HomePage_Banner
HomePage_Banner
HomePage_Banner

ನಗರ ಪಂಚಾಯತ್ ಚುನಾವಣೆ : ಎಸ್‌ಡಿಪಿಐ 2 ಕಡೆ ಮಾತ್ರ ಸ್ಪರ್ಧೆ

ಸುಳ್ಯ ನಗರ ಪಂಚಾಯತ್ ಚುನಾವಣೆಗೆ 5 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದ ಎಸ್‌ಡಿಪಿಐ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ನಾಮಪತ್ರ ಹಿಂತೆಗೆದುಕೊಂಡಿದ್ದು, 2 ಕ್ಷೇತ್ರಗಳಲ್ಲಿ ಮಾತ್ರ ಉಮೇದ್ವಾರಿಕೆ ಹೊಂದಿದ್ದಾರೆ.


೬ನೇ ವಾರ್ಡ್ ಬೀರಮಂಗಲದಿಂದ ನಾಮಪತ್ರ ಸಲ್ಲಿಸಿದ್ದ ಮಹಮ್ಮದ್ ಮಿರಾಜ್ ನಾವೂರು, 16 ನೇ ವಾರ್ಡ್ ಕಾಯರ್ತೋಡಿಯಿಂದ ನಾಮಪತ್ರ ಸಲ್ಲಿಸಿದ್ದ ತಾಶಿಪಾ ಎಂ.ಕೆ., 17 ನೇ ವಾರ್ಡ್ ಬೋಡುಗುಡ್ಡೆಯಿಂದ ನಾಮಪತ್ರ ಸಲ್ಲಿಸಿದ್ದ ಮಹಮ್ಮದ್ ರಫೀಕ್ ನಾವೂರು ಮತ್ತು ಮಹಮ್ಮದ್ ಮುಸ್ತಫಾ ನಾಮಪತ್ರಗಳನ್ನು ವಾಪಾಸ್ ಪಡೆದಿದ್ದಾರೆ.
14 ನೇ ವಾರ್ಡ್ ಕಲ್ಲುಮುಟ್ಲುನಲ್ಲಿ ಜಯಹೈದತ್ ನಸ್ರೀಯಾ ಫೈಝಲ್, 15 ನೇ ವಾರ್ಡ್ ನಾವೂರಿನಲ್ಲಿ ಕೆ.ಎ.ಅಬ್ದುಲ್ ಕಲಾಂ ನಾವೂರು ಅವರು ಕಣದಲ್ಲಿ ಉಳಿದುಕೊಂಡಿದ್ದಾರೆ.
ಕಳೆದ ಬಾರಿ ಕಲ್ಲುಮುಟ್ಲು ವಾರ್ಡಿನಿಂದ ಎಸ್‌ಡಿಪಿಐನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಕೆ.ಎಸ್.ಉಮ್ಮರ್ ಈ ಬಾರಿ ಬೋರುಗುಡ್ಡೆ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.