HomePage_Banner
HomePage_Banner
HomePage_Banner

ಕನಕಮಜಲು ಯುವಕ ಮಂಡಲ ಹಾಗೂ ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಪೆರ್ನಾಲ್ ಪಾದೆಗೆ ಚಾರಣ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ ) ಕನಕಮಜಲು ಮತ್ತು ಸುಳ್ಯದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವೆ ಯೋಜನೆ ಘಟಕದ ವತಿಯಿಂದ ಕನಕಮಜಲಿನ ಪೆರ್ನಾಲ್ ಪಾದೆಗೆ ಚಾರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕನಕಮಜಲಿನ ಗ್ರಾಮದಲ್ಲಿರುವ ಪ್ರಾಚೀನ ಕಾಲದ ಕುರುಹುಗಳಲ್ಲೊಂದಾದ ‘ಪೆರ್ನಾಲ್ ಪಾದೆಗೆ ‘ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಘಟಕದ ಮಾರ್ಗದರ್ಶಕ ಬಾಲಕೃಷ್ಣ ಹಾಗೂ ಸುಮಾರು 20 ಮಂದಿ ವಿದ್ಯಾರ್ಥಿಗಳು ಮತ್ತು ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ , ಉಪಾಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸುನಿಲ್ ಅಕ್ಕಿಮಲೆ ಇವರು ಆಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.