HomePage_Banner
HomePage_Banner

ಆಲೆಟ್ಟಿ ದೋಣಿಮೂಲೆಯ ಯುವಕನ ಮೃತದೇಹ ಪತ್ತೆ: ಜಾರಿ ಬಿದ್ದು ಮೃತಪಟ್ಟ ಶಂಕೆ

 

ಆಲೆಟ್ಟಿ ಗ್ರಾಮದ ದೋಣಿಮೂಲೆ ದಿ.ಜಯಂತ ನಾಯಕ್ ರವರ ಪುತ್ರ ಪ್ರಕಾಶ್ ದೋಣಿಮೂಲೆ ಎಂಬವರ ಮೃತದೇಹ ಜೂ.5 ರಂದು ದೋಣಿಮೂಲೆಯಲ್ಲಿರುವ ಅವರ ಮನೆಯ ಜಮೀನಿನಲ್ಲಿ ಪತ್ತೆಯಾಗಿದೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.
ಈ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು ದಿನಂಪ್ರತಿ ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ಸಮಯದಲ್ಲಿ ಮನೆಗೆ ಬರುತ್ತಿದ್ದರು. ಮನೆಯಲ್ಲಿ ತಾಯಿ ಮಾತ್ರ ಇರುತ್ತಿದ್ದರು. ಜೂ.3 ರಂದು ಕೆಲಸಕ್ಕೆ ಹೋದ ಪ್ರಕಾಶ್ ರಾತ್ರಿ ಬಾರದೇ ಇದ್ದುದರಿಂದ ಮರುದಿನ ಬೆಳಗ್ಗೆ ಅವರ ತಾಯಿ ಪಕ್ಕದ ನೆರೆಮನೆಯವರಿಗೆ ವಿಷಯ ತಿಳಿಸಿದರು. ಸಹೋದರರು ಮತ್ತು ಸ್ಥಳೀಯರು ಸೇರಿ ಹುಡುಕಾಟ ನಡೆಸಿದಾಗ ಮರುದಿನ ಬೆಳಗ್ಗೆ ಅವರ ಜಮಿನಿನಲ್ಲಿ ಅವರು ನಡೆದು ಕೊಂಡು ಬರುತ್ತಿರುವ ದಾರಿಯ ಕೆಳ ಭಾಗದಲ್ಲಿ ಮೃತದೇಹವು ಪತ್ತೆಯಾಯಿತು. ಸಾವು ಸಂಭವಿಸಿ ದಿನ ಕಳೆದುದರಿಂದ ದೇಹವು ಕೊಳೆತ ಸ್ಥಿತಿಯಲ್ಲಿತ್ತು. ಕುಟುಂಬಸ್ಥರು ಮತ್ತು ಸ್ಥಳೀಯರು ಸೇರಿ ಅಂತ್ಯ ಸಂಸ್ಕಾರ ನಡೆಸಿದರು. ರಾತ್ರಿಯ ಸಮಯದಲ್ಲಿ ನಡೆದುಕೊಂಡು ಬರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸಾವು ಸಂಭವಿಸಿರಬಹುದೆಂದು ಮೃತದೇಹವನ್ನು ನೋಡಿದ ಸ್ಥಳೀಯರು ಸಂಶಯಿಸಿದ್ದಾರೆ. ಜಾರಿ ಬೀಳುವಾಗ ದೇಹದಲ್ಲಿ ಗಾಯಗಳಾದ ಗುರುತುಗಳಿತ್ತು ಎಂದು ಹೇಳುತ್ತಿದ್ದಾರೆ. ಮೃತರು ತಾಯಿ ಯಶೋಧ, ಸಹೋದರರಾದ ರಮೇಶ್ ಮತ್ತು ಪ್ರಶಾಂತ್, ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.