HomePage_Banner
HomePage_Banner
HomePage_Banner
HomePage_Banner

ಜೂ. 7 ರಂದು ಪುತ್ತೂರಿನಲ್ಲಿ ಅಂಚೆ ಅದಾಲತ್

ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಜೂ. 7  ರಂದು 11.00 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ ಹಾಗೂ ಸುಳ್ಯ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು.
ದೂರುಗಳನ್ನು ಅಥವಾ ಸಲಹೆಗಳನ್ನು ಕಳುಹಿಸಲಿಚ್ಛಿಸುವ ಸಾರ್ವಜನಿಕರು ಬರಹ ಮೂಲಕ ಜೂ.5 ನೇ ತಾರೀಕಿನೊಳಗೆ ತಲುಪುವಂತೆ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು (ದ.ಕ) ವಿಭಾಗ, ಪುತ್ತೂರು – 574201 ಇವರಿಗೆ ’ಅಂಚೆ ಅದಾಲತ್‌ನಲ್ಲಿ ವಿಚಾರಣೆಗೆ’ ಎಂಬ ಮೇಲ್ಬರಹ ಹೊಂದಿದ ಲಕೋಟೆಯಲ್ಲಿ ಕಳುಹಿ ಸಬಹುದು. ಅಲ್ಲದೆ ಜೂ.7 ರಂದು 11.00 ಗಂಟೆಗೆ ಕಛೇರಿಯಲ್ಲಿ ಹಾಜರಿದ್ದರೆ ಸಮಕ್ಷಮ ಪರಿಶೀಲಿಸಲು ಅನುಕೂಲವಾಗುವುದು ಎಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.