HomePage_Banner
HomePage_Banner
HomePage_Banner

ರೈತರ ಸಾಲ ಮನ್ನಾ ಆಗಿದೆ : ಐವನ್ ಡಿ’ಸೋಜಾ

“ರಾಜ್ಯ ಸರಕಾರ ರೈತರಿಗೆ 1 ಲಕ್ಷ ಸಾಲ ಮನ್ನಾ ಮಾಡಲು ಘೋಷಣೆ ಮಾಡಿತ್ತು. ಆ ಸೌಲಭ್ಯ ರೈತರಿಗೆ ದೊರಕಿದೆ” ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.


ಜೂ.11ರಂದು ಸುಳ್ಯ ತಾಲೂಕು ಕಚೇರಿ ಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ವೇಳೆ ಈ ವಿಷಯ ಪ್ರಸ್ತಾಪವಾಯಿತು.


ತಾಲೂಕಿನಲ್ಲಿ ಕೇಂದ್ರೀಯ ಬ್ಯಾಂಕಿನಿಂದ ಸಾಲ ಪಡೆದ 1083 ಹಾಗೂ ಸಹಕಾರಿ ಸಂಘಗಳು ದಿಂದ‌ ಸಾಲ ಪಡೆದ 14 ಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಇವರ ಸಾಲದ ಕುರಿತು ಪ್ರಸ್ತಾಪ ಬಂದಾಗ ಐವನ್ ರವರು ಸಾಲ ಮನ್ನಾ ಅಗಿದೆ. ಒಬ್ಬ ಕೃಷಿಕ 8 ಲಕ್ಷ ಸಾಲ ಪಡೆದಿದ್ದರೆ ಆತ‌ ಈಗ ಸಾಲ ಕಟ್ಟುವಾಗ 7 ಲಕ್ಷ ಮಾತ್ರ ಕಟ್ಟಬೇಕು ಎಂದು ಬ್ಯಾಂಕ್ ಮೆನೇಜರ್ ಹೇಳ್ತಾರೆ. ಮನ್ನಾ ಆದ ವಿಷಯವೇ ಹೇಳೊದಿಲ. ಆ ಮನ್ನಾದ ಹಣ ಬ್ಯಾಂಕಿಗೆ ಬರುತ್ತದೆ ಆದ್ದರಿಂದ ರೈತರಿಗೆ‌ ಮಾಹಿತಿ ಸಿಗುತ್ತಿಲ್ಲ ಎಂದರು. ಆಗ ಸಭೆಯಲ್ಲಿದ್ದ ನ.ಪಂ ಸದಸ್ಯ ವೆಂಕಪ್ಪ ಗೌಡರು ನನಗೆ ಹಾಗೆ ಆಗಿದೆ. 2. 95 ನಾನು ಬ್ಯಾಂಕ್ ಗೆ ಪಾವತಿಸಬೇಕಿತ್ತು. ಬ್ಯಾಂಕ್ ನವರು 1.95ಪಾವತಿಸಿ ಎಂದರು. ಮನ್ನಾ ದ ಮಾಹಿತಿ ನೀಡಲಿಲ್ಲ ಎಂದು ಹೇಳಿದರು. ‌ಆಗ ಸಭೆಯಲ್ಲಿದ್ದ ಶಾಸಕರು ಯಾವ ರೀತಿ ಯಲ್ಲಿ ಹಣ ಬಂದಿದೆ ಎಂಬ ಮಾಹಿತಿಯನ್ನು ರೈತರಿಗೆ‌ ನೀಡಬೇಕು. ಹೆಚ್ಚಿನ ಕಡೆ ಬಂದಿಲ್ಲ ಎಂಬ ಮಾಹಿತಿ ನನಗೂ ಇದೆ ಎಂದರು. ಇದರಲ್ಲಿ ಗೊಂದಲ ಬೇಡ. ಎಲ್ಲ ಬ್ಯಾಂಕ್ ಹಾಗೂ ಸಹಕಾರಿ ಸಂಘದಿಂದ ವರದಿ ಪಡೆದು ನನಗೆ ಕಳುಹಿಸಿ ಎಂದು ಐವನ್ ರು ಎ.ಸಿ. ಕೃಷ್ಣ ಮೂರ್ತಿಯ ವರಿಗೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.