ಬಾಲಚಂದ್ರ ಕಳಗಿ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

Advt_Headding_Middle
Advt_Headding_Middle
Advt_Headding_Middle

ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಬಾಲಚಂದ್ರ ಕಳಗಿಯವರ ಸವಿ ನೆನಪಿಗಾಗಿ ಸಂಪಾಜೆಯಲ್ಲಿ ಉಚಿತ ರಕ್ತದಾನ ಶಿಬಿರವು ಜೂ. 1 ರಂದು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

 ಬಾಲಚಂದ್ರ ಕಳಗಿಯವರ ಜ್ಞಾಪಕಾರ್ಥವಾಗಿ ಅವರ ಅಭಿಮಾನಿ ಬಳಗದವರು ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್ ಅಧ್ಯಕ್ಷತೆಯಲ್ಲಿ ನೆರವೇರಿಸಿದರು, ಬಾಲಚಂದ್ರ ಕಳಗಿಯವರ ತಂದೆ ವೆಂಕಪ್ಪ ಕಳಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯಾಧಿಕಾರಿಗಳಾದ ಡಾ| ಜಿ.ಕೆ.ಸುಬ್ರಮಣ್ಯ ಭಟ್ , ಮಡಿಕೇರಿ ಜಿಲ್ಲಾ ಆರೋಗ್ಯ ಕೇಂದ್ರದ ತಾಲೂಕು ಅಧಿಕಾರಿಗಳಾದ ಡಾ|ಶಿವಕುಮಾರ್, ಡಾ| ಕರಂಬಯ್ಯ, ರಕ್ತ ನಿಧಿ ಘಟಕ, ವೈದ್ಯಕೀಯ ಕಾಲೇಜು ಮಡಿಕೇರಿ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ| ವಿನುತ್ ಹೆಚ್.ಎಸ್, ಉದ್ಭವ ಟ್ರಸ್ಟ್ ನ ವ್ಯವಸ್ಥಾಪಕರಾದ  ಶಿವಕುಮಾರ್, ಬಿ.ಜೆ.ಪಿ ಸ್ಥಾನಿಯ ಸಂಪಾಜೆ ಅಧ್ಯಕ್ಷರಾದ ಮಾಯಿಲಪ್ಪ ಮೂಲ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಕಳಗಿಯವರ ಪತ್ನಿ ರಮಾದೇವಿ, ರಾಜಾರಾಮ್ ಕಳಗಿ, ನಳಿನಿ ರಾಜಾರಾಮ್ ಕಳಗಿ, ಸಂಪಾಜೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಸುಂದರ್ ಬಿಸಲುಮನೆ, ಸಂಪಾಜೆ ಪಯಶ್ವಿನಿ ಬ್ಯಾಂಕಿನ ಉಪಾಧ್ಯಕ್ಷರಾದ ದಯಾನಂದ ಪನೇಡ್ಕ, ನಿರ್ದೇಶಕರಾದ ರಮಾನಂದ ಬಾಳಕಜೆ ಮತ್ತು ತೀರ್ಥಪ್ರಸಾದ್ ಕೋಲ್ಚಾರ್, ಚೆಂಬು ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷರಾದ ತೀರ್ಥರಾಮ ಪೂಜಾರಿಗದ್ದೆ, ವಿಶ್ವ ಹಿಂದೂ ಪರಿಷತ್ ಚೆಂಬು ಘಟಕದ ಸಂಚಾಲಕ ವಿಜಯ್ ನಿಡಿಂಜಿ ಭಾಗವಹಿಸಿದ್ದರು.

ಸ್ವಾಗತ ಭಾಷಣವನ್ನು ಪುರುಷೋತ್ತಮ ಬಾಳೆಹಿತ್ಲು ನೆರವೇರಿಸಿದರು, ಕಾರ್ಯಕ್ರಮದಲ್ಲಿ ಮೌನಾಚಾರಣೆಯನ್ನು ಮಾಡುವ ಮೂಲಕ ಅಪಾರ ಅಭಿಮಾನಿಗಳು ಮತ್ತು ಬಂಧು ಮಿತ್ರರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಅಪಾರ ಅಭಿಮಾನಿ ಮಿತ್ರರು ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಅಭಿಮಾನ ಮೆರೆದರು, ಕಾರ್ಯಕ್ರಮಕ್ಕೆ ಕೊಡಗು ಬಿ.ಜೆ.ಪಿ ಜಿಲ್ಲಾಧ್ಯಕ್ಷರು ಭಾರತೀಶ್ ರವರು ಬಂದು ಶುಭಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.