HomePage_Banner
HomePage_Banner

ನಗರ ಪಂಚಾಯತ್ ಚುನಾವಣಾ ಅಭ್ಯರ್ಥಿಗಳ ಪರಿಚಯ : ಹಳೆಗೇಟು 5 ನೇ ವಾರ್ಡ್: ಜಿ. ಬುದ್ಧ ನಾಯ್ಕ

ಬುದ್ಧ ನಾಯ್ಕರು ಮರಾಟಿ ನಾಯ್ಕ (ಪರಿಶಿಷ್ಠ ಪಂಗಡ) ಕುಟುಂಬದಲ್ಲಿ ದಿನಾಂಕ ೦೧/೦೬/೧೯೫೫ರಂದು ಈಶ್ವರ ನಾಯ್ಕ ಮತ್ತು ಶ್ರೀಮತಿ ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿದರು.

ಪ್ರಾಥಮಿಕ ಶಿಕ್ಷಣ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ನನ್ನ ಪ್ರೌಢ ಶಿಕ್ಷಣವನ್ನು ಪಂಜ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದು ನಂತರ ಟಿ.ಸಿ.ಹೆಚ್. ನ್ನು ಜೆ.ಎಸ್.ಎಸ್. ಕಾಲೇಜು ಮೈಸೂರಿನಲ್ಲಿ ಪೂರೈಸಿದ್ದು, ೧೯೮೫ರಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬೆಸಗೂರು ಶಾಲೆಯಲ್ಲಿ ಸಹ ಶಿಕ್ಷಕನಾಗಿ ಸರಕಾರಿ ನೌಕರಿಗೆ ಸೇರಿರುತ್ತೇನೆ. ನಂತರ ಸ.ಮಾ.ಪ್ರಾ. ಶಾಲೆ ತಿತಿಮತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಬಡ್ತಿ ಹೊಂದಿ ಮುಖ್ಯ ಶಿಕ್ಷಕನಾಗಿ ಮಡಿಕೇರಿ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಚೆಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲಿಗೆ ವರ್ಗಗೊಂಡು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿದಿರುತ್ತಾರೆ.

೨೦೦೧ ರಲ್ಲಿ ಪದವೀಧರೇತರ ಮುಖ್ಯಶಿಕ್ಷಕನಾಗಿ ಸ.ಮಾ.ಹಿ.ಪ್ರಾಥಮಿಕ ಶಾಲೆ ಸಂಪಾಜೆಗೆ ವರ್ಗಾವಣೆಗೊಂಡು ೨೦೧೫ರವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ನನಗೆ ’ಜನಮೆಚ್ಚಿದ ಶಿಕ್ಷಕ’ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಸಸ್ತಿ ಬಂದಿರುತ್ತದೆ. ಕೊಡಗು ಜಿಲ್ಲೆಯ ಉತ್ತಮ ಎಸ್.ಡಿ.ಎಮ್.ಸಿ. ಪ್ರಶಸ್ತಿ, ಹಸಿರು ಶಾಲೆ ಪ್ರಶಸ್ತಿ, (ಉಇu ಇಚಿ) ಸಂಪಾಜೆ ಸ್ವಚ್ಚ ಗ್ರಾಮ ರಾಷ್ಠ್ರೀಯ ಪ್ರಶಸ್ತಿ ಬರಲು ಸ್ಥಳೀಯ ಶಾಲೆಯ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕನಾಗಿ ಸುಮಾರು ೩೦ ವರ್ಷದ ಸೇವಾ ಅವಧಿಯಲ್ಲಿ ೨೦ ವರ್ಷ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿಸಿದ್ದಾರೆ. ಸಮಾಜ ಸೇವೆ. ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಜೀವ ಸದಸ್ಯನಾಗಿ, ಹಲವಾರು ವರ್ಷ ಉಪಾಧ್ಯಕ್ಷನಾಗಿ, ಕೋಶಾಧಿಕಾರಿಯಾಗಿ ಪ್ರಸ್ತುತ ತಾಲೂಕು ಸಂಘದ ಅಧ್ಯಕ್ಷನಾಗಿ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದಿರುತ್ತಾರೆ. ಅಲ್ಲದೇ ಸುಳ್ಯ ತಾಲೂಕು ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.