HomePage_Banner
HomePage_Banner

ನಾಯಕರ ಮಾತಿಗೆ ಸೊಪ್ಪು ಹಾಕದ ಬಂಡುಕೋರರು : ಕಾಂಗ್ರೆಸ್‌ಗೆ 4  ವಾರ್ಡ್‌ಗಳಲ್ಲಿ ಬಂಡಾಯದ ಬಿಸಿ

ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಟಿಕೆಟ್ ದೊರೆಯದ ಹಿನ್ನಲೆಯಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದ ಐವರು ಕಾಂಗ್ರೆಸ್ಸಿಗರ ಪೈಕಿ ಓರ್ವರು ಮಾತ್ರ ನಾಮಪತ್ರ ಹಿಂತೆಗೆದುಕೊಂಡಿದ್ದು, ನಾಲ್ವರು ಕಣದಲ್ಲಿ ಉಳಿದಿದ್ದಾರೆ.


3ನೇ ವಾರ್ಡ್ ಕೊಯಿಂಗೋಡಿ ಕುದ್ಪಾಜೆ ವಾರ್ಡ್‌ನಿಂದ ನವೀನ್ ಮಚಾದೋ, 6ನೇ ವಾರ್ಡ್ ಬೀರಮಂಗಲದಿಂದ ಅಬ್ದುಲ್ ರಹಿಮಾನ್ ಮೊಗರ್ಪಣೆ, 13 ನೇ ವಾರ್ಡ್ ಬೂಡಿನಿಂದ ರಿಯಾಝ್ ಕಟ್ಟೆಕ್ಕಾರ್, 15 ಏ ವಾರ್ಡ್ ನಾವೂರಿನಿಂದ ಅಬ್ದುಲ್ ಮಜೀದ್, 17 ನೇ ವಾರ್ಡ್ ಬೋರುಗುಡ್ಡೆಯಿಂದ ಆರ್.ಕೆ.ಮಹಮ್ಮದ್ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದರು. ಇವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ವಿನಂತಿಸಿದ್ದರು. ಈ ಪೈಕಿ ಅಬ್ದುಲ್ ಮಜೀದ್ ಮಾತ್ರ ನಾಮಪತ್ರ ಹಿಂತೆಗೆದುಕೊಂಡಿರುವುದರಿಂದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳನ್ನು ಎದುರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.