HomePage_Banner
HomePage_Banner
HomePage_Banner
Breaking News

ಉಬರಡ್ಕ ರಸ್ತೆ ಕಾಮಗಾರಿ : ಪಿಡಬ್ಲ್ಯುಡಿ ಎಇಇ ವೀಕ್ಷಣೆ


ಉಬರಡ್ಕ ರಸ್ತೆಯ ಅಗಲೀಕರಣದ ವೇಳೆ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಸ್ಥಳೀಯ ಯುವಕರು ಆರೋಪಿಸಿದ ಮೇರೆಗೆ ಸುಳ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಣ್ಣೇ ಗೌಡರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆಬಂದು ಪರಿಶೀಲನೆ ನಡೆಸಿ ಕಾಮಗಾರಿ ಸರಿಪಡಿಸದಿದ್ದರೆ ಕೆಲಸ ಮುಂದುವರೆಸಲು ಬಿಡುವುದಿಲ್ಲವೆಂದು ಸ್ಥಳೀಯ ಯುವಕರಾದ ಅನಿಲ್ ಬಳ್ಳಡ್ಕ, ಓಂ ಪ್ರಕಾಶ್, ವಿದ್ಯಾಧರ ಹರ್ಲಡ್ಕ ಮತ್ತಿತರರು ಪಟ್ಟುಹಿಡಿದ ಹಿನ್ನಲೆಯಲ್ಲಿ ಪಿಡಬ್ಲ್ಯುಡಿ ಎಇಇ ಸಣ್ಣೇ ಗೌಡರು ಸ್ಥಳಕ್ಕೆ ಭೇಟಿ ನೀಡಿದರು. ಸೂಂತೋಡು, ನೈಯೋಣಿ, ಮಾಡದ ಬಳಿ ಮೊದಲಾದೆಡೆ ಕಾಮಗಾರಿ ಪರಿಶೀಲಿಸಿದ ಅವರು ಕೆಲವು ಸಲಹೆ ಸೂಚನೆಗಳನ್ನು ಗುತ್ತಿಗೆ ದಾರರಿಗೆ ನೀಡಿದರೆಂದು ತಿಳಿದು ಬಂದಿದೆ.

ಕಲ್ಲು ಕಟ್ಟದೆ ತಡೆಗೋಡೆ : ಸಮರ್ಥಿಸಿದ ಎಂಜಿನಿಯರ್
ಸೂಂತೋಡು ಬಳಿ ರಸ್ತೆ ಬದಿ ತಡೆಗೋಡೆ ಕಟ್ಟುವಾಗ ಕರ್ಗಲ್ಲಿನ ಅಡಿಪಾಯ ಹಾಕದೆಯೇ ಹೊಳೆಯ ಚರಳು-ಮರಳು ಬಳಸಿ ಕಾಂಕ್ರೀಟ್ ಗೋಡೆ ಕಟ್ಟುತ್ತಿರುವುದನ್ನು ಎಂಜಿನಿಯರ್ ಸಣ್ಣೇ ಗೌಡರು ಸಮರ್ಥಿಸಿದರೆಂದು ತಿಳಿದು ಬಂದಿದೆ. ಪಿಲ್ಲರ್ ಮಾಡುವಂತದ್ದು ಎಸ್ಟಿಮೇಟ್ ನಲ್ಲಿ ಇಲ್ಲ ಎಂದು ಅವರು ಹೇಳಿದರೆಂದೂ, ಎಸ್ಟಿಮೇಟ್ ತೋರಿಸುವಂತೆ ಸ್ಥಳೀಯ ಯುವಕರು ಕೇಳಿದಾಗ, ಅದನ್ನು ತೋರಿಸಲಾಗುವುದಿಲ್ಲ ನೀವು ಮಾಹಿತಿ ಹಕ್ಕು ಪ್ರಕಾರ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದು ಹೇಳಿದರೆಂದೂ ಯುವಕರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.