ಮುದುಡಿದ ತಾವರೆ ಅರಳಿತು…

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಳುವ ತಾವರೆ ಕೆಲವು ದಿನ ಚೆಲುವೆಲ್ಲಾ ನಂದೆನ್ನುತ್ತಾ ತನ್ನೆಲ್ಲಾ ಸೌಂದರ್ಯವನ್ನು ಜಗಕೆ ತೆರೆದಿಟ್ಟು ಮೆಲ್ಲನೆ ಮುದುಡಿಕೊಳ್ಳುತ್ತದೆಯಲ್ಲವೇ?
ಆದರೆ ನಾನಿಲ್ಲಿ ಹೇಳುತ್ತಿರುವುದು ಅರಳಿದ ತಾವರೆ ಮುದುಡಿದ ಕಥೆಯಲ್ಲ.. ಮುದುಡಿ ಹೋದ ತಾವರೆಯೊಂದು ಮತ್ತೆ ಅರಳಿ ನಿಂತ ಕಥೆ..

ನನ್ನ ಹೂದೋಟಕ್ಕೆ ರಾಣಿಯಾಗಿ ಆ ತಾವರೆ ಗಿಡ ಕೆಲ ದಿನಗಳ ಹಿಂದಷ್ಟೇ ಬಂದಿತ್ತು. ನನ್ನ ಸಹೋದರರೊಬ್ಬರು ಆ ಗಿಡವನ್ನು ನೀಡಿದ್ದರು. ಸಹೋದರ ನೀಡಿದ
ಆ ಗಿಡದ ಮೇಲೆ ನನಗೂ ಒಂದು ಸೋದರ ವಾತ್ಸಲ್ಯದ ಮಮತೆ ಉಕ್ಕಿ ಬಂದಿತ್ತು. ಬಲು ಶ್ರದ್ಧೆಯಿಂದ ನಾನು ಅದನ್ನು ಬೆಳೆಸಲು ಆರಂಭಿಸಿದೆ. ಕುಂಡದಲ್ಲಿ ನೀರು, ಕೆಸರು ತುಂಬಿ ಗಿಡವನ್ನು ನೆಟ್ಟು ಪೋಷಿಸಿದೆ. ನನ್ನ ಆರೈಕೆ, ಪ್ರೀತಿಗೆ ಮನ ಸೋತಿತು ಎಂಬಂತೆ ಗಿಡ ಚೆನ್ನಾಗಿ ಬೆಳೆಯುತ್ತಿತ್ತು. ನನಗಂತು ಖುಷಿಯೋ ಖುಷಿ..

ಪ್ರತಿ ದಿನ ಬೆಳಿಗ್ಗೆ ಸಂಜೆ ಮುದ್ದಿನ ತಾವರೆ ಗಿಡವನ್ನು ನೋಡಬೇಕೆಂಬ ತುಡಿತ.. ಕಚೇರಿಗೆ ಹೋಗುವಾಗಲೂ ಬರುವಾಗಲೂ ನನ್ನ ಪ್ರೀತಿಯ ಕಣ್ಣೋಟಕ್ಕೆ ಆ ತಾವರೆ ಗಿಡ ಕಾಯುತ್ತಿತ್ತು..
ಹಾಗೆ ನನ್ನ ಮತ್ತು ತಾವರೆ ಗಿಡದ ಪ್ರೀತಿಯ ದಿನಗಳು ಸಾಗುತ್ತಿದ್ದಂತೆ ಆ ದುಖದ ದಿನ ಕಾದಿತ್ತು..

ಸಂಜೆ ಕಚೇರಿಯಿಂದ ಬಂದು ನೋಡಿದಾಗ ಗಿಡವನ್ನು ಯಾರೋ ಕಿತ್ತು ಹಾಕಿದ್ದರು.. ಬುಡವನ್ನು ಯಾರೋ ಕೊಂಡೊಯ್ದಿದ್ದರು.. ಇದ‌ನ್ನು ನೋಡಿ ಮನ ಕಲಕಿ ಹೋಯಿತು..ಅಳು ಉಮ್ಮಳಿಸಿ ಬರುತ್ತಿತ್ತು.‌ ನಾನರಿಯದೆ ಕಣ್ಣಾಲಿ ತುಂಬಿ ಬರುತ್ತಿತ್ತು.. ಸುತ್ತಲೂ ಹುಡುಕಾಡಿದಾಗ ಒಂದು ಗಿಡ ನೆಲದಲ್ಲಿ ಅನಾಥವಾಗಿ ಬಿದ್ದಿತ್ತು.. ಕಣ್ಣೊರೆಸುತ್ತಾ ಅದನ್ನು ತೆಗೆದು ಪುನಾಃ ನೆಟ್ಟು ಆರೈಕೆ ಮಾಡಿದೆ. ಆದರೆ ಮುನಿಸಿಕೊಂಡಿತೋ ಎಂಬಂತೆ ಎಷ್ಟು ದಿನ ಕಳೆದರೂ ಗಿಡದಲ್ಲಿ ತಾವರೆ ಹೂವು ಅರಳಲೇ ಇಲ್ಲ. ಅರಳಲು ಇಷ್ಟವೆಲ್ಲವೆಂದು ಗಿಡ ಮುದುಡಿ ಹೋಗಿತ್ತು. ಯಾಕೋ ಮನಸಿಗೆ ಬೇಜಾರಾಗಿತ್ತು.

ಇನ್ನು ಇದರ ಸಹವಾಸವೇ ಬೇಡವೆಂದು ಗಿಡವನ್ನು ಕುಂಡ ಸಮೇತ ಕೊಂಡೊಯ್ದು ಮನೆಯ ಹಿಂಬದಿ ಇಟ್ಟೆ.. ಮನಸನ್ನು ಕಲ್ಲಾಗಿಸಿ ಅದನ್ನು ನೋಡುವುದನ್ನೇ ಬಿಟ್ಟೆ. ನಾಲ್ಕು ದಿನಗಳು ಕಳೆದು ಒಂದು ಮುಂಜಾನೆ ಹೋಗಿ ನೋಡಿದರೆ ಅಲ್ಲಿ ಆಶ್ಚರ್ಯ ಕಾದಿತ್ತು. ಸೂರ್ಯ ಕಿರಣಗಳಿಗೆ ಮೈಯೊಡ್ಡಿ, ಮೈಯೆಲ್ಲ ಮಂಜಿನ ಕಣಗಳನ್ನು ತುಂಬಿ ಮೋಹಕ ತಾವರೆ ಹೂವೊಂದು ಅರಳಿ ನಿಂತಿತು. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ.. ಕಣ್ಣು ಮನಸ್ಸು ತುಂಬಿ ಬಂತು..

ಮನುಷ್ಯನ ಮನಸ್ಸು, ಜೀವನವೂ ಹೀಗೆ ಅಲ್ಲವಾ ಅಂತ ಅನ್ನಿಸಿ ಬಿಟ್ಟಿತ್ತು.. ನಮ್ಮ ಬದುಕು, ಹೃದಯ ಎಷ್ಟೇ ಮುದುಡಿದರೂ ಯಾವುದೇ ಕ್ಷಣದಲ್ಲಿ ಮತ್ತೆ ಮತ್ತೆ ತಾವರೆಯಂತೆ ಸುಂದರವಾಗಿ ಅರಳಬಲ್ಲುದು. ಯಾರು ಎಷ್ಟೇ ತೆಗಳಿದರೂ ಮತ್ತೆ ತಲೆ ಎತ್ತಿ ನಿಲ್ಲಬಲ್ಲುದು.. ಅದಕ್ಕೆ ಕಾಯಬೇಕಷ್ಡೇ..

 

ಪೂಜಾಶ್ರೀ ಕೆ ಪೈಚಾರ್

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.