ಉದ್ಭವ ಕ್ಷೇತ್ರ ಬರೆಮೇಲಿನಲ್ಲಿ ಜಲಕ್ಷಾಮದಲ್ಲೂ ಉಕ್ಕೇರುತ್ತಿರುವ “ಗೌರಿ” ತೀರ್ಥ

Advt_Headding_Middle
Advt_Headding_Middle
Advt_Headding_Middle

ತೀರ್ಥಕ್ಷೇತ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಐವರ್ನಾಡು ಗ್ರಾಮದ ಉದ್ಭವ ಬರೆಮೇಲು ಶ್ರೀ ಮಹಾಕಾಳಿ ಕ್ಷೇತ್ರದಲ್ಲಿ ಈ ಜಲಕ್ಷಾಮದ ಹೊತ್ತಿನಲ್ಲೂ ಗೌರಿ ತೀರ್ಥ ನಿರಂತರವಾಗಿ ಹರಿದುಬರುತ್ತಿದೆ. ಅತೀ ಪುರಾತನವಾದ ಆದಿಶಕ್ತಿ ಮಹಾಕಾಳಿಯ ದಕ್ಷಿಣದ ಶಕ್ತಿ ಪೀಠವೆಂದೇ ಪರಿಗಣಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಬರೆಮೇಲಿನ ಪಕ್ಕದ ಗುಡ್ಡದ ತುದಿಯಿಂದ ಹರಿದುಬರುತ್ತಿರುವ ಪರಿಶುದ್ಧ ನೀರ ಧಾರೆಗೆ ಗೌರಿ ತೀರ್ಥವೆಂದು ಹೆಸರಿರಿಸಲಾಗಿದ್ದು, ಈ ನೀರ ಧಾರೆ ಬರೆಮೇಲಿನ ದೇವ ಸಾನಿಧ್ಯದ ಎದುರಿಗೆ ಬಂದು ಬೀಳುವಂತೆ ವ್ಯವಸ್ಥೆ ರೂಪಿಸಲಾಗಿದೆ. ದಿನದ 24 ಗಂಟೆ-ವರ್ಷದ 365 ದಿನವೂ ನಿರಂತರ ಧುಮ್ಮುಕ್ಕುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರು ಬತ್ತಿ ಬರಿದಾಗುತ್ತಿರುವ ಕಾಲದಲ್ಲೂ “ಗೌರಿ ತೀರ್ಥವು”, ತನ್ನ ಹರಿವಿನ ಸಾಂದ್ರತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ, ಅಂದಾಜು ಅರ್ಧ ಇಂಚಿನಷ್ಟು, ದಿನ ಒಂದಕ್ಕೆ 9 ಸಾವಿರ ಲೀಟರನಷ್ಟು ಹರಿದು ಬರುತ್ತಿದೆ. ಶ್ರೀ ಕ್ಷೇತ್ರದ ಕಾರಣಿಕ ಶಕ್ತಿಯ ಬಗ್ಗೆ ಭಕ್ತಾದಿಗಳು ಪುಳಕಿತಗೊಂಡು ಶ್ರೀ ಕ್ಷೇತ್ರದ ಕಡೆಗೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ಬಾಟಲಿಗಳಲ್ಲಿ “ಗೌರಿ ತೀರ್ಥ” ತುಂಬಿಸಿಕೊಳ್ಳುತ್ತಿರುವ ದೃಶ್ಯ ದಿನನಿತ್ಯ ಕಾಣಬಹುದಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.