HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪಥ -ವರ್ಷಾಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಚತುಷ್ಪಥ, ಬ್ರಹ್ಮರಥ, ಚಿನ್ನದ ರಥ, ಬೆಳ್ಳಿ ರಥ

ದಕ್ಷಿಣ ಭಾರತದ ಪ್ರಸಿದ್ಧ ದೇವಾ ಲಯ, ಸರ್ಪ ಸಂಸ್ಕಾರದ ಮೂಲ ತವರೂರು ಕುಕ್ಕೆ ಸುಬ್ರಹ್ಮಣ್ಯದಲ್ಲೀಗ ಅಭಿವೃದ್ಧಿಯ ಪರ್ವಕಾಲ. ಎಲ್ಲರೂ ತಿಳಿದಿರುವಂತೆ ಸುಬ್ರಹ್ಮಣ್ಯ ಯಾವ ಕಾಲದಲ್ಲಿ ಯಾವುದು ಬಯಸುತ್ತಾನೋ ಅದು ಆಗಿಯೇ ಆಗುತ್ತದೆ.2019  ನೇ ವರ್ಷ ಅಭಿವೃದ್ಧಿ ಗೆ ಮೀಸಲು. ಇದು ಅಭಿವೃದ್ಧಿಯ ಪರ್ವಕಾಲ.
ಈ ವರ್ಷ ಸುಬ್ರಹ್ಮಣ್ಯದಲ್ಲಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯ ಗಳಲ್ಲಿ ಅತಿ ದೊಡ್ಡ, ಬೃಹತ್ ಪ್ರಮಾಣ ದ ಅಭಿವೃದ್ಧಿ ಕಾರ್ಯಗಳಿವೆ. ಇದ ರಲ್ಲಿ ಮುಖ್ಯವಾಗಿ ದೇವಾಲಯಕ್ಕೆ ಕುಮಾರ ಧಾರದ ದ್ವಾರದಲ್ಲಿಂದ ಕಾಂಕ್ರೀಟ್ ಚುತುಸ್ಪಥ ರಸ್ತೆಯ ಕೆಲಸ ಸಾಗುತ್ತಿದೆ. ಅದು ಕಾಶಿಕಟ್ಟೆ ವರೆಗೆ ಚತುಷ್ಪಥ ವಾಗಿದ್ದು, ಕಾಶಿ ಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ಕ್ಕೆ ದ್ವಿಪಥದ ಕಾಂಕ್ರೀಟ್ ರಸ್ತೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿಯಿಂದ ಆದಿಸುಬ್ರಹ್ಮಣ್ಯಕ್ಕೆ ದ್ವಿಪಥದ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಲಿದೆ.
ದೇವಳದ ಬಲಭಾಗದ ಎಲ್ಲಾ ಹಳೆ ಕಟ್ಟಡಗಳು ತೆರವಾಗಲಿವೆ. ಛತ್ರ, ಕುಮಾರ ಕೃಪ ಹೋಟೆಲ್, ಪಿ.ಡ್ಯ್ಲೂ.ಡಿ ಅಫೀಸು, ವೇಣು ಅವರ ಚಿನ್ನದ ಅಂಗಡಿ ಗಳಿರುವ ಕಟ್ಟಡಗಳು ತೆರವಾಗಿರಳಿವೆ. ಅಲ್ಲದೆ ದೇವಳದ ಎಡಭಾಗದಲ್ಲಿ ಇರುವ ದಿನೇಶ್ ಬಿ.ಎನ್ ಅವರ ಚಿನ್ನದ ಅಂಗಡಿ, ಗ್ರಂಥಾಲಯ, ವಿಜಯ ಬ್ಯಾಂಕ್, ಸಂಪುಟ ನರಸಿಂಹ ಮಠದ ಕಟ್ಟಡನ್ನೊಳಗೊಂಡ ಆದರ್ಶ ಆಡಿಯೋ, ನಿತ್ಯ ನಿಕೇತನ, ನಿಯೋ ಮೈಸೂರು ಕೆಪೆ ಮುಂತಾದವುಗಳು ತೆರವಾಗಲಿವೆ. ದೇವಸ್ಥಾನದ ರಾಜಗೋಪುರದಿಂದ ರಥಬೀದಿಯ ಪೊಲೀಸ್ ಚೌಕಿ ವರೆಗೆ ಸಂಪೂರ್ಣ ಅಗಲೀಕರಣಗೊಂಡು ಮುಂದೊಂದು ದಿನ ಸುಮಾರು 100  ಅಡಿ ಅಗಲದಷ್ಟು ಇರಲಿದ್ದು ದೇವಾಲಯ ಇನ್ನಷ್ಟು ಎದ್ದು ಕಾಣಲಿದೆ.
ಸುಬ್ರಹ್ಮಣ್ಯ ದೇವಳಕ್ಕೆ ಸಮರ್ಪಣೆ ಆಗಲಿರುವ ಬ್ರಹ್ಮರಥ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಕುಂದಾಪುರದ ಕೋಟೇಶ್ವರದಲ್ಲಿ ರಥ ರಚನೆಯ ಕಾರ್ಯ ನಡೆಯುತ್ತಿದೆ. ಬ್ರಹ್ಮರಥಕ್ಕೆ ಮುತ್ತಪ್ಪ ರೈ ಅವರ ಕೊಡುಗೆ ಬಹುಪಾಲು ಇರಲಿದೆ.
ದೇವಸ್ಥಾನ ಮತ್ತು ಸಾರ್ವಜನಿಕ ರಿಂದ ಸಂಗ್ರಹಿಸಿ ಮಾಡುವ ಚಿನ್ನದ ರಥ ಈ ವರ್ಷ ಲೋಕಾರ್ಪಣೆಗೊಳ್ಳುವುದು ಬಹುತೇಕ ಖಚಿತ. ಇದಕ್ಕೆ ಈಗಾಗಲೆ ರಾಜ್ಯ ಸರ್ಕಾರದ ಸಂಪುಟ ಸಭೆಯ ನಿರ್ಣಯ ಮಾಡಿದ್ದು ಈ ಹಿಂದಿನ ನಿಗದಿ ಯಂತೆ ರಥ ರಚನೆಗೆ ಚಾಲನೆ ದೊರೆತಿದೆ ಎನ್ನಲಾಗಿದೆ.
ಶ್ರೀ ದೇವಳದ ಸುತ್ತುಗೋಪುರ ನವೀಕರಣ ಕಾಮಗಾರಿ ಇನ್ನಷ್ಟೆ ಆರಂಭ ವಾಗಲಿದೆ. ಶ್ರೀ ದೇವಳದ ಪುರುಷರಾಯ ಬೆಟ್ಟದಲ್ಲಿ ಪುರುಷರಾಯ, ಹೊಸಳಿಗಮ್ಮ, ಕಾಚುಕುಜುಂಬ, ಕೆಂಚಾರಾಯಿ, ಪೊಟ್ಟ ಪಂಜುರ್ಲಿ ಮುಂತಾದ ದೈವಸ್ಥಾನ ನೂತನವಾಗಿ ನಿರ್ಮಾಣವಾಗಲಿದೆ. ದೇವರ ಗದ್ದೆಯಲ್ಲಿರುವ ಆದಿಮುಗೇ ರ್ಕಳ, ಕೊರಗಜ್ಜ ದೈವಸ್ಥಾನ, ರಕ್ತೇಶ್ವರಿ ಕಟ್ಟೆ,, ಗುಳಿಗ ಕಟ್ಟೆ, ನಾಗನ ಕಟ್ಟೆ ಮುಂತಾ ದವುಗಳು ನಿರ್ಮಾಣವಾಗಲಿದೆ. ದೇವಳದಿಂದ ನಡೆಸಲ್ಪಡುವ ಶಾಲೆ, ಕಾಲೇಜು ಆಧುನಿಕತೆಯ ಸ್ಪರ್ಶ ಪಡೆಯುತ್ತಿದೆ.   ದೇವಳದ ಡಿ.ಗ್ರೂಪ್ ನೌಕರರಿಗೆ ಶಾಶ್ವತವಾಗಿ ಉಳಿದು ಕೊಳ್ಳಲು ವಸತಿಗೃಹಗಳು ತಲೆ ಎತ್ತಲಾರಂಬಿಸಿವೆ. ಆಧುನಿಕ ಮಾದರಿಯ ವಸತಿಗೃಹಗಳಿಗೆ ಕಟ್ಟಡ ಕೆಲಸ ಚಾಲನೆಯಲ್ಲಿದೆ. ಗೋಶಾಲೆ, ಲಿಫ್ಟ್, ರುದ್ರ ಭೂಮಿಯ ಕೆಲಸ, ದರ್ಪಣ ತೀರ್ಥ ನದಿಗೆ ತಡೆಗೋಡೆ, ಕಾಲ್ನಡಿಗೆ ಸೇತುವೆ, ಆನೆ ಮಾವುತರ ವಸತಿಗೃಹ, ನಕ್ಷತ್ರ ವನದ ನಿರ್ಮಾಣ, ಸರಕಾರಿ ಮಾದರಿ ಶಾಲೆಯ ಮರು ನಿರ್ಮಾಣ, ಆಧುನಿಕ ಶೈಲಿಯ ಶೌಚಾಲಯಗಳ ಕೆಲಸಗಳು ಭರದಿಂದ ಸಾಗುತ್ತಿದೆ.

ಬೆಳ್ಳಿರಥವೂ ಸುಬ್ರಹ್ಮಣ್ಯನ ಇಚ್ಚೆಯಾಗಲಿ


ಇನ್ನೊಂದು ನೆನಪಿಡಬಹುದಾದ ಕೆಲಸ ಆಗುವ ಲಕ್ಷಣ ಕಂಡು ಬಂದಿದೆ. ನಿತ್ಯಾನಂದ ಮುಂಡೋಡಿಯವರ ನೇತೃತ್ವದ ವ್ಯವಸ್ಥಾಪನಾ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಮಾಡುವ ಪ್ರಸ್ತಾವನೆಯೊಂದಿಗೆ ೧.೭೫ ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

ಪ್ರಗತಿಯಲ್ಲಿರುವ ಕೆಲಸ ಕಾರ್ಯಗಳು ಮತ್ತು ಅನುದಾನ
* ದೇವಳಕ್ಕೆ ಚಿನ್ನದ ರಥ 80 ಕೋಟಿ* ದೇವಳದ ಸುತ್ತುಗೋಪುರ ನವೀಕರಣ14 ಕೋಟಿ* ನೂತನ ಬ್ರಹ್ಮರಥ 1.99 ಕೋಟಿ* ಸರ್ಪಸಂಸ್ಕಾರ ಯಾತ್ರಾರ್ಥಿಗಳ ವಿಐಪಿ ಕೊಠಡಿ ಪಿಠೋಪಕರಣ 4.98  ಕೋಟಿ* ಪುರುಷರಾಯ ಬೆಟ್ಟದ ವಿವಿಧ ಕಾಮಗಾರಿಗೆ7.13 ಕೋಟಿ* ದೇವರಗದ್ದೆ ಆದಿಮುಗೇರ್ಕಳ ಮತ್ತು ಪರಿವಾರ ದೈವಗಳ ಕಾಮಗಾರಿಗೆ 22.7  ಲಕ್ಷ * ದೇವಳದ ನಕ್ಷತ್ರವನದ ಅಭಿವೃದ್ಧಿ 26.1 ಲಕ್ಷ* ಇಂಜಾಡಿ ಬಳಿ 200 ಕೊಠಡಿಗಳ ಅತಿಥಿ ಗೃಹ 176 ಕೋಟಿ (ಪ್ರಸ್ತಾವನೆಯಲ್ಲಿ )* ಇಂಜಾಡಿ ರುದ್ರ ಭೂಮಿ ನಿರ್ಮಾಣ, ದ್ವಾರ, ಇಂಟರ್ ಲಾಕ್, ಆವರಣ ಗೋಡೆ, ಶೌಚಾಲಯ 58.40 ಲಕ್ಷ * ಅಂಗಡಿ ಗುಡ್ಡೆ ಶಾಶ್ವತ ಪೆಂಡಾಲ್91 ಲಕ್ಷ (ಪಸ್ತಾವನೆಯಲ್ಲಿ)

ಈಗ ಕೈಗೊಂಡಿರುವ ರಸ್ತೆ ಕಾಮಗಾರಿಯ ಪಕ್ಷಿನೋಟ
68.60 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಾಲಾಗಿದ್ದು ಒಟ್ಟು 8.55 ಕಿ ಮೀ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ 2.46 ಕಿ.ಮಿ ರಸ್ತೆ, ದೇವಸ್ಥಾನದ ಅಧೀನದಲ್ಲಿರುವ 5.045 ಕಿ ಮೀ ಮತ್ತು ಪಂಚಾಯತ್‌ನ ೫೮೧ ಮೀ ಉದ್ದದ ರಸ್ತೆಗಳು ಇದರಲ್ಲಿವೆ. ರಾಜಗೋಪುರದಿಂದ ಪೊಲೀಸ್ ಚೌಕಿ ಉದ್ದ 165 ಮೀ, ಕಾಶಿಕಟ್ಟೆಯಿಂದ ಪೊಲೀಸ್ ಚೌಕಿ ತನಕದ ಉದ್ದ 264  ಮೀ, ಕುಮಾರಧಾರೆಯಿಂದ ಕಾಶಿಕಟ್ಟೆ ತನಕದ 1089 ಮೀ ಉದ್ದ, ಪೊಲೀಸ್ ಚೌಕಿಯಿಂದ ಪ್ರಶಾಂತ್ ರೆಸ್ಟೋರೆಂಟ್ ತನಕ 812  ಮೀ ಉದ್ದದ ರಸ್ತೆಗಳು ಅಭಿವೃದ್ಧಿಯಾಗಲಿವೆ. ಪೊಲೀಸ್ ಚೌಕಿ ಕಾಶಿಕಟ್ಟೆ ನಡುವೆ ೩೫೯ ಮೀ. ಅಕ್ಷರಾ ಗೆಸ್ಟ್ ಹೌಸ್ ಯಾಗಶಾಲೆ ನಡುವೆ 681  ಮೀ, ಯಾಗಶಾಲೆ ರಸ್ತೆ 124 ಮೀ, ಕಾಶಿಕಟ್ಟೆ-ಜನರಲ್ ಡಾರ್ಮಿಟರಿ ನಡುವೆ 124  ಮೀ, ಸ್ಕಂದಾಕೃಪ ಗೆಸ್ಟ್ ಹೌಸ್ ದೇವಸ್ಥಾನದ ಉತ್ತರ ಬಾಗಿಲು ವಿವಿಐಪಿ ಗೆಸ್ಟ್ ಹೌಸ್ ಎದುರು ೨೫೯ ಮೀ, ರಾಜಗೋಪುರದಿಂದ ವಿವಿಐಪಿ ಗೆಸ್ಟ್ ಹೌಸ್265  ಮೀ, ಅರಳಿಕಟ್ಟೆಯಿಂದ ದೇವರಗದ್ದೆ ತನಕ 284 ಮೀ, ದೇವಸ್ಥಾನದ ಉತ್ತರ ಬಾಗಿಲಿನಿಂದ ಜನರಲ್ ಡಾರ್ಮಿಟರಿ ತನಕ221 ಮೀ ಉದ್ದ, ಜನರಲ್ ಡಾರ್ಮಿಟರಿ ಸಂಪರ್ಕರಸ್ತೆ 82 ಮೀ, ಇಂಜಾಡಿ ವಿವಿಐಪಿ ಕಟ್ಟಡದ ರಸ್ತೆ 2583 ಮೀ ಉದ್ದ ಸೇರಿ ಒಟ್ಟು 5595  ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

ಸುಳ್ಯ ತಾಲೂಕಿನ ಎರಡು ದೇವಸ್ಥಾನದ ದತ್ತು
ಸುಳ್ಯ ತಾಲೂಕಿನ ಎರಡು ದೇವಸ್ಥಾನಗಳಾದ ಮುರುಳ್ಯ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಉಬರಡ್ಕ ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಾಲಯವನ್ನು ಈಗಾಗಲೇ ದತ್ತು ಪಡೆಯಲಾಗಿದ್ದು, ಅನುದಾನ ವಿನಿಯೋಗಿಸಲು ಪಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಕೆಲವೊಂದಕ್ಕೆ ಅನುಮತಿ ದೊರೆತಿದ್ದು ಟೆಂಡರ್ ಗೆ ಇಡಲಾಗಿದೆ. ಕೆಲವೊಂದು ಅನುಮತಿ ದೊರೆತು ಟೆಂಡರ್ ಇನ್ನಷ್ಟೆ ಆಗಬೇಕಾಗಿದೆ.

(ವರದಿ: ಶಿವರಾಮ ಕಜೆಮೂಲೆ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.