HomePage_Banner
HomePage_Banner
HomePage_Banner

ಗಿರೀಶ್ ಕಾರ್ನಾಡ್ ನಾಡು ಕಂಡ ಅಪರೂಪದ ರಂಗತಜ್ಞ

– ಜೀವನ್‌ರಾಂ ಸುಳ್ಯ ಬರೆಯುತ್ತಾರೆ

ತುಂಬ ನೋವಾಗ್ತಿದೆ.
ನಾಡು ಕಂಡ ಅಪರೂಪದ ರಂಗ ತಜ್ಞ ಗಿರೀಶ್ ಕಾರ್ನಾಡರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ.
ನಾಟಕಾರನಾಗಿ, ನಟನಾಗಿ, ನಿರ್ದೇಶಕನಾಗಿ ಆಧುನಿಕ ರಂಗಭೂಮಿ ಮತ್ತು ಚಲನಚಿತ್ರಕ್ಕೆ ಅವರು ನೀಡಿದ ಕೊಡುಗೆಗೆ ಬೇರೆ ಯಾರೂ ಸಾಟಿಯಿಲ್ಲ. ಕಾರ್ನಾಡರು ಬರೆದ ನಾಟಕಗಳು ಜಗತ್ಪ್ರಸಿದ್ಧ.
ಹಾಗಾಗಿ ಅವರು ಎಂದೆಂದಿಗೂ ಶೇಕ್ಸ್‌ಪಿಯರ್, ಬ್ರೆಕ್ಟ್ ನಂತೆ ವಿಶ್ವ ನಾಟಕಕಾರರು..


ನೀನಾಸಂ ತಂಡದಲ್ಲಿ ಅಭಿನಯಿಸಿದ ’ ಅಗ್ನಿ ಮತ್ತು ಮಳೆ’ ನಾಟಕದ ನನ್ನ ಅರವಸು ವಿನ ಪಾತ್ರವನ್ನು ನೋಡಿ, ಮೆಚ್ಚಿ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು.ಈ ನಾಟಕವನ್ನು ಆಳ್ವಾಸ್ ನಲ್ಲಿ ನಿರ್ದೇಶನವನ್ನೂ ಮಾಡಿದ್ದೇನೆ.
ನಾನು ಪೂರ್ಣಪ್ರಮಾಣದಲ್ಲಿ ರಂಗದಲ್ಲಿ ಕಾಣಿಸಿಕೊಂಡದ್ದೇ ಅವರ ’ನಾಗಮಂಡಲ’ ನಾಟಕದಲ್ಲಿ ಅಭಿನಯಿಸುವ ಮೂಲಕ.ಅವರ ’ ತಲೆದಂಡ ’ ನಾಟಕವನ್ನು ಎರಡು ಬಾರಿ(ಸಂಡೂರು ಬಳ್ಳಾರಿ,ಸುಬ್ರಹ್ಮಣ್ಯ) ಮಕ್ಕಳಿಗೆ ನಿರ್ದೇಶಿಸಿದ್ದೆ. ತಲೆದಂಡ ದಲ್ಲಿ ಜಗದೇವ ನಾಗಿ ಅಭಿನಯಿಸಿದ್ದೇನೆ.
ಅವರ ವಿಶ್ವವಿಖ್ಯಾತ ’ ತುಘಲಕ್ ’ ನಾಟಕದಲ್ಲಿ ಶಿಹಾಬುದ್ದೀನ ನಾಗಿ ಅಭಿನಯಿಸಿದ್ದೆ.
ಬೆಂಗಳೂರು ರಂಗಶಂಕರದಲ್ಲಿ ನನ್ನ ನಿರ್ದೇಶನದ ಧಾಂ ಧೂಂ ಸುಂಟರಗಾಳಿ ನಾಟಕ ನೋಡಿ ’ನಿಮ್ಮ ರಂಗಬದ್ಧತೆ ಮತ್ತು ಕ್ರಿಯೇಟಿವಿಟಿ ನನಗಿಷ್ಟ ಆಯ್ತು ಜೀವನ್ ’ ಅಂತ ಹರಸಿದವರು.ಬಿಡುವಿಲ್ಲದ ಒತ್ತಡದ ಮಧ್ಯೆಯೂ ನನ್ನಂತ ಕಿರಿಯ ರಂಗನಿರ್ದೇಶಕರಿಗೆ ಮಾರ್ಗದರ್ಶನ ನೀಡುವ ಅವರ ಸಜ್ಜನಿಕೆ ಮರೆಯಲಸಾಧ್ಯ. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ.

—— ಜೀವನ್ ರಾಂ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.