HomePage_Banner
HomePage_Banner
HomePage_Banner
Breaking News

ಪೈಲಾರು: ಪ್ರೀಮಿಯರ್ ಲೀಗ್ ಸಂಘಟನಾ ಸಮಿತಿ ಇದರ ಆಶ್ರಯದಲ್ಲಿ ಗ್ರಾಮ ಮಟ್ಟದ ಟೆಸ್ಟ್ ಕ್ರಿಕೆಟ್ ಪಂದ್ಯಾಟ


ಅಮರಮೂಡ್ನೂರು ಗ್ರಾಮದ ಎರಡು ತಂಡಗಳ ಆಟಗಾರರನ್ನು ಬಿಡ್ಡಿಂಗ್ ಮೂಲಕ ಎರಡು ತಂಡವನ್ನು ರಚಿಸಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಎರಡು ತಂಡಗಳ ಮಧ್ಯೆ ಎರಡು ಇನ್ನಿಂಗ್ಸ ನ ಟೆಸ್ಟ ಪಂದ್ಯಾಟವು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲಾ ಕ್ರೀಡಾಂಗಣದಲ್ಲಿ ಜೂ. ೦೫ ರಂದು ನಡೆಯಿತು. ಪಂದ್ಯಾಟಕ್ಕೆ ಹಿರಿಯ ಆಟಗಾರರಾದ ಶ್ರೀ ರಾಧಾಕೃಷ್ಣ ಗುಡ್ಡೆಮನೆ ಇವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಪಂದ್ಯಾಟದ ಅಧ್ಯಕ್ಷತೆಯನ್ನು ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕುಕ್ಕುಜಡ್ಕ ಇದರ ನಿರ್ದೇಶಕರಾದ ಗಣೇಶ ಪಿಲಿಕಜೆ ವಹಿಸಿದ್ದರು. ತಿರುಮಲೇಶ್ವರ ಬೊಳ್ಳೂರು , ಮನೋಜ್ ದರ್ಖಾಸ್ ಅಧ್ಯಕ್ಷರು ಮೋಗೆರ ಸಂಘ ಪೈಲಾರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆಯಲ್ಲಿ ಮುಖ್ಯ ಅತಿಥಿಯಾಗಿ ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಬೊಳ್ಳೂರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನ್ಯಾಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೈಲಾರು ಒಕ್ಕೂಟ ಅಧ್ಯಕ್ಷರಾದ ನಾರಾಯಣ ಕೋಡ್ತುಗುಳಿಯವರು ವಿಜಯಿ ತಂಡಕ್ಕೆ ಬಹುಮಾನ ವಿತರಿಸಿದರು. ಮಹೇಶ್ ಮೇರ್ಕಜೆ , ಭಾನುಪ್ರಕಾಶ್ ಪೆಲ್ತಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯಿ ತಂಡ ಸ್ಟಾರ್ ಬಾಯ್ಸ ಬಂಟಮಲೆ ಪಡೆದುಕೊಂಡಿತ್ತು. ಉತ್ತಮ ಬೌಲರ್‌ರಾಗಿ ರಕ್ಷತ್ ಕರ್ಮಾಜೆ, ಉತ್ತಮ ದಾಂಡಿಗರಾಗಿ ಶೇಖರ್ ಪೈಲಾರು, ಸರಣಿ ಶ್ರೇಷ್ಠರಾಗಿ ನಿತಿನ್ ಚೊಕ್ಕಾಡಿ ಪಡೆದುಕೊಂಡಿತ್ತು. ಹರ್ಷಿತ್ ಜಿ ಜೆ ಅತಿಥಿಗಳನ್ನು ಸ್ವಾಗತಿಸಿದರು. ಸಾತ್ವಿಕ್ ಮಡಪ್ಪಾಡಿ ಧನ್ಯವಾದಗೈದರು. ತೀರ್ಥೇಶ್ ನಾರ್ಣಕಜೆ  ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.