ಸುಳ್ಯ ಎನ್ನೆಂಪಿಯುಸಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾರಂಭೋತ್ಸವ ಕಾರ್‍ಯಕ್ರಮ

Advt_Headding_Middle
Advt_Headding_Middle
Advt_Headding_Middle

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲುಗೊಂಡ ವಿದ್ಯಾರ್ಥಿಗಳಿಗೆ ಪ್ರಾರಂಭೋತ್ಸವ ಕಾರ್‍ಯಕ್ರಮ ನಡೆಯಿತು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಎ.ಓ.ಎಲ್.ಇ(ರಿ) ಸುಳ್ಯ ಇದರ ನಿರ್ದೇಶಕರಾದ ಶ್ರೀಮತಿ. ಶೋಭಾ ಚಿದಾನಂದರವರು ದೀಪ ಬೆಳಗಿಸಿ ಕಾರ್‍ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಶ್ರೀಮತಿ ವಿಜಯ ಸರಸ್ವತಿಯವರು ಮಾತನಾಡಿ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು,ವಿದ್ಯಾರ್ಥಿಗಳು ,ಹೆತ್ತವರು ತ್ರಿಕೋನ ವ್ಯವಸ್ಥೆ ಇದ್ದ ಹಾಗೆ ಇದು ಕಳಚಿ ಹೋದಲ್ಲಿ ಸಮಾಜಕ್ಕೆ ಅಪಾಯವಿದೆ ಎಂದರು. ಸಂಸ್ಥೆಯ ಆಸ್ತಿಗಳಾದ ವಿದ್ಯಾರ್ಥಿಗಳು ಏಕಾಗ್ರತೆ ಬದ್ದತೆ,ಆತ್ಮ ವಿಶ್ವಾಸದಿಂದ ಇರಬೇಕು. ವಿದ್ಯಾರ್ಥಿಗಳು ಸವಾಲು ಒತ್ತಡಗಳನ್ನು ಎದುರಿಸಬೇಕು ಗುರಿ ಸ್ಪಷ್ಟ ಇದ್ದಾಗ ಕ್ರಮಿಸುವ ಹಾದಿ ಸರಿ ಇರುತ್ತದೆ ಎಂದರು .ಹೆತ್ತವರ ನಡೆ-ನುಡಿ ಆಚಾರ ವಿಚಾರಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ.ಮಕ್ಕಳನ್ನು ಪ್ರೀತಿಸಿ & ಅರಿತು ಕೊಳ್ಳಿ ಸಮರ್ಥ ಮಾರ್ಗದರ್ಶನ ನೀಡಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾರ್‍ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ.ಜಗದೀಶ್ ಅಡ್ತಲೆ, ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ.ಡಿ.ಜವರೇ ಗೌಡ , ಎನ್ನೆಂಸಿ ಗೌರವ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ.ಬಾಲಚಂದ್ರ ಗೌಡ, ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ , ವಿ.ಕ್ಷೇಮಾಧಿಕಾರಿ ಶ್ರೀ.ಲಕ್ಷ್ಮಣ್ ಏನೇಕಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿ ಪ್ರಥಮ ಪಿಯುಸಿಗೆ ದಾಖಲುಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿನಿಯರಾದ ನಂದಿತ,ಚರೀಷ್ಮ,ಅಕ್ಷತ, ಅನಘ, ವಿಸ್ಮಿತ ಪ್ರಾರ್ಥಿಸಿದರು.ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ.ದಾಮೋದರ ಪಿ, ಶ್ರೀಮತಿ ಸಾವಿತ್ರಿ ಕೆ,ಕು.ಬೇಬಿ ವಿದ್ಯಾ .ಪಿ.ಬಿ ,ವಿವಿಧ ಕಾರ್‍ಯಕ್ರಮಗಳನ್ನು ನಿರ್ವಹಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀ.ಲಕ್ಷ್ಮಣ್ ಏನೇಕಲ್ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್‍ಯಕ್ರಮದ ಬಳಿಕ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ನೀತಿ ನಿಯಮಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸಲಾಯಿತು. ಪ್ರಾಂಶುಪಾಲರು ಈ ಕಾರ್‍ಯಕ್ರಮವನ್ನು ನಡೆಸಿಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.