HomePage_Banner
HomePage_Banner
HomePage_Banner

ವಿಠಲ ಗೌಡ ನೀರಬಸಿರು ನಿಧನ

ಜಾಲ್ಸೂರು ಗ್ರಾಮದ ಕುಕ್ಕಂದೂರು ಖಂಡಿಗೆ ನಿವಾಸಿ, ವಿಠಲ ಗೌಡ ನೀರಬಸಿರು ಅಲ್ಪಕಾಲದ ಅಸೌಖ್ಯದಿಂದ ಮೇ. ೨೦ರಂದು ನಿಧನರಾದರು.

ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಕುಕ್ಕಂದೂರು ಕಿನ್ನಿಮಾಣಿ, ಪೂಮಾಣಿ ದೈವಸ್ಥಾನದ ಪೂಜಾರಿಯಾಗಿ, ಪ್ರಸಿದ್ಧ ನಾಟಿವೈದ್ಯರಾಗಿ ಸೇವೆ ಸಲ್ಲಿಸಿದ ಇವರು ಸೋಣಂಗೇರಿಯಲ್ಲಿ ಶ್ರೀಕೃಷ್ಣ ಯಕ್ಷಗಾನ ಮಂಡಳಿ ಎಂಬ ಯಕ್ಷಗಾನ ಮೇಳ ಕಟ್ಟಿಕೊಂಡು ಭಾಗವತರಾಗಿ, ಮೂರು ವರ್ಷ ಅದರ ಅಧ್ಯಕ್ಷರಾಗಿ ದುಡಿದಿದ್ದರು. ಊರುಗೌಡರಾಗಿಯೂ ಜನಾನುರಾಗಿಯಾಗಿದ್ದು, ಮೀಸೆಗೌಡ್ರು ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ಜಾಲ್ಸೂರಿನಲ್ಲಿ ನಡೆದ ಅರೆಭಾಷೆ ವಿಚಾರ ಸಂಕಿರಣ ಮತ್ತೆ ಸಾಂಸ್ಕೃತಿಕ ಗೌಜಿ ಕಾರ್ಯಕ್ರಮದಲ್ಲಿ ತಮ್ಮ ಅನನ್ಯ ಸೇವೆಗಾಗಿ ಸನ್ಮಾನ ಪಡೆದಿದ್ದರು.
ಮೃತರು ಪತ್ನಿ ತಾರಾವತಿ, ಪುತ್ರ ಶಿವಪ್ರಸಾದ್, ಸೊಸೆ ನಮಿತಾ ಶಿವಪ್ರಸಾದ್, ಪುತ್ರಿಯರಾದ ರವಿಕಲಾ ವೆಂಕಪ್ಪ ಪಾಲಾರು, ಚಂದ್ರಕಲಾ ರಾಘವ ಕೆದಿಕ್ಕಾನ, ಜಯಲತಾ ಪುರುಷೋತ್ತಮ ನೆಲ್ಲಿಗದ್ದೆ, ನಿವೇದಿತಾ ವಸಂತ್ ಕೋನಡ್ಕ ಪದವು, ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.