HomePage_Banner
HomePage_Banner
HomePage_Banner

1.25ಕೋಟಿ ರೂ. ತೆರಿಗೆ ಕಟ್ಟುವಂತೆ ನ.ಪಂ.ನಿಂದ ಕೆ.ವಿ.ಜಿ. ವಿದ್ಯಾಸಂಸ್ಥೆಗೆ ನೋಟೀಸು-ತೆರಿಗೆ ವಿನಾಯಿತಿ ಇದೆ – ಸೇವಾ ಶುಲ್ಕ ಕಟ್ಟಲಾಗುತ್ತಿದೆ, ಹೆಚ್ಚುವರಿ ಕಟ್ಟುವುದಿಲ್ಲ ; ವಿದ್ಯಾಸಂಸ್ಥೆ ಉತ್ತರ-ಲಾಯರ್ ನೋಟೀಸ್ ನೀಡಿ ಹೋರಾಡಲು ನ.ಪಂ. ನಿರ್ಧಾರ

ಸುಳ್ಯ ನಗರ ಪಂಚಾಯತ್‌ಗೆ 1.25 ಕೋಟಿ ರೂ.ತೆರಿಗೆಯನ್ನು ಕಟ್ಟಬೇಕೆಂದು ಕೆ.ವಿ.ಜಿ. ವಿದ್ಯಾಸಂಸ್ಥೆಗೆ ನ.ಪಂ. ಮುಖ್ಯಾಧಿಕಾರಿ ನೋಟೀಸು ಮಾಡಿದ್ದು ತಾವು ಸೇವಾ ಶುಲ್ಕ ಕಟ್ಟಿದ್ದು, ಹೆಚ್ಚುವರಿ ತೆರಿಗೆ ಕಟ್ಟುವುದಕ್ಕೆ ನಮಗೆ ವಿನಾಯಿತಿ ಇರುವುದರಿಂದ ಕಟ್ಟಲು ಸಾಧ್ಯವಿಲ್ಲ ಎಂದು ವಿದ್ಯಾಸಂಸ್ಥೆಯರು ಉತ್ತರ ನೀಡಿದ ಹಾಗೂ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮಕೈಗೊಳ್ಳುವುದಕ್ಕಾಗಿ ಕೋರ್ಟು ಮೆಟ್ಟಿಲೇರಲು ನ.ಪಂ. ನಿರ್ಧರಿಸಿರುವ ಘಟನೆ ವರದಿಯಾಗಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯು ಕೇಶನ್ ನಡಿಯಲ್ಲಿರುವ ಕೆ.ವಿ.ಜಿ. ವಿದ್ಯಾ ಸಂಸ್ಥೆಗಳು ತಮ್ಮಲ್ಲಿರುವ ಕಟ್ಟಡಗಳ ಬಾಬ್ತು ೨೨ ಲಕ್ಷ ರೂ.ಗಳನ್ನು ಸೇವಾ ಶುಲ್ಕದ ರೂಪದಲ್ಲಿ ವಾರ್ಷಿಕವಾಗಿ ಕಟ್ಟುತ್ತಿದ್ದಾರೆ. ಇತ್ತೀಚೆಗೆ ಲೆಕ್ಕ ಪರಿಶೋಧಕರು ನಗರ ಪಂಚಾಯತ್ ನ ಲೆಕ್ಕ ಪತ್ರ ಪರಿಶೋಧನೆಗೊಳಪಡಿಸಿ ಕೆ.ವಿ.ಜಿ. ವಿದ್ಯಾಸಂಸ್ಥೆಯಿಂದ ಕೇವಲ ಸೇವಾ ಶುಲ್ಕ ಅಲ್ಲ. ಪೂರ್ಣ ಕಟ್ಟಡ ತೆರಿಗೆ ಯನ್ನು ಸಂಗ್ರಹ ಮಾಡಬೇಕಿತ್ತು ಎಂದು ಬರೆದಿದ್ದರೆನ್ನಲಾಗಿದೆ.
ಈ ಬಗ್ಗೆ ಮುಖ್ಯಾಧಿಕಾರಿ ಶ್ರೀಧರ್‌ರವರು ಕ್ರಮಕೈಗೊಂಡು ಕಟ್ಟಡ ತೆರಿಗೆಯ ಶೇ.೨೫ರಂತೆ ನೀವು ಈಗಾಗಲೇ ೨೨ ಲಕ್ಷ ಕಟ್ಟಿದ್ದೀರಿ. ಇನ್ನು ನೀವು 1,25,14,965 ರೂ.ಗಳನ್ನು ನ.ಪಂ.ಗೆ ತೆರಿಗೆ ರೂಪದಲ್ಲಿ ಪಾವತಿಸಬೇಕು ಎಂದು ಡಿಮಾಂಡ್ ನೊಟೀಸು ಕಳುಹಿಸಿದರು.
ಇದಕ್ಕೆ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರು ಎರಡು ಪತ್ರಗ ಳಲ್ಲಿ ಉತ್ತರ ಬರೆದು “ಕೆ.ವಿ.ಜಿ. ವಿದ್ಯಾಸಂಸ್ಥೆಯ ಕಟ್ಟಡಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮಾತ್ರ ನಡೆಸಲಾಗುತ್ತದೆ. ಇದಕ್ಕೆ ಕಟ್ಟಡ ತೆರಿಗೆಯ ಶೇ.೨೫ ಸೇವಾ ಶುಲ್ಕವನ್ನು ಮಾತ್ರ ಸಂಗ್ರಹಿಸಲು ನ. ಪಂ. ನಿರ್ಧರಿಸಿದೆ. ಅದರಂತೆ ನಾವು ಪಾವತಿಸಿzವೆ. ಈಗ
ನೀವು ಆಡಿಟ್ ಅಬ್ಜೆಕ್ಷನ್‌ನ ಕಾರಣ ಕೊಟ್ಟು ನಮ್ಮಿಂದ 1 ಕೋಟಿ 25 ಲಕ್ಷ ರೂ ತೆರಿಗೆಯನ್ನು ಹೆಚ್ಚುವರಿಯಾಗಿ ಕೇಳುತ್ತಿದ್ದೀರಿ. ನಾವು ನಗರ ಪಂಚಾಯತ್‌ಗೆ ತೆರಿಗೆ ಪಾವತಿದಾರರಾದರೂ ನಮ್ಮ ಕ್ಯಾಂಪಸ್‌ನೊಳಗಿನ ತ್ಯಾಜ್ಯ ಸಂಗ್ರಹಣೆ ನಗರ ಪಂಚಾಯತ್ ಕೊಂಡೊಯ್ಯುವುದಿಲ್ಲ. ನಾವೇ ವಿಲೇವಾರಿ ಮಾಡುತ್ತೇವೆ.
ರಸ್ತೆ, ಬೀದಿ ದೀಪ, ಕುಡಿಯುವ ನೀರು ಎಲ್ಲವನ್ನು ನಾವೇ ನಿರ್ವಹಿಸುತ್ತಿವೆ. ಮೇಲಾಗಿ ನಮ್ಮಿಂದ ಶೈಕ್ಷಣಿಕ ಸೇವಾ ಕಾರ್ಯ ವಾದುದರಿಂದ ಕಟ್ಟಡಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ ಆದ್ದರಿಂದ ನೀವು ಡಿಮಾಂಡ್ ನೋಟೀಸು ಕಳುಹಿಸಿದ ಪ್ರಕಾರ ತೆರಿಗೆ ಪಾವತಿಸಲು ಅಸಾಧ್ಯ. ಆಡಿಟರ್‌ಗಳಿಗೆ ಸರಿಯಾಗಿ ಮಾಹಿತಿ ನೀಡದೆ ನೀವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ನಮಗೆ ನೋಟೀಸು ನೀಡಿದ್ದೀರಿ “ ಎಂದು ತಿಳಿಸಿದ್ದಾರೆ.
ಈ ಉತ್ತರ ತಲುಪಿದ ನಂತರ ಮುಖ್ಯಾಧಿಕಾರಿಯವರು ವಿಷಯವನ್ನು ಕೋರ್ಟಿಗೆ ಹಾಕುವುದಕ್ಕಾಗಿ ನ.ಪಂ.ನ ನ್ಯಾಯವಾದಿಯವರಿಗೆ ಕಡತ ಕಳುಹಿಸಿದ್ದಾರೆಂದು ತಿಳಿದು ಬಂದಿದ್ದು, ನ.ಪಂ.ನಿಂದ ಕ್ರಮ ಪ್ರಕಾರ ಸೆಕ್ಷನ್ 142 ರ ಅಡಿ ಇನ್ನೊಂದು ನೋಟೀಸನ್ನು ಕೆ.ವಿ.ಜಿ. ವಿದ್ಯಾಸಂಸ್ಥೆಗೆ ಕಳುಹಿಸುವಂತೆ ನ್ಯಾಯವಾದಿಯವರು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.
ಚುನಾವಣೆ ಸಂದರ್ಭವಾದುದರಿಂದ ನ.ಪಂ.ನಿಂದ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅವುಗಳನ್ನು ಪಡೆದು ಮುಂದಿನ ವಾರ ವಿವರ ಪ್ರಕಟಿಸಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.