ರಾಜ್ಯಮಟ್ಟದ ಪದಾಧಿಕಾರಿಯಾದ ನನ್ನನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸಿದ್ದೀರಿ : ಸುಳ್ಯ ನಗರ ಬಿಜೆಪಿಗೆ ಎಂ. ವೆಂಕಪ್ಪ ಗೌಡ ಪ್ರತಿಕ್ರಿಯೆ

Advt_Headding_Middle
Advt_Headding_Middle
Advt_Headding_Middle

ಸುಳ್ಯ ನಗರ ಬಿಜೆಪಿಯವರು ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಎಂ. ವೆಂಕಪ್ಪ ಗೌಡರ ವಿರುದ್ಧ ಮಾಡಿದ ಟೀಕೆಗೆ ವೆಂಕಪ್ಪ ಗೌಡರು ಪ್ರತಿಕ್ರಿಯಿಸಿದ್ದು, ರಾಜ್ಯ ಮಟ್ಟದ ಪದಾಧಿಕಾರಿಯಾದ ನನ್ನನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸಿದ ನಿಮಗೆ ಧನ್ಯವಾದಗಳು ಎಂದಿದ್ದಾರೆ.


ಕಾಂಗ್ರೆಸ್ಸಿನ ರಾಜ್ಯ ಮಟ್ಟದ ಪದಾಧಿಕಾರಿಯಾದ ನನ್ನನ್ನು ನಮ್ಮ ರಾಷ್ಟ್ರಧ್ಯಕ್ಷರ ಸಾಲಿಗೆ ಸೇರಿಸಿದ್ದೀರಿ. ನಿಮಗೆ ಅಭಿನಂದನೆಗಳು. ನೀವು ಕಾಂಗ್ರೆಸ್ ವಿರೋಧಿಯಾಗಿ ರಾಹುಲ್ ಗಾಂಧಿಯವರನ್ನು ಸಣ್ಣದಾಗಿ ಕಂಡಿರಬಹುದು. ರಾಹುಲ್ ಗಾಂಧಿಯವರ ಅಜ್ಜಿ ಶ್ರೀಮತಿ ಇಂದಿರಾ ಗಾಂಧಿ , ತಂದೆ ರಾಜೀವ್ ಗಾಂಧಿಯವರು ಈ ದೇಶದ ಪ್ರಧಾನಿಗಳಾಗಿದ್ದು ದೇಶಕ್ಕಾಗಿ, ಜನತೆಗಾಗಿ ತನ್ನ ಪ್ರಾಣವನ್ನೇ ನೀಡಿದವರು. ಬಳಿಕ ತನ್ನ ತಾಯಿಗೆ ಪ್ರಧಾನಿ ಪಟ್ಟ ಎರಡೆರಡು ಬಾರಿ ಒದಗಿ ಬಂದಾಗ ಪ್ರಧಾನಿ ಪಟ್ಟ ತ್ಯಾಗ ಮಾಡಿ ಪಕ್ಷಕ್ಕಾಗಿ ತನ್ನ ಅರ್ಪಣಾ ಮನೋಭಾವನೆಯನ್ನು ಬೆಳೆಸಿಕೊಂಡು ಬಂದವರು. ಇವರ ಮಗನಾದ ತ್ಯಾಗಮನೋಭಾವನೆಯ ರಕ್ತವನ್ನು ಹೊಂದಿರುವ ರಾಹುಲ್‌ಗಾಂಧಿಯವರ ಬಗ್ಗೆ ರಾಜಕೀಯವಾಗಿ ಮಾತನಾಡಬಹುದೇ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಮಾತನಾಡುವ ಹಕ್ಕು ಇರುವುದಿಲ್ಲ. ಅಷ್ಟಕ್ಕೂ ನಾನು ಚುನಾವಣೆಯಲ್ಲಿ ಮತದಾರರ ಮತವನ್ನು ಪ್ರೀತಿ ವಿಶ್ವಾಸದಿಂದಲೇ ಚುನಾಯಿತ ಮತಗಳ ಪೈಕಿ ೮೦% ಮತವನ್ನು ಪಡೆದಿದ್ದೇನೆ. ನಾನು ಅನ್ಯರಂತೆ ಸೋಲುವ ಭಯದಿಂದ ಅಪಪ್ರಚಾರ ಮಾತುಗಳನ್ನಾಡಿ ಕೋಮುಭಾವನೆಯ ವಿಷಬೀಜವನ್ನು ಬಿತ್ತಿ ಗೆದ್ದಿರುವುದಿಲ್ಲ. ನನ್ನ ವಾರ್ಡ್ ಅನ್ನು ನೀವು ನೀವು ಕೇರಳದ ವಯನಾಡು ಎಂದು ಕರೆಯುವುದಾದರೆ ನನ್ನಿಂದ ಯಾವುದೇ ಅಭ್ಯಂತರ ಇರುವುದಿಲ್ಲ. ಆದರೆ ೧೦ವರ್ಷಗಳಿಂದ ಒಂದು ಗ್ರಾಮದ ಅಭಿವೃದ್ಧಿ ಮಾಡಲು ಸಾಧ್ಯವಾಗದ ಆದರ್ಶ ಗ್ರಾಮಕ್ಕೆ ಹೋಲಿಸಿ ಕರೆಯದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ನಮ್ಮ ಠೀಕೆ ಟಿಪ್ಪಣಿಗಳು ಏನಿದ್ದರೂ ಆಡಳಿತದಲ್ಲಿ ಅಭಿವೃದ್ಧಿ ಮಾಡಬೇಕು ಎನ್ನುವ ಸದುದ್ದೇಶದಿಂದ ಠೀಕಿಸುತ್ತೇವೆ ಹೊರತು ನೀವು ಹೇಳಿದ ಪ್ರಚಾರಕ್ಕಾಗಿ ಈ ಹಿಂದೆಯೂ ಕೆಲಸ ಮಾಡಲಿಲ್ಲ, ಇನ್ನು ಮುಂದೆಯೂ ಮಾಡುವವರಲ್ಲ ಎಂದು ವೆಂಕಪ್ಪ ಗೌಡರು ಪ್ರತಿಕ್ರಿಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.