HomePage_Banner
HomePage_Banner
HomePage_Banner

ಬೆಳ್ಳಾರೆ ಪಡ್ಪು ಶ್ರೀರಕ್ಷಾ ಸ್ವ.ಸಹಾಯ ಸಂಘದ ಮಹಾಸಭೆ- ಅಧ್ಯಕ್ಷರಾಗಿ ತುಳಸಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಪಡ್ಪು

ಬೆಳ್ಳಾರೆಯ ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘದ ೧೮ನೇ ವಾರ್ಷಿಕ ಮಹಾಸಭೆಯು ಜೂ. 2ರಂದು ಸಂಘದ ಅಧ್ಯಕ್ಷೆ ಸವಿತಾ ಬಸ್ತಿಗುಡ್ಡೆಯವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಸವಿತಾ ಚಂದ್ರಶೇಖರ ಗೌಡ ಬಸ್ತಿಗುಡ್ಡೆಯವರ ಮನೆಯಲ್ಲಿ ನಡೆಯಿತು. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ಕುಸುಮ ಕುರುಂಬುಡೇಲು ವಾಚಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ಳಾರೆ

ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಕೊರಗಪ್ಪ ಕುರುಂಬುಡೇಲು ಶುಭಹಾರೈಸಿದರು. 2019-20ರ ಸಾಲಿನ ಅಧ್ಯಕ್ಷರಾಗಿ ತುಳಸಿ ಕಿಲಂಗೋಡಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಪಡ್ಪು ಅವಿರೋಧವಾಗಿ ಆಯ್ಕೆಯಾದರು. ಪೂರ್ಣಿಮಾ ಸ್ವಾಗತಿಸಿ , ಮೀನಾಕ್ಷಿ ಪನ್ನೆ ವಂದಿಸಿ, ತುಳಸಿಯವರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.