HomePage_Banner
HomePage_Banner
HomePage_Banner

ಜಯಂತಿ ಆರ್.ರೈ ನಾಮಪತ್ರ ಹಿಂತೆಗೆತ : ಬಿಜೆಪಿಗೆ ತಪ್ಪಿದ ಬಂಡಾಯದ ಬಿಸಿ

ಸುಳ್ಯ ನಗರ ಪಂಚಾಯತ್ ಚುನಾವಣೆಗೆ 20 ನೇ ವಾರ್ಡ್ ಕಾನತ್ತಿಲದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ನಗರ ಪಂಚಾಯತ್ ಸದಸ್ಯ ರಮಾನಂದ ರೈಯವರ ಪತ್ನಿ ಜಯಂತಿ ಆರ್. ರೈಯವರು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಳ್ಳುವುದರೊಂದಿಗೆ ಆ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಪ್ಪಿದೆ.


ಈ ವಾರ್ಡ್‌ನಿಂದ ಬಿಜೆಪಿ ಪ್ರಕಟಿಸಿದ ಅಧಿಕೃತ ಅಭ್ಯರ್ಥಿ ಆಯ್ಕೆಯ ಅಸಮಾಧಾನದಿಂದ ರಮಾನಂದ ರೈಯವರು ಪತ್ನಿಯನ್ನು ಬಂಡಾಯವಾಗಿ ಕಣಕ್ಕಿಳಿಸಿದ್ದರು. ಈ ಹಿನ್ನಲೆಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಅಂಗಾರ ಹಾಗೂ ಸುಳ್ಯದ ಬಿಜೆಪಿ ಮುಖಂಡರು ರಮಾನಂದ ರೈಯವರೊಂದಿಗೆ ಮಾತುಕತೆ ನಡೆಸಿದ್ದರು.

ನಾಮಪತ್ರ ಹಿಂತೆಗೆತ ದಿನವಾದ ಇಂದು ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮೊದಲಾದವರು ಸ್ಥಳದಲ್ಲಿದ್ದು, ಜಯಂತಿ ರೈಯವರ ಬರುವಿಕೆಗಾಗಿ ಕಾಯುತ್ತಿದ್ದರು. ನಾಮಪತ್ರ ಸಲ್ಲಿಕೆ ಹಿಂತೆಗೆತಕ್ಕೆ ಕೇವಲ 2  ನಿಮಿಷ ಬಾಕಿ ಇರುವಾಗ ಜಯಂತಿ ರೈಯವರು ಆಗಮಿಸಿ ನಾಮಪತ್ರ ವಾಪಾಸ್ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.