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗಾಂಧಿನಗರ ಸರಕಾರಿ ಶಾಲೆಯಲ್ಲಿ ಹೈಸ್ಕೂಲ್ ಮತ್ತು ಪಿ.ಯು.ಸಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ವ್ಯಾಸಂಗವನ್ನು ಬೆಂಗಳೂರಿನ ರಾಜಾಜಿನಗರದ ಆರ್.ಪಿ.ಯು.ಕಾಲೇಜಿನಲ್ಲಿ ಪಡೆದಿರುತ್ತಾರೆ. ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅರೆಕಾಲಿಕವಾಗಿ ಬೆಂಗಳೂರಿನ ಸುದ್ದಿ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ೨೦೧೬ ರಲ್ಲಿ ಸುಮಿತಾರನ್ನು ವಿವಾಹವಾಗಿ, ಓರ್ವ ಪುತ್ರ ದ್ರುಪದ್‌ನೊಂದಿಗೆ ಪ್ರಸ್ತುತ ಕೆರೆಮೂಲೆಯಲ್ಲಿ ನೆಲೆಸಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ಎನ್.ಸಿ.ಸಿ. ಮತ್ತು ಎ.ಬಿ.ವಿ.ಪಿ.ಯ ಸದಸ್ಯರಾಗಿ, ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ, ನಮೋ ಬ್ರಿಗೇಡ್, ಯುವ ಬ್ರಿಗೇಡ್, ಟೀಮ್ ಮೋದಿಯ ಸಂಚಾಲಕರಾಗಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ವ್ಯಾಪಾರ ಉದ್ಯಮವನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.