HomePage_Banner
HomePage_Banner
HomePage_Banner

ಮನೆ ಮನೆಯಲ್ಲಿ ಚಿಕ್ಕ ಮೇಳದ ಯಕ್ಷಗಾನ ಆರಂಭ

ಸುಳ್ಯದ ಯುವಕ ಯಕ್ಷಗಾನ ಕಲಾರಂಗ ಇದರ ಚಿಕ್ಕ ಮೇಳದ 3 ನೇ ವರ್ಷದ ಮಳೆಗಾಲದ ಮನೆ ಮನೆಯಲ್ಲಿ ಯಕ್ಷಗಾನ ಕ್ಕೆ ಜೂ.10 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಸಂಚಾಲಕರಾದ ಪ್ರಪುಲ್ಲಚಂದ್ರ ನೆಲ್ಯಾಡಿ, ಸಂಯೋಜಕ ಶೇಖರ ಮಣಿಯಾಣಿ ಸುಳ್ಯ, ಭಾಗವತ ರಾಧಾಕೃಷ್ಣ ಕಲ್ಲುಗುಂಡಿ ಉಪಸ್ಥಿತರಿದ್ದರು. ಕಲಾವಿದರಾದ ಮೋನಪ್ಪ ಗೌಡ ಕೊಲ್ಲಮೊಗರು, ಕುಸುಮಾಧರ ಕನ್ನಡಿಕಟ್ಟೆ, ದಿವಾಕರ ಕಾಣಿಯೂರು ಭಾಗವಹಿಸಲಿದ್ದಾರೆ. ತಾಲೂಕಿನಾದ್ಯಂತ ಚಿಕ್ಕ ಮೇಳವು ಸಂಚರಿಸಲಿದ್ದು ದಿನಕ್ಕೆ 8 ಮನೆಗಳಲ್ಲಿ ಪ್ರದರ್ಶನ ನೀಡಲಾಗುವುದು. ಆಸಕ್ತ ಭಕ್ತರು ಮುಂಚಿತವಾಗಿ ಸಂಚಾಲಕರಲ್ಲಿ ದಿನ ನಿಗದಿ ಪಡಿಸಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.