HomePage_Banner
HomePage_Banner

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರ್ ಕುಂಞಿ ಅಹಮ್ಮದ್‌ರಿಗೆ ಸನ್ಮಾನ

ಕಾರ್ಯಕ್ರಮವು ತಾಲೂಕು ಕಛೇರಿಯಲ್ಲಿ ಮೇ. 20 ರಂದು ನಡೆಯಿತು. ಪಿ.ಸುಂದರ ಪಾಟಾಜೆಯವರು ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕುದ್ಪಾಜೆ ನಿವಾಸಿಗಳಿಗೆ ಸುಮಾರು 4೦ ವರ್ಷಗಳಿಂದ ರಸ್ತೆ ಹಾಗೂ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಪರದಾಡುತ್ತಿದ್ದು ಸುಳ್ಯ ಮೀಸಲಾತಿ ಕ್ಷೇತ್ರವಾಗಿದ್ದು ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಆಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯವರು ಮಾನ್ಯ ತಹಶೀಲ್ದಾರರಿಗೆ ತಿಳಿಸಿ ತಹಶೀಲ್ದಾರರು ಬಂದು ರಸ್ತೆ ಹಾಗೂ ನೀರು ವಿದ್ಯುತ್ ಹಾಗೂ ಮೂರು ಮನೆ ಹಾಗೂ ತಂದೆಯಿಲ್ಲದ ಎರಡು ಹೆಣ್ಣುಮಕ್ಕಳಿಗೆ ಉದ್ಯೋಗವನ್ನು ಮೂರೇ ದಿನದಲ್ಲಿ ಎಲ್ಲಾ ಮೂಲಭೂತ ಸೌಕರ್ಯವನ್ನು ಮಾಡಿಕೊಟ್ಟ ಪರಿಶಿಷ್ಟ ಜಾತಿ ಬಡಕುಟುಂಬದವರ ಕಣ್ಣೀರನ್ನು ಒರೆಸಿದಂತಹ ದಕ್ಷ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಂತಹ ಮಾನ್ಯ ತಹಶೀಲ್ದಾರರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ  ಜಗದೀಶ್ ಉದ್ದಂಪಾಡಿ ಹಾಗೂ ಕುದ್ಪಾಜೆ ನಿವಾಸಿಗಳಾದ ಶಶಿಕುಮಾರ್, ಸುಮಿತ್ರಾ, ಸಂಧ್ಯಾ, ಗಣೇಶ, ಪ್ರವೀಣ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.