HomePage_Banner
HomePage_Banner
HomePage_Banner

ಸುಳ್ಯದ ಕಲಾಲಹರಿ ತಂಡದ ವತಿಯಿಂದ ಚಾರಣ

ಕಲಾಲಹರಿ ಸುಳ್ಯ ತಂಡದ ವತಿಯಿಂದ ಜೂ.9ರಂದು ಕನಕಮಜಲು ಬಳಿಯ ಪೆರ್ನಾಲ್ ಪಾದೆ ಎಂಬಲ್ಲಿಗೆ ಚಾರಣವನ್ನು ಹಮ್ಮಿಕೊಳ್ಳಲಾಯಿತು.
ಚಿನ್ನದ ಮಜಲು ಎಂಬ ಹೆಸರಿನ ಕನಕಮಜಲಿನ ಸಮೀಪದ ಬೆಟ್ಟ ಪೆರ್ನಾಲ್ ಪಾದೆ ಇಲ್ಲಿಯ ರಮಣೀಯ ಪರಿಸರಕ್ಕೆ ತಂಡ ಚಾರಣವನ್ನು ಬೆಳೆಸಿತು. ಈ ಸ್ಥಳದ ಐತಿಹ್ಯದ ಬಗ್ಗೆ ಮುಗೇರು ಶಾಲೆಯ ನಿವೃತ್ತ ಶಿಕ್ಷಕ ಆನಂದ ಇವರು ವಿವರಿಸಿ,ಚಾರಣಿಗರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ನಂತರ ಯುವಕ ಮಂಡಲ ಕನಕಮಜಲು ಇದರ
ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಪೆರ್ನಾಲ್ ಪಾದೆ, ಕಾರಿಂಜ ಮುಂತಾದ ರಮಣೀಯ ಪರಿಸರಕ್ಕೆ ಭೇಟಿ ನೀಡಿ ಸ್ಥಳ ಪುರಾಣಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಯುವಕ ಮಂಡಲದ ಅಧ್ಯಕ್ಷ ಜಯಪ್ರಕಾಶ್ ಕಾರಿಂಜ ಸ್ವಾಗತಿಸಿ, ಕಲಾಲಹರಿ ತಂಡದ ಬಾಲಕೃಷ್ಣ ವಂದಿಸಿದರು. ವಿಜೇತ್ ಸುವರ್ಣ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.