HomePage_Banner
HomePage_Banner
HomePage_Banner
HomePage_Banner

ಮೋದಿ ಪ್ರಮಾಣವಚನ : ಐವರ್ನಾಡಿನಲ್ಲಿ ಸಂಭ್ರಮಾಚರಣೆ


ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದಿನವಾದ ಮೇ.30 ರಂದು ಐವರ್ನಾಡು ಪೇಟೆಯಲ್ಲಿ ಬಿ.ಜೆ.ಪಿ‌ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರು ಮಾತನಾಡಿ ನರೇಂದ್ರ ಮೋದಿಯವರು ಪ್ರಬಲವಾದ ನಾಯಕತ್ವದಿಂದ ಭ್ರಷ್ಟಾಚಾರ ರಹಿತ 5 ವರ್ಷಗಳ ಆಡಳಿತ ನಡೆಸಿ 2 ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನಮಗೆಲ್ಲ ಅತ್ಯಂತ ಖುಷಿ ತಂದಿದೆ. ಅತ್ಯಧಿಕ ಮತಗಳಿಂದ ಸಂಸದರನ್ನು ಆಯ್ಕೆ ಮಾಡಲು ಪ್ರಯತ್ನಿಸಿ ಯಶಸ್ವಿಯಾದ ನಮ್ಮ ಗ್ರಾಮದ ಮತದಾರರಿಗೆ ಹಾಗೂ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


ನಂತರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಲಘು ಉಪಾಹಾರ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚೈತ್ರಾ ಶಿವಪ್ರಸಾದ್ ಕಟ್ಟತ್ತಾರು,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಎ.ಪಿ.ಎಂ.ಸಿ.ನಿರ್ದೇಶಕ ನವೀನ್ ಕುಮಾರ್ ಸಾರಕರೆ, ಗ್ರಾಮ ಪಂಚಾಯತ್ ಸದಸ್ಯರಾದ ಶಾಂತರಾಮ ಕಣಿಲೆಗುಂಡಿ, ಶ್ರೀಮತಿ ಸುಜಾತ ಪವಿತ್ರಮಜಲು, ಶ್ರೀಮತಿ ರಾಜೀವಿ ಲಾವಂತಡ್ಕ, ದೇವಿಪ್ರಸಾದ್ ಎನ್.ಎಸ್.,ಸಹಕಾರಿ ಸಂಘದ ನಿರ್ದೇಶಕ ರಾದ ಕಿಶನ್ ಕುಮಾರ್ ಜಬಳೆ,ರವಿನಾಥ ಎಂ.ಎಸ್. ಅನಂತಕುಮಾರ್ ಖಂಡಿಗೆಮೂಲೆ, ಕುಸುಮಾಧರ ಮಡ್ತಿಲ,ಹಾಗೂ ಮಾಧವ ಭಟ್ ಶೃಂಗೇರಿ, ರಾಜಾರಾಮ ರಾವ್ ಉದ್ದಂಪಾಡಿ,ನಟರಾಜ ಸಿ.ಕೂಪ್,ಶಿವರಾಮ ಮಡ್ತಿಲ,ಶೇಖರ ಮಡ್ತಿಲ,ಸುಂದರಲಿಂಗಂ,ಪ್ರದೀಪ್ ಪಾಲೆಪ್ಪಾಡಿ,ಚಿದಾನಂದ ಬಾಂಜಿಕೋಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.