HomePage_Banner
HomePage_Banner

ಸುಳ್ಯದ ಶಾಶ್ವತ ಕುಡಿಯುವ ನೀರಿಗೆ ಕ್ರಮ : ಕೋಟ ಶ್ರೀನಿವಾಸ ಪೂಜಾರಿ


ಸುಳ್ಯದ ಶಾಶ್ವತ ಕುಡಿಯುವ ನೀರಿಗೆ ಇಲ್ಲಿಯ ಶಾಸಕರು ಮತ್ತು ನಾವು ಸೇರಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಜೂ. 11ರಂದು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನ.ಪಂ.ಗೆ ಆಯ್ಕೆಯಾದ ಬಿಜೆಪಿಯ 14ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಲ್ಲಿಯ ನೀರಿಯ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಇದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

 

ಕಸ ವಿಲೇವಾರಿಗೂ ಕ್ರಮ

ನ.ಪಂ. ಆವರಣದಲ್ಲಿ ಕಸದ ರಾಶಿ ಬಿದ್ದಿರುವುದನ್ನು ಪತ್ರಕರ್ತರು ಪ್ರಶ್ನಿಸಿದಾಗ ಈಗಷ್ಟೇ ಚುನಾವಣೆ ಮುಗಿದಿದೆ. ಸಧ್ಯದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಆಯ್ಕೆಯ ಬಳಿಕ ನಾವು ಮೊದಲಾಗಿ ಅಲ್ಲಿಯ ಕಸವನ್ನು ವಿಲೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಈ ಹಿಂದೆ ನ.ಪಂ.ನಲ್ಲಿ ಒಬ್ಬ ಉತ್ತಮ ಮುಖ್ಯಾಧಿಕಾರಿ ಇದ್ದರು. ಅವರು ಕಸ ವಿಲೇವಾರಿಗೆ ಸಂಬಂಧಿಸಿ ಬೇಕಾದ ಯೋಜನೆಗಳನ್ನು ರೂಪಿಸಿದ ಸಂದರ್ಭದಲ್ಲಿ ಅವರನ್ನು ಮತ್ತೊಂದು ಕಡೆಗೆ ಕಳುಹಿಸಲಾಯಿತು. ರಾಜ್ಯ ಸರಕಾರವೇ ಈ ರೀತಿ ಮಾಡಿದರೆ ಇಲ್ಲಿಯ ಕೆಲಸಕ್ಕೆ ಹಿನ್ನಡೆಯಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಆಯುಷ್ಮಾನ್ ಯೋಜನೆ ಕೇಂದ್ರ ಸರಕಾರದ್ದು. ಅದನ್ನು ರಾಜ್ಯ ಸರಕಾರ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಂದಾವಣೆ ಮಾಡಿಕೊಂಡು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಕ್ರಮ ಸರಿಯಲ್ಲವೆಂದು ನಾವು ಈ ಹಿಂದೆಯೂ ಹೇಳಿದ್ದೇವೆ. ಕೇಳುವಾಗ ಅದಕ್ಕೆ ಕಾಯ್ದೆ ರೂಪುಗೊಂಡಿದೆ ಎಂದು ಉತ್ತರ ನೀಡುತ್ತಾರೆ. ಆ ಕಾಯ್ದೆಗೆ ಸಚಿವ ಸಂಪುಟ ತಡೆ ನೀಡಲು ಅವಕಾಶವಿದೆ. ಆದರೆ ಸರಕಾರ ಇದನ್ನು ಮಾಡುತ್ತಿಲ್ಲ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.