HomePage_Banner
HomePage_Banner
Breaking News

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲೇ ಬಿಎಸ್ಸೆನ್ನೆಲ್ ನೆಟ್‌ವರ್ಕ್ ನಾಟ್ ರೀಚೆಬಲ್ : ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಸ್ತಬ್ಧ!

 

ಸುಳ್ಯ ತಾಲೂಕಿನಾದ್ಯಂತ ವ್ಯಾಪಿಸಿರುವ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವರ‍್ಯಾರು?

ಅತೀ ಹೆಚ್ಚು ಗ್ರಾಹಕ ಬಳಕೆದಾರರನ್ನು ಹೊಂದಿರುವ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಇದೀಗ ಗ್ರಾಮಾಂತರ ಪ್ರದೇಶದ ಜನರಿಗೆ ಸರಿಯಾಗಿ ನೆಟ್‌ವರ್ಕ್ ಸಿಗದೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಒಂದು ಕಾಲದಲ್ಲಿ ಪ್ರತೀ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬಿ.ಎಸ್.ಎನ್,ಎಲ್. ನೆಟ್‌ವರ್ಕ್ ಖಾಸಗಿ ಮೊಬೈಲ್ ಕಂಪೆನಿಗಳು ಬಂದ ಬಳಿಕ ಹಂತ-ಹಂತವಾಗಿ ತನ್ನ ನೆಟ್‌ವರ್ಕ್ ವ್ಯಾಪ್ತಿ ಕಳೆದುಕೊಳ್ಳುತ್ತಾ ಸಾಗಿ ಇದೀಗ ಗ್ರಾಹಕ ಬಳಕೆದಾರರು ಸೇರಿದಂತೆ ಸಾರ್ವಜನಿಕರು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಂತೋಡು-ಕಲ್ಲುಗುಂಡಿ-ಕೊಡಗು ಸಂಪಾಜೆ-ಜಾಲ್ಸೂರು-ಕನಕಮಜಲು ಸೇರಿದಂತೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲೇ ಸರಿಯಾಗಿ ಸಿಗದ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ಥಬ್ಧಗೊಳ್ಳುತ್ತಿದ್ದು ಸುಳ್ಯ ತಾಲೂಕಿನಾದ್ಯಂತ ವ್ಯಾಪಿಸಿರುವ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವರ‍್ಯಾರು ಎಂಬ ಯಕ್ಷ ಪ್ರಶ್ನೆ ಉದ್ಭವಿಸಿದೆ.


ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿರುವ ಆಯಾ ಗ್ರಾಮ ಪಂಚಾಯತ್ ಕಛೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅನೇಕ ಬ್ಯಾಂಕ್‌ಗಳು ಇದೇ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಕನೆಕ್ಷನ್ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ತೀವ್ರ ತರಹರ ನೆಟ್‌ವರ್ಕ್ ಸಮಸ್ಯೆಯಿಂದ ಜನಸಾಮಾನ್ಯರಿಗೆ ತಮ್ಮ ತಮ್ಮ ಕಛೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಇಂದಿನ ಯುಗದಲ್ಲಿ ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದ್ದು ಇದಕ್ಕೆ ಇಂಟರ್‌ನೆಟ್ ಸೌಲಭ್ಯ ಅತೀ ಅಗತ್ಯ. ಆದರೆ ಪದೇ ಪದೇ ಸ್ಥಬ್ಧಗೊಳ್ಳುತ್ತಿರುವ ನೆಟ್‌ವರ್ಕ್‌ನಿಂದಾಗಿ ಗ್ರಾಮೀಣ ಪ್ರದೇಶದ ಜನರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಮುಖ್ಯವಾಗಿ ಕೆಲವು ಪ್ರದೇಶಗಳಲ್ಲಿ ಕರೆಂಟ್ ಹೋದರೆ ಬಿ.ಎಸ್.ಎನ್.ಎಲ್. ತನ್ನ ಸಂಪರ್ಕ ಕಳೆದುಕೊಳ್ಳುತ್ತಿದ್ದು, ಕರೆಂಟ್ ಇರುವಾಗ ಮಾತ್ರ ಸೇವೆ ಒದಗಿಸುತ್ತಿದೆ. ಆದರೆ ಇನ್ನೂ ಕೆಲವು ಗ್ರಾಮೀಣ ಭಾಗಗಳಲ್ಲಿ ಕರೆಂಟ್ ಇದ್ದರೂ, ಇಲ್ಲದಿದ್ದರೂ ನೆಟ್‌ವರ್ಕ್ ಸಮಸ್ಯೆಯಿದೆ. ಹೆಚ್ಚಿನ ಕಡೆಗಳಲ್ಲಿ ಟವರ್‌ನ ಬ್ಯಾಟರಿ ಚಾರ್ಜ್ ಮಾಡಲು ಜನರೇಟರ್‌ಗೆ ಸಮರ್ಪಕ ಡೀಸೆಲ್ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಇದೀಗ ಮಳೆಗಾಲ ಪ್ರಾರಂಭಗೊಂಡಿದ್ದು ಕರೆಂಟ್ ಸಮಸ್ಯೆಯೂ ವಿಪರೀತವಾಗಲಿದ್ದು , ಒಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳ ಜನಸಾಮಾನ್ಯರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.

ಜನರೇಟರ್‌ಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯದಿಂದ ಸಮಸ್ಯೆಯಾಗಿದೆ
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿzನೆ: ಸಂಸದ ಕಟೀಲ್
ಸುಳ್ಯ ತಾಲೂಕಿನ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆಯ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ‘ಸುದ್ದಿ’ ವಿಚಾರಿಸಿದಾಗ ನೆಟ್‌ವರ್ಕ್ ಸಮಸ್ಯೆಯಿರುವುದು ನನ್ನ ಗಮನಕ್ಕೆ ಬಂದಿದೆ. ಕರೆಂಟ್ ಇಲ್ಲದ ಸಂದರ್ಭ ಟವರ್‌ನ ಜನರೇಟರ್‌ಗೆ ಡೀಸಲ್ ಪೂರೈಕೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ವ್ಯತ್ಯಯವಾಗುತ್ತಿರುವುದರಿಂದ ನೆಟ್‌ವರ್ಕ್ ಸಮಸ್ಯೆ ಉದ್ಬವಿಸಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿzನೆ. ಈ ವಾರದಲ್ಲಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಸಂಸದ ಕಟೀಲ್ ಅವರು ತಿಳಿಸಿದ್ದಾರೆ.

ಕಲ್ಲುಗುಂಡಿ ಕೆನರಾ ಬ್ಯಾಂಕ್ ವಹಿವಾಟಿಗೆ ತಟ್ಟಿದ ನೆಟ್‌ವರ್ಕ್ ಸಮಸ್ಯೆ
ಕಲ್ಲುಗುಂಡಿಯ ಕೆನರಾ ಬ್ಯಾಂಕ್‌ನ ಎಲ್ಲಾ ಕೆಲಸ ಕಾರ್ಯಗಳಿಗೆ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಅವಲಂಬಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಆ ಭಾಗದ ಜನಸಾಮಾನ್ಯರ ಬ್ಯಾಂಕಿಂಗ್ ವಹಿವಾಟಿಗೂ ನೆಟ್‌ವರ್ಕ್ ಸಮಸ್ಯೆ ತಟ್ಟಿದೆ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಜನರು ಬ್ಯಾಂಕ್‌ಗೆ ದಿನನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹೋಬಳಿ ಕೇಂದ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಂಪಾಜೆ ಕೊಡಗಿನ ಗಡಿ ಗ್ರಾಮವಾಗಿರುವುದರಿಂದ ಸಂಪಾಜೆ ಹೋಬಳಿ ಕೇಂದ್ರದಲ್ಲಿ ಪ್ರತೀ ನಿತ್ಯ ಜನಸಾಮಾನ್ಯರು ಕಛೇರಿಗಳಿಗೆ ಬಂದು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
-ಕುಮಾರ ಚೆದ್ಕಾರ್, ಅಧ್ಯಕ್ಷರು ಗ್ರಾ.ಪಂ. ಕೊಡಗು ಸಂಪಾಜೆ

ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಲ್ಯಾಂಡ್‌ಲೈನ್ ಫೋನ್ ವಾರದಲ್ಲಿ ಒಂದು ದಿನ ಸರಿಯಿದ್ದರೆ ನಾಲ್ಕೈದು ದಿನ ಇರುವುದಿಲ್ಲ. ನಾವು ಸೊಸೈಟಿಗೆ ಏರ್‌ಟೆಲ್ ಸಿಮ್ ಅಳವಡಿಸಿ ರೂಟರ್ ಹಾಕಿzವೆ. ಆದ್ದರಿಂದ ಸೊಸೈಟಿಗೆ ಈಗ ನೆಟ್‌ವರ್ಕ್ ಸಮಸ್ಯೆಯಿಲ್ಲ. ಆದರೆ ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮೊಬೈಲ್‌ನಲ್ಲಿ ರೇಂಜ್ ಸರಿಯಾಗಿ ಇರುವುದಿಲ್ಲ.
– ಆನಂದ ಬಾಲೆಂಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೊಡಗು ಸಂಪಾಜೆ

ಬಿ.ಎಸ್.ಎನ್.ಎಲ್ ಕಂಪೆನಿಯನ್ನು ಜಿಯೋ ಕಂಪೆನಿಯ ಜೊತೆ ಟೈಯಪ್ ಮಾಡಲು ಕೇಂದ್ರ ಸರಕಾರ ಚಿಂತಿಸುತ್ತಿದ್ದು, ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಕ್ಷೀಣಿಸಿದೆ.ನಮ್ಮ ಸೊಸೈಟಿಯಲ್ಲೂ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆಯಾಗುತ್ತಿದ್ದು, ಸಂಸದರು ಈ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಿ, ನೆಟ್‌ವರ್ಕ್ ಸಮಸ್ಯೆ ಬಾರದಂತೆ ಮಾಡಬೇಕು. -ಸೋಮಶೇಖರ ಕೊಂಗಾಜೆ
ಅಧ್ಯಕ್ಷರು, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ಎಲ್ಲಾ ವ್ಯವಸ್ಥೆ ಇದ್ದರೂ, ಅಸಮರ್ಪಕ ನಿರ್ವಹಣೆಯಿಂದಾಗಿ ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ನೆಟ್‌ವರ್ಕ್ ಸಿಗದೆ ಸರ್ಕಾರಿ ಕಛೇರಿ, ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರು ವ್ಯವಹಾರಕ್ಕಾಗಿ ದಿನಗಟ್ಟಲೆ ಅಲೆಯುವಂತಾಗಿದೆ. ಹೀಗಾಗಿ ಜನರು ಖಾಸಗಿ ಕಂಪೆನಿಗಳತ್ತ ಮುಖ ಮಾಡಿದ್ದಾರೆ. ಇದರ ಹಿಂದೆ ಯಾವುದೋ ಹುನ್ನಾರ ಇರಬಹುದೆಂದು ಜನರು ಸಂಶಯಪಡುವಂತಾಗಿದೆ. ಬಿ.ಎಸ್.ಎನ್.ಎಲ್.ನ ಸೂಕ್ತ ನಿರ್ವಹಣೆಯ ಮೂಲಕ ಎಲ್ಲಾ ನೆಟ್‌ವರ್ಕ್‌ಗಳು ತಮ್ಮ ರೇಂಜ್ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
– ಎನ್.ಸಿ. ಅನಂತ, ಅಧ್ಯಕ್ಷರು
ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೊಡಗು ಸಂಪಾಜೆ

ಕಳೆದ ಸುಮಾರು ೧೦ ವರ್ಷಗಳಿಂದ ತೊಡಿಕಾನದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಕಾರ್ಯಚರಿಸುತ್ತಿದ್ದು ಸಂಪರ್ಕ ಕೊಂಡಿಯಾಗಿದೆ. ಆದರೆ ಕಳೆದ ೬ ತಿಂಗಳಿನಿಂದ ನೆಟ್‌ವರ್ಕ್ ಕೈಕೊಡುತ್ತಿದ್ದು ಬಳೆಕೆದಾರರಿಗೆ ದುಸ್ತರವಾಗಿದೆ. ನೆಟ್‌ವರ್ಕ್ ಮೆಸ್ಕಾಂನ ಮೇಲೆ ಅವಲಂಬಿತವಾಗಿದ್ದು ವಿದ್ಯುತ್ ಕೈಕೊಟ್ಟರೆ ಸಂಪರ್ಕ ಕಡಿದುಕೊಳ್ಳುತ್ತದೆ. ಲ್ಯಾಂಡ್‌ಲೈನ್ ಸಂಪರ್ಕ ತೆಗೆದು ಹಾಕಿ, ಮೊಬೈಲ್ ಮೇಲೆ ಆವಲಂಬಿತರಾಗಿದ್ದ ಗ್ರಾಮೀಣ ಜನತೆಗೆ ಇಂದು ಲ್ಯಾಂಡ್‌ಲೈನ್ ಇಲ್ಲ. ಇತ್ತ ಮೊಬೈಲ್ ನೆಟ್‌ವರ್ಕ್ ಇಲ್ಲದ ಪರಿಸ್ಥಿತಿ ನಿರ್ಮಣವಾಗಿದೆ. ಸಂಬಂದ್ದಪಟ್ಟ ಅಧಿಕಾರಿಗಳು ಇದರತ್ತ ಗಮನ ಕೊಡಬೇಕು.
– ಸಂತೋಷ್ ಕುತ್ತಮೊಟ್ಟೆ, ಅಧ್ಯಕ್ಷರು
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಜನರಿಗೆ ಅಂದುಕೊಂಡ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಮ್ಮ ಸಂಸದರು ಗಮನಹರಿಸಿ ಸಂಬಂಧಪಟ್ಟವರಿಗೆ ಸೂಚಿಸಿ ಕೆಲಸ ಮಾಡಿಸಬೇಕು.
– ದಯಾನಂದ ಕುರುಂಜಿ ಉಪಾಧ್ಯಕ್ಷರು
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆಯಿಂದಾಗಿ ತುಂಬಾ ಸಮಸ್ಯೆಯಾಗುತ್ತಿದೆ. ಸೋಣಂಗೇರಿಯಲ್ಲಿ ರೇಂಜ್ ಸಿಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯವರು ಇದರತ್ತ ಗಮನಹರಿಸಿ ನೆಟ್‌ವರ್ಕ್ ಸಮಸ್ಯೆ ಪರಿಹರಿಸಬೇಕಾಗಿದೆ.
-ಶಶಿಕಲಾ ಎಸ್. ನಾಯಕ್, ಅಧ್ಯಕ್ಷರು ಗ್ರಾ.ಪಂ. ಜಾಲ್ಸೂರು

ಕಲ್ಲುಗುಂಡಿ ಕೆನರಾ ಬ್ಯಾಂಕ್‌ನಲ್ಲಿ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಸಮಸ್ಯೆ ಯಾಗಿದ್ದು ಬ್ಯಾಂಕ್‌ನವರು ಇತರೆ ಖಾಸಗಿ ಕಂಪೆನಿಗಳ ನೆಟ್‌ವರ್ಕ್ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಜನಸಾಮಾನ್ಯರಿಗೆ ಸ್ಪಂದಿಸಬೇಕು.
– ಯು.ಬಿ. ಚಕ್ರಪಾಣಿ, ಅಧ್ಯಕ್ಷರು ವರ್ತಕರ ಸಂಘ ಕಲ್ಲುಗುಂಡಿ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

1 Comment

  1. di.shivaramayya

    ತಕ್ಷಣವೇ ಟವರ್ಸ್ ಗಳ ಜನರೆeಟರ್ಗಳಿಗೆ ಸಾಕಷ್ಟು ಡಿಸೆಲ್ ವೊದಗಿಸಿದರೆ BSNL ಗ್ರಾಮಾಂತರ ಪ್ರದೇಶ ಗಳ ಗಿರಾಕಿಗಳನು ಉಳಿಸಿಕೊಳ್ಳುವುದು ಮಾತ್ರವಲ್ಲ ದೆ ತಮ್ಮ ಸಂಸ್ಥೆ ಯಉದ್ಧಾರದ ಮೊದಲ ಹೆಜ್ಜೆಯಿಟ್ಂತಾಗುತ್ತದೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.