HomePage_Banner
HomePage_Banner

ಜಾಲ್ಸೂರು: ಸ್ವಚ್ಛಮೇವ ಜಯತೆ ಆಂದೋಲನ ಕಾರ್ಯಕ್ರಮ


ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಮೇವ ಜಯತೆ ಎಂಬ ಸ್ವಚ್ಚತಾ ಆಂದೋಲನ ಕಾರ್ಯಕ್ರಮವು ಜಾಲ್ಸೂರು ಗ್ರಾಮ ಪಂಚಾಯತಿ ವಠಾರದಲ್ಲಿ ಜೂ.11ರಂದು ನಡೆಯಿತು.


ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆ.ಬಿ.ಸುಬ್ಬಯ್ಯ ಅವರು ಸ್ವಚ್ಚತಾ ಆಂದೋಲನದ ಪ್ರತಿಜ್ಞಾವಿಧಿ ಭೋದಿಸಿ, ಸ್ವಚ್ಚತೆಯ ಕುರಿತು ಮಾಹಿತಿ ನೀಡಿದರು.
ಬಳಿಕ ಗ್ರಾಮ ಪಂಚಾಯತಿ ವಠಾರದಲ್ಲಿ ಗಿಡಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಿನೇಶ ಅಡ್ಕಾರು, ಸದಸ್ಯರುಗಳಾದ ಜನಾರ್ದನ ಆಚಾರ್ಯ, ಭಾಸ್ಕರ ಗೌಡ ಹೊಸಗದ್ದೆ, ಶ್ರೀಮತಿ ರುಕ್ಮಿಣಿ ಕದಿಕಡ್ಕ, ಶ್ರೀಮತಿ ಶಶಿಕಲಾ ರೈ ಬೇಲ್ಯ, ಶ್ರೀಮತಿ ಲತಾಕುಮಾರಿ ಅಡ್ಕಾರು, ಶ್ರೀಮತಿ ಶೃತಿಕಾ ಅಡ್ಕಾರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.