HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯ ಸಂಧಾನ ಸೂತ್ರ : ಜೂ.23 ರ ಬಳಿಕ ಮಾತುಕತೆ – ಪೇಜಾವರ ಶ್ರೀ ಹೇಳಿಕೆ

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠದ ನಡುವಿನ ವಿವಾದದ ಹಿನ್ನೆಲೆಯಲ್ಲಿ ಸಂಧಾನ ಸೂತ್ರ ಪ್ರಗತಿಯಲ್ಲಿದ್ದು, ಜೂ. 23 ರ ಬಳಿಕ ಮಾತುಕತೆ ಮುಂದುವರಿಯುವುದಾಗಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ಶಾಂತಿ ಸಂಧಾನ ಪ್ರಯತ್ನವು ಪ್ರಗತಿಯಲ್ಲಿದೆ. ಎರಡೂ ಕಡೆಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಇಬ್ಬರಿಗೂ ಸಮ್ಮತ ವಾಗಬಹುದಾದ ಸಂಧಾನ ಸೂತ್ರವನ್ನು ಸಿದ್ಧಪಡಿಸಲಾಗಿದೆ. ಇನ್ನೊಂದು ಸುತ್ತಿನ ಮಾತುಕತೆಯಲ್ಲಿ ಈ ಸಂಧಾನ  ಕಾರ್ಯವು ಪೂರ್ಣಗೊಳ್ಳಲಿದೆ. ಆದರೆ ದೇವಸ್ಥಾನದ ಕಮಿಟಿಯ ಅಧ್ಯಕ್ಷ ರ ವೈಯಕ್ತಿಕ ಅನಾನುಕೂಲತೆಯಿಂದಾಗಿ ಜೂನ್ 1೦ ರಂದು ನಡೆಯಬೇಕಾದ ಮಾತುಕತೆಯನ್ನು ಮುಂದೂಡಲಾಗಿದೆ. ನ ನ್ನ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಜೂನ್ 23 ರ ನಂತರ ಮಾತುಕತೆ ನಡೆಯುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.