HomePage_Banner
HomePage_Banner

ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಕ್ತ ವರ್ಗೀಕರಣ ಕಾರ್ಯಕ್ರಮ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ರಕ್ತ ವರ್ಗೀಕರಣ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಜೂ.14ರಂದು ಜರುಗಿತು.


ಸುಳ್ಯದ ಶ್ರೀರಾಂಪೇಟೆಯ ಮೆಂಟರ್ ಲ್ಯಾಬೋರೇಟರಿ ಕ್ಲಿನಿಕ್ ನವರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ರಕ್ತ ವರ್ಗೀಕರಣ ನಡೆಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಕನಕಮಜಲು ಯುವಕ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಥ್ ಅಡ್ಕಾರು, ಶಾಲಾ ಸಹಶಿಕ್ಷಕವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.