HomePage_Banner
HomePage_Banner
HomePage_Banner

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಭೆ


ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಭೆಯು ಮೇ.20 ರಂದು ನಡೆಯಿತು.


ಎಸ್.ಐ.ಈರಯ್ಯರವರು ಮಾಹಿತಿ ನೀಡಿ ಮನೆ ಕಡೆ ಬರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ನಿಗಾ ಇಡುವಂತೆ ಹಾಗೂ ಅಪರಿಚಿತರು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು, ಚಿನ್ನ ಪಾಲಿಶ್ ಮಾಡುವವರು ಬಂದರೆ ಅವರಿಗೆ ಆಭರಣಗಳನ್ನು ಕೊಡದೆ ಜಾಗ್ರತೆ ವಹಿಸುವುದು, ಅಪರಿಚಿತ. ಪೋನ್ ಕರೆಗಳು ಬಂದು ಬ್ಯಾಂಕ್ ಅಕೌಂಟ್ ನಂಬರ್ ,ಎ.ಟಿ.ಎಂ ಕಾರ್ಡ್ ನಂಬರ್ ಇತ್ಯಾದಿಗಳನ್ನು ಕೇಳುವುದರ ಬಗ್ಗೆ ಅವರಿಗೆ ಯಾವುದೇ ಕಾರಣಕ್ಕೆ ನಂಬರ್ ಗಳನ್ನು ಕೊಡಬಾರದು ಇದರಿಂದ ಮೋಸ ಹೋಗುತ್ತಾರೆ ಎಂದು ಹೇಳಿದರು.
ಮನೆ ಮನೆಗಳಿಗೆ ಇತ್ತೀಚೆಗೆ ಹಾಸಿಗೆ ರಿಪೇರಿ ,ಗುಜುರಿಯವರು ಹೊರಗಡಯಿಂದ ಬರುತ್ತಿರುತ್ತಾರೆ ಅವರ ಬಗ್ಗರ ತುಂಬಾ ಎಚ್ಚರದಿಂದ ಇರಬೇಕು ಎಂದು ಹೇಳಿದರು.


ಮಹಿಳೆಯೋರ್ವರು ಅಕ್ರಮವಾಗಿ ಶರಾಬು ಬಾಟ್ಲಿಗಳನ್ನು ಮಾರುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದರು.
ಹಿರಿಯ ನಾಗರಿಕರ ಗುರುತಿನ ಚೀಟಿಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಯಿತು.
ವೇದಿಕೆಯಲ್ಲಿ ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಹಲವು ಜನ ಹಿರಿಯ ನಾಗರಿಕರು ಸಭೆಯಲ್ಲಿ ಹಾಜರಿದ್ದರು.
ಠಾಣೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.