ನಗರ ಪಂಚಾಯತ್ ಆವರಣದಲ್ಲಿ ರಾಶಿ ಹಾಕಿದ ಕಸ ಶಿಫ್ಟ್ ಮಾಡಲು ಸಚಿವರ ಸೂಚನೆ

Advt_Headding_Middle
Advt_Headding_Middle
Advt_Headding_Middle


ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ರಾಶಿ ಹಾಕಲಾಗಿರುವ ಕಸದ ರಾಶಿಯನ್ನು ಶೀಘ್ರವೇ ಸ್ಥಳಾಂತರಿಸಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜೂ. 1ರಂದು ಸುಳ್ಯ ತಾ.ಪಂ. ಕಚೇರಿಯಲ್ಲಿ ಪ್ರಕೃತಿ ವಿಕೋಪ ಮತ್ತು ಕುಡಿಯುವ ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಚಿವರ ಗಮನಕ್ಕೆ ಪತ್ರಕರ್ತರು ನ.ಪಂ. ಆವರಣದಲ್ಲಿ ಕಸ ರಾಶಿ ಹಾಕಿರುವ ಕುರಿತು ಹೇಳಿದರಲ್ಲದೆ ಭೇಟಿ ನೀಡುವಂತೆ ವಿನಂತಿಸಿಕೊಂಡರು. ಸಭೆ ಮುಗಿದ ಬಳಿಕ ಸಚಿವರು ಶಾಸಕ ಅಂಗಾರರೊಂದಿಗೆ ತಾ.ಪಂ.ನಿಂದ ನಡೆದುಕೊಂಡೇ ನಗರ ಪಂಚಾಯತ್‌ಗೆ ಬಂದರು. ನಗರ ಪಂಚಾಯತ್‌ನ ಎದುರು ಶೆಡ್‌ನಲ್ಲಿ ಕಸವನ್ನು ರಾಶಿ ಹಾಕಿದ್ದುದನ್ನು ಕಂಡ ಸಚಿವರು ಸ್ಥಳದಲ್ಲಿದ್ದ ಇಂಜಿನಿಯರ್ ಶಿವಕುಮಾರ್‌ರನ್ನು ಪ್ರಶ್ನಿಸಿದರು. ಆಗ ಇಂಜಿನಿಯರ್ ಶಿವಕುಮಾರ್ ನಗರದ ಕಸವನ್ನು ಇಲ್ಲಿ ತಂದು ಹಾಕಿ ಬೇರ್ಪಡಿಸಿದ ಬಳಿಕ ಪ್ಲಾಸ್ಟಿಕ್ ಮಾತ್ರ ಇಲ್ಲಿ ಇಡಲಾಗುತ್ತಿದೆ ಎಂದು ಹೇಳಿದರು.

ಆಗ ಸಚಿವರು ಇದು ಸರಿಯಾದ ವ್ಯವಸ್ಥೆಯಲ್ಲ, ಮೊದಲು ನೀವು ಇಲ್ಲಿಂದ ಕಸವನ್ನು ಸ್ಥಳಾಂತರಿಸಿ. ಈ ಹಿಂದೆ ಎಲ್ಲಿ ಹಾಕುತ್ತಿದ್ದಿರೋ ಅಲ್ಲಿಗೆ ಕೊಂಡು ಹೋಗಿ. ಈ ರೀತಿ ಸೊಳ್ಳೆ, ನೊಣಗಳು ನಗರ ಪ್ರದೇಶದಲ್ಲಿ ತುಂಬಿಕೊಂಡಿದ್ದರೆ ಹೇಗೆ? ಇದನ್ನೆಲ್ಲಾ ನಾವು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು. ಆಗ ಶಿವಕುಮಾರ್‌ರವರು ತ್ಯಾಜ್ಯವನ್ನು ಹಾಕಲು ಜಾಗದ ಕೊರತೆ ಇದೆ ಎಂದು ಸಚಿವರ ಗಮನಕ್ಕೆ ತಂದರು. ಅಲ್ಲೇ ಇದ್ದ ಶಾಸಕರು ಮೊದಲು ಈ ರೀತಿ ರಾಶಿಹಾಕುವುದನ್ನು ನಿಲ್ಲಿಸಿ, ಈ ಹಿಂದೆ ಕೊಂಡು ಹೋಗುತ್ತಿದ್ದಲ್ಲಿಗೆ ಶಿಫ್ಟ್ ಮಾಡಿ ಬೇರ್ಪಡಿಸಿ ಎಂದು ಹೇಳಿದರು. ಯಾವುದೇ ಕಾರಣಕ್ಕೂ ನ.ಪಂ. ಆವರಣದಲ್ಲಿ ಕಸ ರಾಶಿ ಹಾಕಬಾರದು ಎಂದು ಸಚಿವರು ಅಧಿಕಾರಿಗೆ ಖಡಕ್ ಸೂಚನೆ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.