HomePage_Banner
HomePage_Banner
Breaking News

ವ್ಯವಸ್ಥಾಪನಾ ಸಮಿತಿ ಅಧಿಕಾರ ಅವಧಿ ಅಂತ್ಯ : ಅಡ್ಕಾರು ದೇವಳದಲ್ಲಿ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಆಡಳಿತದ ಅಧಿಕಾರಾವಧಿ ಜೂ.6 ಕ್ಕೆ ಕೊನೆಗೊಂಡಿದ್ದು, ಅವಧಿ ಮುಗಿದ ಹಿನ್ನೆಲೆಯಲ್ಲಿ ಜೂ.18 ರಂದು ಆಡಳಿತಾಧಿಕಾರಿಯವರು ಅಧಿಕಾರ ಸ್ವೀಕರಿಸಿದ್ದಾರೆ.
ಜಾಲ್ಸೂರು ಗ್ರಾಮ ಪಂಚಾಯತ್ ನ ಪ್ರಭಾರ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡ ಅವರಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಭಟ್ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಸಿಬ್ಬಂದಿ ಚಿದಾನಂದ ದರ್ಖಾಸ್ತು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶಿವಾನಂದ ರಾವ್ ಗಬ್ಬಲಡ್ಕ, ಶ್ರೀಮತಿ ಮಮತ ನಾರಾಯಣ ಅಡ್ಕಾರು, ಲಿಂಗಪ್ಪ ನಾಯ್ಕ ವಿನೋಬನಗರ, ಹರಿಪ್ರಕಾಶ್ ಅಡ್ಕಾರು, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು ಹಾಗೂ ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.