HomePage_Banner
HomePage_Banner
Breaking News

ಬೊಳ್ಳಾಜೆ ಘಟ ಸಮಿತಿ ಉದ್ಘಾಟನೆ


ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನಂ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೊಳ್ಳಾಜೆ ಘಟಸಮಿತಿಯು ಜೂ.16 ರಂದು ಬೊಳ್ಳಾಜೆ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ದೀಪಬೆಳಗಿಸಿ ಉದ್ಘಾಟಿಸಿದರು. ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಒಡಿಯೂರು ಗ್ರಾಮವಿಕಾಸ ಯೋಜನೆಯ ಸುಳ್ಯ ತಾಲೂಕಿನ ವಿಸ್ತರಣಾಧಿಕಾರಿ ಮುರಳೀಧರ ಎರ್ಮೈಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿ ಪರ ಕೃಷಿಕ ರಾಜರಾಮ್ ಭಟ್ ಬೆಟ್ಟ, ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಶ್ಯಾಮಲ ಎ.ವಿ, ಮುಖ್ಯಶಿಕ್ಷಕ ಸೀತಾರಾಮ ಸಿ.ಎನ್. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಬಾಳೆಗುಂಡಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಘಟಸಮಿತಿಯ ಅಧಿಕಾರ ಹಸ್ತಾಂತರ ಹಾಗೂ ಭಜನಾ ತಂಡದ ಉದ್ಘಾಟನೆಯು ನಡೆಯಿತು. ನೂತನ ಘಟಸಮಿತಿಯ ಅಧ್ಯಕ್ಷ ಗಣೇಶ್ ಬೊಳ್ಳಾಜೆ, ಉಪಾಧ್ಯಕ್ಷ ಕಿಶೋರ್ ಕೊರತ್ತೋಡಿ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ವನಜಾಕ್ಷಿ ಚೆನ್ನಡ್ಕ, ಗೀತಾ ದಾಸರಬೈಲು, ಸಂಯೋಜಕಿ ಶ್ರೀಮತಿ ಹರಿಣಾಕ್ಷಿ, ಸೇವಾದೀಕ್ಷಿತೆ ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸುಚಿತ್ರಾ ಬೊಳ್ಳಾಜೆ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಘಟಸಮಿತಿ ಕಾರ್ಯದರ್ಶಿ ಶ್ರೀಮತಿ ದೇವಕಿ ವಂದಿಸಿದರು. ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಭಾಸ್ಕರ ರಾವ್ ಚೆನ್ನಡ್ಕ, ಬೊಳ್ಳಾಜೆ ವೀರಾಂಜನೇಯ ಸ್ಪೋರ್ಟ್ಸ್ ಪ್ರಮೋದ್ ಬೊಳ್ಳಾಜೆ, ರಾಜಶೇಖರ ಬೊಳ್ಳಾಜೆ, ಗೋಪಾಲ ಕಿಲಾರ್ಕಜೆ, ಭಾರತಿ ಬೊಳ್ಳಾಜೆ, ಗಂಗಾಧರ ಕೊರತ್ತೋಡಿ, ಜಯಲಕ್ಷ್ಮೀ ಕುದ್ಪಾಜೆ, ಮೋಹನ ಸಿಡ್ಲುಕಜೆ, ಜಲಜಾಕ್ಷಿ ಕೊರತ್ತೋಡಿ, ಚರಣ್ ಕೊರತ್ತೋಡಿ, ಸತ್ಯನಾರಾಯಣ ಬೊಳ್ಳಾಜೆ, ವಿಷ್ಣುಕೃಪ ಗ್ರಾ.ವಿ.ಯೋ. ಸದಸ್ಯರು ಸಹಕರಿಸಿದರು. ಕಾರ್ಯಕ್ರಮದ ಮೊದಲು ಭಜನಾ ಕಾರ್ಯಕ್ರಮ ನಡೆಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.