HomePage_Banner
HomePage_Banner
Breaking News

ಸುಳ್ಯ ಎನ್ನೆಂಪಿಯುಸಿ: ವಿದ್ಯಾರ್ಥಿ ಸಂಘದ ಉದ್ಘಾಟನೆ & ಪ್ರತಿಭಾ ಪುರಸ್ಕಾರ

ಮಕ್ಕಳ ಬೆಂಬಲ ಇಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ ಹೆತ್ತವರು, ಶಿಕ್ಷಕರಿಗೆ ವಿದ್ಯಾರ್ಥಿಗಳ ಬೆಂಬಲವೂ ಅಗತ್ಯ. ಜಗತ್ತಲ್ಲಿ ಹೊಸತನ ಬೇಕು ಪಠ್ಯ ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಮ್ಮ ಜ್ಞಾನ, ತಿಳುವಳಿ, ವಿಶ್ಲೇಷಣೆಗಳ ಮೂಲಕ ನಮ್ಮ ಉದ್ದೇಶ ಈಡೇರಿಸಲು ಸಾಧ್ಯ ಸೃಜನಶೀಲತೆಯನ್ನು ಬೆಳೆಸಿಕೊಳ್ಳಿ. ಪ್ರಪಂಚದ ಸಾಧಕರು ಶ್ರದ್ಧೆಯಿಂದ ಸಾಧನೆಗೈದಿದ್ದಾರೆ. ನಮಗೆ ಛಲ, ಧೈರ್‍ಯ, ನಿರ್ಧಾರ ಸ್ಪಷ್ಟ ಇದ್ದಾಗ ಸಾಧನೆಗೈಯಲು ಸಾಧ್ಯ. ನಾವು ದಿನಂಪ್ರತಿ ಮಾಡುವ ಒಳ್ಳೆಯ ಕೆಲಸಗಳನ್ನು ಅವಲೋಕನ ಮಾಡಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ನಮಗೆ ಬೇಕು.ಸ್ವಚ್ಛತೆಗೆ ನಾವು ಆದ್ಯತೆ ನೀಡಬೇಕು ಎಂದು ಜೇಸಿಐ ರಾಷ್ಟೀಯ ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್ ಹೇಳಿದರು.
ಅವರು ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ & ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಭಾಧ್ಯಕ್ಷತೆಯನ್ನು ಎ.ಓ.ಎಲ್.ಇ(ರಿ) ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ಶೋಭಾ ಚಿದಾನಂದ, ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆಯ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೋ.ಡಿ.ಜವರೇ ಗೌಡ, ಎನ್ನೆಂಸಿಯ ಗೌರವ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಬಾಲಚಂದ್ರ ಗೌಡ, ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ , ವಿ.ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್ ,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರಜತ್ ಕುಮಾರ್.ಎ , ವಿಸ್ಮಿತ ಕೆ.ಪಿ, ಶ್ರೇಯ ಡಿ , ಯಜ್ಞೇಶ್ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಂದಿತ & ಬಳಗದವರು ಪ್ರಾರ್ಥಿಸಿದರು. ವಿ.ಸಂಘದ ನಾಯಕ ರಜತ್ ಕುಮಾರ್ ಎ ಸ್ವಾಗತಿಸಿದರು. ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಪ್ರಸ್ತಾವನೆಗೈದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್ ಪ್ರತಿಜ್ಞಾವಿಧಿ ಬೋಧಿಸಿದರು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕರ ಪಟ್ಟಿಯನ್ನು ಕನ್ನಡ ಉಪನ್ಯಾಸಕಿ ಕು.ಬೇಬಿ ವಿದ್ಯಾ ಪಿ.ಬಿ ವಾಚಿಸಿದರು. ವಿದ್ಯಾರ್ಥಿನಿಯರಾದ ಅಭಿರಕ್ಷ ಕೃಷ್ಣವೇಣಿ, ಸುಷ್ಮ ಎಸ್ ಅನಿಸಿಕೆ ವ್ಯಕ್ತಪಡಿಸಿದರು. ವಿ.ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ವಿಸ್ಮಿತ ವಂದಿಸಿದರು. ವಿದ್ಯಾರ್ಥಿಗಳಾದ ಆತ್ಮೀಯ ಸಿ.ಎಸ್ & ಪ್ರದ್ಯುಮ್ನ ಯು.ವಿ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.