HomePage_Banner
HomePage_Banner
Breaking News

ಪತ್ನಿ ವೃದ್ಧ ಪತಿಯನ್ನು ಬಿಟ್ಟು ತಲೆಮರೆಸಿಕೊಂಡಿದ್ದಾರೆ-ಬಂಧುಗಳಾರು ಸಾಕಲು ಮುಂದೆ ಬರುತ್ತಿಲ್ಲ-ಒಬ್ಬಂಟಿ ವೃದ್ಧನಿಗೆ ಅನಾಥಾಶ್ರಮ ಭಾಗ್ಯ : ಏನಿದು ಕಥೆ ಈ ಸ್ಟೋರಿ ನೋಡಿ

ಸಾಲದ ಬಾಧೆಯಿಂದ ಬಸವಳಿದಿದ್ದ ಕುಟುಂಬವೊಂದರ ಹಿರಿಯನನ್ನು ಒಂಟಿಯಾಗಿ ಬಿಟ್ಟು ಪತ್ನಿ ತಲೆಮರೆಸಿಕೊಂಡಿರುವುದರಿಂದ, ಸುಳ್ಯದ ಶಾಂತಿನಗರದಲ್ಲಿರುವ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಅಕ್ಕಪಕ್ಕದವರಿಂದ ಊಟ ಕೊಟ್ಟು ಸಾಕಲ್ಪಡುತ್ತಿದ್ದ ವೃದ್ಧರನ್ನು ಅವರ ಸ್ನೇಹಿತರು ಕೊಡಗಿನ ಅನಾಥಾಶ್ರಮವೊಂದಕ್ಕೆ ಸೇರಿಸುವ ಮಾನವೀಯ ಪ್ರಯತ್ನ ಮಾಡಿದ್ದಾರೆ.
ಸುಳ್ಯದ ಕ್ಯಾಂಪ್ಕೋ ಶಾಖೆಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾಗಿದ್ದ ಪುಜಾರಿಕೋಡಿ ರೋಹಿತಾಶ್ವ ಗೌಡರು ಹಾಗೂ ಅವರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಭವಾನಿಯವರು ಸುಳ್ಯ ಶಾಂತಿನಗರದಲ್ಲಿ ನೆಲೆಸಿದ್ದರು. ಅವರ ಪುತ್ರ ಪೂರ್ಣೇಶ್ ಎಂಬವರು ವ್ಯವಹಾರದ ಸಂಬಂಧ ಮಾಡಿಕೊಂಡು ಕೋಟಿಗೂ ಮಿಕ್ಕಿದ ಸಾಲ ತೀರಿಸಲಾಗದೆ ಆತ ಊರು ಬಿಟ್ಟಿದ್ದ. ಸಾಲಗಾರರು ಅವನ ತಾಯಿ ಭವಾನಿಯವರನ್ನು ಕಾಡತೊಡಗಿದ್ದರು. ಮಗನಿಗೆ ಜಾಮೀನು ನಿಂತು ಚೆಕ್ ಕೊಟ್ಟು ಭವಾನಿಯವರ ಮೇಲೆ ಕೂಡಾ ಕೇಸುಗಳಾಗಿದ್ದವು.
ಇದೇ ಸಮಸ್ಯೆಗೆ ಸಂಬಂಧಪಟ್ಟು 7 ತಿಂಗಳ ಹಿಂದೆ ಸಾಲಗಾರರೋರ್ವರಿಂದ ಹಲ್ಲೆ ಘಟನೆಯೂ ನಡೆದಿತ್ತು. ಭವಾನಿ ಟೀಚರ್‌ರವರ ಪತಿ ರೋಹಿತಾಶ್ವರು ಅಸೌಖ್ಯದಿಂದ ಮನೆಯಲ್ಲಿ ಇದ್ದುದರಿಂದ ಅವರೊಡನೆ ಯಾರೂ ಸಾಲ ಮರುಪಾವತಿಸಲು ಕೇಳುತ್ತಿರಲಿಲ್ಲ. ಎಲ್ಲಾ ಜವಾಬ್ದಾರಿಯೂ ಭವಾನಿ ಟೀಚರ್‌ರ ಮೇಲಿತ್ತು. ಮಗನ ಸಾಲಕ್ಕಾಗಿ ಗುತ್ತಿಗಾರಿನ ಪೂಜಾರಿಕೋಡಿಯಲ್ಲಿರುವ ಆಸ್ತಿಯೂ ಮಾರಿಹೋಗಿತ್ತು. ಹಲವಾರು ಲಕ್ಷ ರೂ. ಕೈಸಾಲಗಳಾಗಿದ್ದರು. ಶಾಂತಿನಗರದಲ್ಲಿ ವಾಸವಿರುವ ಮನೆ ಕುಡಾ ನಿಕಟ ಬಂಧುವೊಬ್ಬರ ಹೆಸರಲ್ಲಿದ್ದುದರಿಂದ ಅವರೂ ಮನೆ ಖಾಲಿ ಮಾಡಲು ಹೇಳುತ್ತಿದ್ದರು.
ಇಷ್ಟೆಲ್ಲ ಸಂಕಷ್ಟ ಅನುಭವಿಸುತ್ತಿದ್ದ ಭವಾನಿ ಟೀಚರ್‌ರವರು ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಊರುಬಿಡಲು ನಿರ್ಧರಿಸಿದ್ದರು. 5 ತಿಂಗಳ ಹಿಂದೆ ಒಂದು ದಿನ, ತಾನು ಗುತ್ತಿಗಾರಿನ ಜಾಗದಲ್ಲಿರುವ ಮನೆಗೆ ಹೋಗುವುದಾಗಿ ಹೇಳಿ, ಶಾಂತಿನಗರದ ಮನೆಯಲ್ಲಿದ್ದ ಸಾಮಾನನ್ನೆಲ್ಲಾ ಕಟ್ಟಿ ಸಮೀಪದ ಚಂದ್ರಶೇಖರ ಎಂಬವರ ಮನೆಯಲ್ಲಿರಿಸಿ, ಕೆಲವೇ ದಿನಗಳಲ್ಲಿ ಬರುವುದಾಗಿ ಹೇಳಿ ಪತಿಯನ್ನು ಕರೆದುಕೊಂಡು ಹೋದರು. ಗುತ್ತಿಗಾರಿನ ಪೂಜಾರಿಕೋಡಿಯಲ್ಲಿರುವ ರೋಹಿತಾಶ್ವರ ತಮ್ಮ ಹೊನ್ನಪ್ಪರ ಮನೆಗೆ ರೋಹಿತಾಶ್ವರರನ್ನು ಕರೆದುಕೊಂಡು ಹೋದ ಭವಾನಿಟೀಚರ್‌ರವರು, 4 ದಿನದ ಮಟ್ಟಿಗೆ ನಿಮ್ಮ ಅಣ್ಣ ನಿಮ್ಮಲ್ಲಿರಲಿ. ನಾನು ನಾಲ್ಕು ದಿನದಲ್ಲಿ ಬರುತ್ತೇನೆ ಎಂದು ಹೇಳಿ ರೋಹಿತಾಶ್ವರನ್ನು ಅಲ್ಲಿ ಬಿಟ್ಟು ಹೋದವರು ಇದುವರೆಗೆ ನಾಪತ್ತೆ.

ಫೋನ್ ಸ್ವಿಚ್ಡ್ ಆಫ್. ನಾಲ್ಕೈದು ದಿನ ಕಳೆದರೂ ಹಿಂತಿರುಗಿ ಬಾರದಿದ್ದುದರಿಂದ, ಹೊನ್ನಪ್ಪ ಗೌಡರು ಶಾಂತಿನಗರದಲ್ಲಿರುವ ಚಂದ್ರಶೇಖರರ ಮನೆಗೆ ಬಂದು “ ನಾವು ಮನೆಯವರೆಲ್ಲರೂ ತಿರುಪತಿಗೆ ಹೋಗುವುದಿದೆ. ಬರುವುದು ೪ ದಿನವಾಗುತ್ತದೆ. ರೋಹಿತಶ್ವರನ್ನು ನಿಮ್ಮ ಮನೆಯಲ್ಲಿ ನಿಲ್ಲಿಸಿಕೊಳ್ಳಬಹುದಾ? ‘ ಎಂದು ಕೇಳಿದಾಗ ಚಂದ್ರಶೇಖರು ಒಪ್ಪಿಕೊಂಡು `ನಮ್ಮ ಮನೆಯಲ್ಲಿ ಅವರಿಗೆ ಕಷ್ಟವಾಗಬಹುದು.
ಅವರು ಮೊದಲಿದ್ದ ಮನೆಯಲ್ಲಿ ಇರಲಿ” ನಾವು ಊಟ ಕೊಡುವ ವ್ಯವಸ್ಥೆ ಮಾಡುತ್ತೇವೆ.” ಎನ್ನುತ್ತಾರೆ. ಅದರಂತೆ ಮರುದಿನ ರೋಹಿತಾಶ್ವರನ್ನು ಅವರ ತಮ್ಮ ಕರೆತಂದು ಬಿಟ್ಟು ಹೋಗುತ್ತಾರೆ. ಆ ಬಳಿಕ ತಮ್ಮನೂ ಇಲ್ಲ ಪತ್ನಿಯೂ ಇಲ್ಲ.
ಅಂದಿನಿಂದ ಆರಂಭವಾಗಿ ಇದುವರೆಗೆ ಚಂದ್ರನ್‌ರವರು ಪ್ರತಿದಿನ 3 ಹೊತ್ತು ಊಟ ತಂದು ಕೊಟ್ಟು ಹೋಗುತ್ತಾರೆ. ಒಮ್ಮೊಮ್ಮೆ ಚಹಾ ಕೂಡಾ ತಂದುಕೊಡುತ್ತಾರೆ. ಸಮೀಪದ ನಿವಾಸಿಗಳಾದ ಗಂಗಾಧರ್‌ನಲ್ಲಿ ಕೋಡಿ ಆನಂದ ಗೌಡರು ಕೂಡಾ ಚಹಾತಿಂಡಿ ತಂದು ಕೊಡುವುದಿದೆ. ರೋಹಿತಾಶ್ವರಿಗೆ ಈಗ 76 ವರ್ಷ ಪ್ರಾಯವಾಗಿದು, ಕೈಗಳು ನಡುಗುತ್ತವೆ. ಕಾಲುಗಳಲ್ಲಿ ಕೂಡಾ ಶಕ್ತಿ ಕಡಿಮೆಯಾಗಿ ನಡೆಯಲು ಕಷ್ಟ ಪಡುತ್ತಾರೆ. ಆದರೆ ಮನೆಯಲ್ಲಿ ಅವರೊಬ್ಬರೇ ಇರುವುದರಿಂದ ಸ್ನಾನ ಮತ್ತು ಶೌಚವನ್ನು ಅವರೇ ಹೋಗಿ ಮಾಡಿಕೊಳ್ಳುತ್ತಾರೆ.
ಕ್ಯಾಂಪ್ಕೋದಲ್ಲಿ ರೋಹಿತಾಶ್ವರ ಸಹೋದ್ಯೋಗಿಯಾಗಿದ್ದು, ಈಗ ನಿವೃತ್ತರಾಗಿರುವ ಲೋಕೇಶ್‌ರವರು ಪತ್ರಿಕೆಗಳಲ್ಲಿ ಬಂದ ಲೇಖನ ನೋಡಿ ಬಂದು ಮಾತನಾಡಿ, ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತಿಸಿದರು.
ಮಡಿಕೇರಿ ಶುಂಠಿಕೊಪ್ಪದ ವಿಕಾಸ ಜನಸೇವಾ ಟ್ರಸ್ಟ್‌ನವರು ಅನಾಥಾಶ್ರಮ ನಡೆಸುತ್ತಿರುವ ವಿಷಯ ತಿಳಿದು ಅವರನ್ನು ಸಂಪರ್ಕಿಸಿ, ಹೋಗಿ ಅಶ್ರಮ ನೋಡಿಕೊಂಡು ಬಂದು, ರೋಹಿತಾಶ್ವರನ್ನು ಅಲ್ಲಿಗೆ ಕರೆದೊಯ್ಯಲು ನಿರ್ಧರಿಸಿದರು. ಪಂಚಾಯತ್ ಮತ್ತು ಪೋಲೀಸ್ ಪರ್ಮಿಶ್ ಮಾಡಿಸಿಕೊಂಡರು. ಅದರಂತೆ ಜೂ.೧೩ರಂದು ಶುಂಠಿಕೊಪ್ಪದ ವಿಕಾಸ್ ಜನ ಸೇವಾ ಟ್ರಸ್ಟ್‌ನ ಧ್ಯಕ್ಷ ರಮೇಶ್‌ರವರು ತಮ್ಮ ಸಿಬ್ಬಂದಿ ಜತೆಗೆ ಸುಳ್ಯ ಶಾಂತಿನಗರಕ್ಕೆ ಬಂದರು. ಸ್ಥಳೀಯರ ಸಹಕಾರದೊಂದಿಗೆ ರೋಹಿತಾಶ್ವರನ್ನು ಕರೆದುಕೊಂಡು ಶುಂಠಿಕೊಪ್ಪದ ಪಟ್ಟೆಮನೆಯಲ್ಲಿರುವ ಜೀವನದಾರಿ ಅಶ್ರಮಕ್ಕೆ ಕರೆದೊಯ್ದರು. ವಿಕಾಸ್ ಜನ ಸೇವಾ ಟ್ರಸ್ಟ್ ಅನಾಥ ಆಶ್ರಮ ವಿಕಾಸ ಜನ ಸೇವಾ ಟ್ರಸ್ಟ್ ೫ ಮಂದಿ ಆಸಕ್ತರು ಸೇರಿ ರೂಪಿಸುವ ಸಂಸ್ಥೆ. ಇವರು ಮಡಿಕೇರಿಯಲ್ಲಿ ಕೆಲವರ್ಷ ಅನಾಥಾಶ್ರಮ ನಡೆಸುತ್ತಿದ್ದರು. ಈಗ ಅದನ್ನು ಶುಂಠಿಕೊಪ್ಪದ ಗದ್ದೆಹಳ್ಳಿ, ಪಟ್ಟೆ ಮನೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಸುಮಾರು 20ಮಂದಿ ಅನಾಥ ವೃದ್ಧರು ಈಗಾಗಲೇ ಇದ್ದಾರೆ ಅವರನ್ನು ಸಾಕಲು ಸರಕಾರದಿಂದ ಅನುದಾನ ಏನೂ ದೊರೆಯುತ್ತಿಲ್ಲ. ಸಹೃದಯಿಗಳು ದಾನರೂಪವಾಗಿ ಕೊಡುವ ಸಹಕಾರವನ್ನು ನೆಚ್ಚಿಕೊಂಡು ರಮೇಶ್ ಮತ್ತವರ ಸಂಗಡಿಗರು ಈ ಸೇವೆಯನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.