HomePage_Banner
HomePage_Banner

ಕೊಡಗಿನಲ್ಲಿ ಭಾರೀ ವಾಹನ ಸಂಚಾರ ನಿಷೇಧ

ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಯಾದ್ಯಂತ ಭಾರೀ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ. ಮಳೆಗಾಲದಲ್ಲಿ ಭಾರೀ ವಾಹನ ಸಾಗಾಟದಿಂದ ರಸ್ತೆ ಹದಗೆಡುವುದರಿಂದ ಹಾಗೂ ಸಾರ್ವಜನಿಕ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ ಮರಳು, ಮರದ ದಿಮ್ಮಿ ಸಾಗಣೆ ಹಾಗೂ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. 16,200 ಕೆ.ಜಿ.ಗಿಂತ ಹೆಚ್ಚಿನ ತೂಕ ಸಾಗಣೆ ಮಾಡದಂತೆ ಆದೇಶಿಸಲಾಗಿದೆ. ಈ ಆದೇಶ ಜೂ.12ರಿಂದ ಆಗಸ್ಟ್ 8ರವರೆಗೆ ಅನ್ವಯವಾಗಲಿದೆ. ಟ್ರಕ್, ಮಲ್ಟಿ ಆಕ್ಸಲ್, ಬುಲೆಟ್ ಟ್ಯಾಂಕರ್, ಕಾರ್ಗೋ ಕಂಟೈನರ್ಸ್ ಸಂಚಾರ ನಿಷೇಧಿಸಲಾಗಿದ್ದು, ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸಾರ್ವಜನಿಕ ಬಸ್‌ಗಳಿಗೆ, ಸರ್ಕಾರಿ ಕೆಲಸಕ್ಕೆ ಬಳಸುವ ಭಾರೀ ವಾಹನ, ಶಾಲಾ ಕಾಲೇಜು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.