HomePage_Banner
HomePage_Banner
Breaking News

ನಾವೇಕೆ ಯೋಗ ಮಾಡಬೇಕು?

– ಡಾ| ಪುನೀತ್ ರಾಘವೇಂದ್ರ ಕುಂಟುಕಾಡು ಹೀಗೆ ಬರೆಯುತ್ತಾರೆ…


ಅಲ್ಲಣ್ಣಾ… ಈ ಪ್ರಾಯಲಿ ನಂಗೆಂತಕೆ ಯೋಗ?? ಮನೆಲಿ ನಾಕ್ ದರ್ಸಿದನಗ ಒಳೊ. ಬೊಳ್ಪ್‌ಗೆ ಎzಂಗೆ ಸುರಾದೆ ಅವುಗಳ್ ಚಾಕ್ರಿ. ಕರ್ಬುಟ್ಟ್, ಹಾಲ್ತಕಂಡ್ ಡೈರಿಗೆ ನಡ್ಕಂದೇ ಹೋಗಿ ಬನ್ನೆ. ಇನ್‌ದನಂಗಳಿಗೆ ಹುಲ್ಲ್ ಮಾಡಿ, ಒಟ್ಟೊಟ್ಟಿಗೆ ಕೊಮ್ಮ್‌ನ ಬುಡಬುಡಂದ ಬಿದ್ದಡ್ಕೆ ಹೆರ್ಕ್ಯಂಡ, ಕೊಕ್ಕಕಾಯಿ ಕೊಯಿಕಂಡ, ಕೈಕುಕ್ಕೆನ ಕೊಟೆಗೆಲಿ ನೇಲ್ಸ್ಕಾಕನ ಬೆಗ್ರ್ ಬಿಚ್ಚಿ ಹಳ್ಳ ಆಗಿದ್ದದೆ. ಈಗದವರಾಂಗೆ ಹೊಟ್ಟೆ ಸರಿ ಇ, ಗ್ಯಾಸ್ , ಅಸಿಡಿಟಿ ಅಂತದ್ ಎಂತದೂ ಇ. ತಿಂಬೊದೂಹಂಗೆ… ಬೊಳ್ಪುಗೆ ಸರಾಗ ಒಂದೇ ಬೊಡ್ರೊಟ್ಟಿ ಇಲ್ಲರೆ ಓಡಿಟ್ಟ್ ಅದ್ಕೊಂದ್ಕಾಯಿ ಪೊಜ್ಜಿ. ಹಿಂಬತಾಕನ ಚೂರ್‌ಸೊಂಟ ಪುಳೆವು ಇದ್ದದೆ. ಅದ್ಕೆತ್ಯಾಂಪಣ್ಣನ ಎಣ್ಣೆಪೂಜಿ ಎರ್ಡ್ಪಾಟೆ ಬಿಸಿನೀರ್ ಹೊಯಿದರೆ ಎಂತದೂ ಗೊತ್ತಿರ್ದುಲೆ. ಈಗ ಎಲ್ಲವೂ ಹೇಳ್ವೆ… ಫಾರಿನ್ನವು ಕೂಡಯೋಗ ಮಾಡ್ವೆಗಡ. ಇಲ್ಲಿ ಭಾರತ ದೇಸಕ್ಕೆ ಬಂದ್ಕಲಿ ತೊಳೊಗಡ. ಮೊನ್ನೆ ಬೆಂಗ್ಳೂಂದ ಅಣ್ಣು ಫೋನ್ಮಾಡಿ ಹೇಳ್ತ. ಅಂವನೂ ಹೆಣ್ಣುನೂ ಅಲ್ಲಿ ಯೋಗ ಕ್ಲಾಸ್‌ಗೆ ಸೇರ್ಯೊಳೊಗಡ. ಈಗ ನೀವೇ ಹೇಳ್ಯಣ್ಣ.. ನಾನೂ ಯೋಗ ಮಾಡೊಕಾ?? ನಂಗೆಂತಕೆ ಬೇಕು ಅದೆ?? ಕೇಳಿದ ಸಂಣ್ಣಪ್ಪನ ಬಳಿ ನಾ ಶರೀರಕ್ಕೇನೋ ಸಾಕು, ಮನಸ್ಸಿನ ವಿಶ್ರಾಂತಿಗೇನಿದೆ??’ ಪ್ರಶ್ನೆಗೆ ಉತ್ತರ ವಿರಲಿಲ್ಲ. ಗೆಳೆಯರೇ, ಸನಾತನ ಭಾರತದ ಕೊಡುಗೆ, ವಿಶ್ವ ವ್ಯಾಪಿಯಾಗಿರುವ ಯೋಗವನ್ನು ಭಾರತೀಯರಾದ ನಾವೇ ಚೆನ್ನಾಗಿ ಅರಿತಿಲ್ಲ. ಅದರಲ್ಲೂ ಯೋಗವೆಂದರೆ ಕೈಕಾಲೆತ್ತುವುದು, ತಲೆಕೆಳಗೆ ಕಾ ಲುಮೇಲೆ ಮಾಡುವುದೆಂದು ತಿಳಿದಿರು ವವರೇ ಜಾಸ್ತಿ. ಆದರೆ ಅದು ತಪ್ಪುಕಲ್ಪನೆ!! ಯೋಗವೆಂದರೆ ಕೇವಲ ದೇಹವನ್ನಷ್ಟೇ ಅಲ್ಲ, ಮನಸ್ಸನ್ನೂ ಬಾಗಿಸುವುದು. ಹಾಗಾಗಿ ಯೋಗವೆಂದರೇನೆಂದು ಮೊದಲಾಗಿ ತಿಳಿಯೋಣ.
ಯೋಗದ ಮೂಲಪದ ಸಂಸ್ಕೃತದಿಂದ ಬಂದಿರುವ ಯುಜ್ ಎಂದರೆ ಸೇರಿ ಸುವುದು, ಜೋಡಿಸುವುದು ಎಂದರ್ಥ. ಯುಜ್ಯತೇ ಅನೇನ ಇತಿಯೋಗಃ- ಯಾವುದು ಜೋಡಿಸುವುದೋ ಅದೇ ಯೋಗ. ಇಲ್ಲಿ ಯಾವುದು ಯಾವುದನ್ನು ಜೋಡಿಸುತ್ತದೆ?? ದೇಹ ಹಾಗೂ ಮನಸ್ಸನ್ನು ಜೋಡಿಸುವುದು (ಉದಾ: ಯೋಗಾಸನದ ಸಂದರ್ಭದಲ್ಲಿ ಶ್ವಾಸ ತೆಗೆದು ಕೊಳ್ಳುತ್ತಾ ಹಿಂದೆ ಬಾಗುವುದು, ಶ್ವಾಸ ಬಿಡುತ್ತಾ ಮುಂದೆ ಬಾಗುವುದು ಅಂದರೆ ದೈಹಿಕವಾಗಿ ಮಾಡುವ ಆಸನದ ಜೊತೆಗೆ ಉಸಿರಾಟದ ಮೇಲೆ ಮನಸ್ಸನ್ನಿಟ್ಟು ಜೋಡಿಸಿದಂತೆ). ಹಾಗೆಯೇ ಧಾರ್ಮಿಕವಾಗಿ ಗಮನಿಸಿ ದಾಗ ಆತ್ಮನನ್ನು ಪರಮಾತ್ಮನಲ್ಲಿ ಜೋಡಿಸುವುದು ಅದೇ ಮೋP, ಅಲ್ಲಿಂದ ಮುಂದೆ ಪುನರ್ಜನ್ಮವಿಲ್ಲ. ಭಗವದ್ಗೀತೆಯಲ್ಲಿ ಯೋಗ ವೆಂದರೆ ಯೋಗಃ ಕರ್ಮಾಸು ಕೌಶಲಂ ಕ್ರಿಯಾತ್ಮಕವಾಗಿ, ಕೌಶಲ್ಯತೆ ಯಿಂದ ಮಾಡುವ ಕೆಲಸವೇ ಯೋಗ. ಇದಕ್ಕೆ ಸರಳವಾದ ಇರುವ ಉದಾಹರಣೆ ಯೆಂದರೆ ನಾವೆಲ್ಲರೂ ಮಾಡುವ ಊಟ.. ಅದೆಷ್ಟೋ ಬಾರಿ ನಾವು ಗಮನಿಸಿರಬಹುದು ಊಟದ ಬಟ್ಟಲಿ ನಿಂದ ಕೆಲವರು ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು,ಬೆಳ್ಳುಳ್ಳಿ ಅಷ್ಟೇಕೆ ಟೊಮೆಟೊ ಸಿಪ್ಪೆಯನ್ನೂ ಬದಿಗಿಡು ವವರಿzರೆ ( ಇನ್ನೂ ಕೆಲವರು ಬಟ್ಟಲಿ ನಿಂದಲೇ ಹೊರದಬ್ಬಿರುತ್ತಾರೆ!!) ಆದರೆ ಕ್ರಿಯಾತ್ಮಕ ವ್ಯಕ್ತಿ ಆ ರೀತಿ ಮಾಡದೆ ಬಟ್ಟಲಲ್ಲಿರುವುದೆಲ್ಲ ವನ್ನೂ ತಿಂದು ಶುಭ್ರವಾಗಿಟ್ಟಿರುತ್ತಾನೆ. ಕೆಲಸದ ಫಲ ಅಪೇಕ್ಷಿಸದೆ ಮನಸ್ಸಿಟ್ಟು ಮಾಡುವ ಕೆಲಸ ಕರ್ಮ ಯೋಗವಾದರೆ, eನವೇ ಮೋPದ ಅರಿವಿನ ಸಾಧನವೆಂದವನಿಗೆ eನ ಯೋಗವಾಗುತ್ತದೆ. ಭಗವಂ ತನೇ ಸರ್ವಸ್ವ ಎಂದವನಿಗೆ ಭಕ್ತಿಯೋಗ ವಾಗುತ್ತದೆ.

ದೈಹಿಕ ಪ್ರಯೋಜನಗಳು :
ವಪುಕೃಶತ್ವಂವದನೇ ಪ್ರಸನ್ನ ತಾನಾದಸ್ಪುಟತ್ವಂ ನಯನೇ ಸುನಿರ್ಮಲೇ
ಅರೋಗತಾ ಬಿಂಧುಜಯೋಗ್ನಿ ನಾಡಿವಿಶುದ್ಧಿಹಠಸಿದ್ಧಿ ಲPಣಂ (ಹಠಯೋಗಪ್ರದೀಪಿಕಾ೨.೭೮)
ದೇಹ ಸಣ್ಣಗಾಗಿ (ಸಮ ಪ್ರಮಾಣದಲ್ಲಿ) ಮುಖ ಪ್ರಸನ್ನತೆಯಿಂದಿದ್ದು ಶರೀರದನಾದ ( ಕುಂಡಲಿನಿಶಕ್ತಿ) ಹೊಮ್ಮಿ ಕಣ್ಣುಗಳು ನಿರ್ಮಲ ವಾಗಿರುತ್ತದೆ. ಶರೀರವು ರೋಗ ರಹಿತವಾಗಿದ್ದು, ರೋಗ ನಿರೋಧಕ ಶಕ್ತಿಹೆಚ್ಚಾಗುವುದು. ಪ್ರಾಣ ಶಕ್ತಿ ಚಲಿಸುವ ನಾಡಿಗಳು ಶುದ್ಧವಾಗುವುವು. ಇವಿಷ್ಟು ಪ್ರಯೋಜನಗಳು ಬರಿಯ ವ್ಯಾಯಾಮದಿಂದ ದೊರೆ ಯುವುದೇ??
ಪ್ರಾಣಶಕ್ತಿಯ ಸರಾಗ ಚಲನೆಯಿಂದ ವಿವಿಧರೋಗಗಳೂ ಗುಣವಾಗುವುದು.
ಹಿಕ್ಕಾಶ್ವಾಸಶ್ಚಕಾಸಶ್ಚಶಿರಃಕರ್ಣಾಕ್ಷಿ ವೇದನಾಃ ಭವಂತಿ ವಿವಿಧಾ ರೋಗಾಃ ಪವನಸ್ಯಪ್ರಕೋಪತಃ (ಹಠಯೋಗಪ್ರದೀಪಿಕಾ೨.೧೭)
ಬಿಕ್ಕಳಿಕೆ, ಉಸಿರಾಟದಸಮಸ್ಯೆ, ಕೆಮ್ಮು, ತಲೆ, ಕಿವಿ, ಕಣ್ಣಿನ ನೋವುಗಳು ವಾಯುವಿನ ಪ್ರಕೋಪದಿಂದ ಉದ್ಭವ ವಾಗುವುದು. ಯೋಗದ ಮೂಲಕವೇ ಇವುಗಳಲ್ಲವುಗಳಿಗೆ ಪರಿಹಾರ ಸಾಧ್ಯ.
ಆಧುನಿಕ ವಿeನದ ರೀತಿಯಿಂದ ಗಮನಿಸಿದರೆ ಪ್ರಾಣವಾಯುವೆಂದರೆ ನಾವು ತೆಗೆದುಕೊಳ್ಳುವ ಆಮ್ಲಜನಕ. ಅದೇ ಶಕ್ತಿಯಮೂಲ. ಅಂದರೆ ಹೆಚ್ಚು ಹೆಚ್ಚು ಆಮ್ಲಜನಕ ಶರೀರಕ್ಕೆ ಸೇರಿದಾಗ, ದೇಹದಬಲವೂ, ಆರೋಗ್ಯವೂ ಹೆಚ್ಚಾಗುತ್ತದೆ. ಉದಾಹರಣೆಗೆ ನಾವು ಮಾಮೂಲಿಯಾಗಿ ಉಸಿರಾಡುವಾಗ ಕೇವಲ ೨೦ ರಿಂದ ೩೦ ಪ್ರತಿ ಶತ ಆಮ್ಲಜನಕ ಶರೀರಕ್ಕೆ ಸೇರುತ್ತದೆ. ಆದರೆ ಪ್ರಾಣಾಯಾಮ, ಕ್ರಮಬದ್ಧ ಉಸಿರಾಟದೊಂದಿಗೆ ಆಸನಗಳ ಅಭ್ಯಾಸ ಮಾಡಿದಾಗ ಶರೀರಕ್ಕೆ ಸೇರುವ ಆಮ್ಲಜನಕದ ಪ್ರಮಾಣ ತುಂಬಾನೇ ಜಾಸ್ತಿ. ಇದನ್ನು ನಾವು ದೈಹಿಕವ್ಯಾಯಾಮದ ಜೊತೆ ಹೊಂದಾಣಿಸಲು ಸಾಧ್ಯವಿಲ್ಲ.

ಮಾನಸಿಕ ಪ್ರಯೋಜನಗಳು
ಮನಃ ಪ್ರಶಮ ನೋಪಾಯಯೋಗಃಇತ್ಯಭಿ ಧೀಯತೇ (ಯೋಗವಾಸಿಷ್ಠ) ಮನಸ್ಸನ್ನು ಶಾಂತಗೊಳಿಸಲು ಇರುವ ಉಪಾಯವೇ ಯೋಗ. ಮೊದಲೇ ಹೇಳಿದಂತೆ ಯೋಗ ವೆಂದರೆ ದೇಹವನ್ನಲ್ಲ ಮನಸ್ಸನ್ನು ಬಾಗಿಸುವುದು.ಅದನ್ನು ನಾವುಧ್ಯಾನದ ಮೂಲಕ ಸಾಧಿಸಬಹುದು. ಧ್ಯಾನ ವೆಂದರೆ ಸನ್ಯಾಸಿಯಂತೆ ಕಾಡಿಗೆ ತೆರಳಿ, ಏಕಾಂತ ಸ್ಥಳಗಳಲ್ಲಿ ಇರಬೇಕು ಎನ್ನಬೇಕಾಗಿಲ್ಲ. ತತ್ರಪ್ರತ್ಯಯಏಕತಾನತಾಧ್ಯಾನಂ (ಪತಂಜಲಿ ಯೋಗಸೂತ್ರ೩.೨) ಮನಸ್ಸು ಆಲೋಚನೆಗಳ ಭಂಡಾರ , ಅವುಗಳೆಲ್ಲವನ್ನು ಪ್ರತ್ಯೇಕಿಸಿ ಕೇವಲ ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದೇ ಧ್ಯಾನ. ಪ್ರಥಮ ಶ್ರೇಣಿಯಲ್ಲಿ ಬರಬೇಕೆನ್ನುವ ವಿದ್ಯಾರ್ಥಿ ಗೆ ಮೊಬೈಲ, ಟಿ.ವಿ., ಕ್ರಿಕೆಟ್ ವೆಲೆ ಮನಸ್ಸು ಸೆಳೆದರೂ ಅದನ್ನೆ ದೂರಮಾಡ ಕೇವಲ ಓದಿನಲ್ಲಿ ಮನಸ್ಸನ್ನು ಕೇಂದ್ರೀಕರಿಸಿದಾಗ ದೊರೆ ಯುವ ಫಲವೇ ಅದು . ಅದುವೇ ಇಲ್ಲಿ ಧ್ಯಾನ. ಇತರೆ ದಿನಗಳಲ್ಲಿ ಮಾಡಲಾರದೆ ಉಳಿದ ಕೆಲಸವನ್ನು, ಉಳಿದೆ ಕೆಲಸವನ್ನು ಬದಿಗೊತ್ತಿ ಪೂರ್ತಿಗೊಳಿಸುವುದು. ಅದುವೂ ಧ್ಯಾನವೇ. ಬಹುಃಶ ಇವುಗಳೆ ಕೇವಲ ವ್ಯಾಯಾಮಗಳಿಂದ ಸಾಧ್ಯವೇ ಇಲ್ಲ!!

ಕೊನೆಯದಾಗಿ, ಭಗವದ್ಗೀತೆಯಲ್ಲಿ ಶ್ರೀಕೃಷ್ಣತಿಳಿಸಿರುವಂತೆ ದುಃಖ ಸಂಯೋಗ ವಿಯೋಗಯೋಗಃ ದುಃಖ ಜೊತೆಗೆ ಸಂಯೋಗ ಹೊಂದುವುದನ್ನು ದೂರಗೊಳಿಸುವುದೇ ಯೋಗ. ಮಾಡಬೇಕಿದ್ದ ಕೆಲಸಪೂರ್ತಿಯಾಗದಿದ್ದರೆ ಅದೇ ದುಃಖ, ಪೂರ್ತಿಯಾದಾಗ ಅದುವೇ ಸುಖ. ಆ ರೀತಿಯ ಸುಖಸಾಧನೆ ನಾವುಚಟುವಟಿಕೆಯಿಂದಿzಗ ಮಾತ್ರ ಸಾಧ್ಯ. ಅದಕ್ಕೆಂದೇ ವಿಶ್ವಯೋU ದಿನಾಚರಣೆಯನ್ನು ಜೂನ್ ೨೧ಕ್ಕೆ ಆರಿಸಿರುವುದು. ಯೋಗವು ಶರೀರವನ್ನು ಚಟುವಟಿಕೆಯಿಂದ ಇರಿಸಿದರೆ, ಜೂನ೨೧ ವರ್ಷದ ದೀರ್ಘ ಹಗಲಿರುವ ದಿನ. ಆದಿನ ನಾವು ಹೆಚ್ಚು ಚಟುವಟಿಕೆ ಯಿಂದಿರುತ್ತೇವೆ. ಜೂನ್ ೨೧ರ ಕುರಿತು ವಾಟ್ಸಾಪ್ನಲ್ಲಿ ಶಿವ, ಪಾರ್ವತಿ, ಪುರಾಣಗಳಿಂದೆ ಯೋಗ ದಿನವೆಂದು ಬಂದರೆ ತಿರುಗಿ ಮೆಸೇಜ್ಕಳಿಸಿ.. ಅವೆ ಶುದ್ಧ ಸುಳ್ಳು!!

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.