HomePage_Banner
HomePage_Banner
HomePage_Banner
Breaking News

ಸುಬ್ರಹ್ಮಣ್ಯ : ಪುರುಷರಾಯ ಬೆಟ್ಟದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ


ಪುರುಷರಾಯ ಬೆಟ್ಟದಲ್ಲಿ ಗುಡಿಗಳ ಅನುಜ್ಞಾ ಕಲಶ ಜೂ.18 ರಂದು ನಡೆಯಿತು. ಇಲ್ಲಿ ಇರುವ ಪುರುಷರಾಯ ದೈವಸ್ಥಾನ, ಕಾಚುಕುಜುಂಬ ದೈವಸ್ಥಾನ, ಹೊಸಳಿಗಮ್ಮ ದೈವಸ್ಥಾನ, ಕೆಂಚಾರಾಯ ದೈವಸ್ಥಾನ, ಪೊಟ್ಟ ಪಂರ್ಜುಲಿ ದೈವಸ್ಥಾನ, ಬೆಟ್ಟದಲ್ಲಿ ನೈವೇದ್ಯ ಕೋಣೆ, ಗುಡಿಗಳಿಗೆ ಆವರಣ ಗೋಡೆ ಇತ್ಯಾದಿ ಕಾಮಗಾರಿ ನಡೆಯಲಿದೆ ಇಂದು ಇಲ್ಲಿ ಅನುಜ್ಞಾ ಕಲಶ ನಡೆಯಿತು. ಆ ಬಳಿಕ ದೈವಗಳ ಪದ್ಮಕಲ್ಲು, ಮುಗುಳಿ, ಉಯ್ಯಾಲೆ ಮುಂತಾದವುಗಳನ್ನು ಬಾಲಾಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯ ಭಾಲಕೃಷ್ಞ ಬಳ್ಳೇರಿ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಶಿವರಾಮ ರೈ, ಮೋಹನ್ ಎಂ.ಕೆ, ಪ್ರಕಾಶ್ ಕುಂದಾಪುರ, ಶೋಬಿತ್ ನೂಚಿಲ ಮತ್ತಿತರರು ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ, ಷಣ್ಮುಖ ಭಟ್ ಮತ್ತಿತರು ಪೂಜಾ ಕಾರ್ಯ ನಡೆಸಿಕೊಟ್ಟರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.