ಸುಳ್ಯದಲ್ಲಿ ನಡೆದಿದೆ ’ರಕ್ತ ಕ್ರಾಂತಿ’ ! – ವಾಟ್ಸಾಪ್ ಗ್ರೂಪ್‌ಗಳ ಮೂಲಕ ಬೆಸೆದಿದೆ ರಕ್ತ ಸಂಬಂಧ, ಇದು ಸಮಾಜದ ಮಾದರಿ ಅನುಬಂಧ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

( ಬರಹ : ದುರ್ಗಾಕುಮಾರ್ ನಾಯರ್‌ಕೆರೆ)

ಮನುಷ್ಯ ಬದುಕಿನಲ್ಲಿ ರಕ್ತಕ್ಕಿರುವ ಪ್ರಾಧಾನ್ಯತೆ ಬಹಳವಾದದ್ದು. ಖಾಯಿಲೆ ಬಿದ್ದಾಗ, ಅಪಘಾತ, ಅವಘಡಗಳು ಸಂಭವಿಸಿದಾಗ ತುರ್ತು ರಕ್ತದ ಅಗತ್ಯ ಇz ಇರುತ್ತದೆ. ಈ ಸಂದರ್ಭದಲ್ಲಿ ರಕ್ತದಾನಿಗಳಿಗಾಗಿ ನಿರೀಕ್ಷಿಸಲಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಇದು ಬಹಳ ಸುಲಭವೂ ಹೌದು. ಆದರೆ ಇದಕ್ಕೆಂದೇ ಆರಂಭಿ ಸಲಾದ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಕ್ಷಿಪ್ರವಾಗಿ ಈ ಮಾಹಿತಿ ಎಲ್ಲೆಡೆ ತಲುಪಿ ಕ್ಷಣ ಮಾತ್ರದಲ್ಲಿ ರಕ್ತದ ವ್ಯವಸ್ಥೆಯಾಗುತ್ತದೆ. ಇಂತಹ ರಕ್ತ ದಾನಿಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸುಳ್ಯ ದಾಖಲೆಯನ್ನೇ ಮಾಡಿದೆ. ಇವುಗಳ ಶಿಸ್ತುಬದ್ಧ ಸಂಘಟನೆಯಿಂದ ರೋಗಿಗಳು ಕ್ಷಣಮಾತ್ರದಲ್ಲಿ ತಮಗೆ ಬೇಕಾದ ರಕ್ತ ಪಡೆದು ಜೀವ ಉಳಿಸಿಕೊಳ್ಳಲು ಕಾರಣವಾಗಿದೆ.

ಮೊದಲಾದರೆ ರಕ್ತದಾನಿಗಳ ಮಾಹಿತಿ ಸಿಗಬೇಕಿದ್ದರೆ ತ್ರಾಸದ ಕೆಲಸ ವಾಗಿತ್ತು. ಅಷ್ಟಾಗಿ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಇರಲಿಲ್ಲ. ವಿವಿಧ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಶಿಬಿರಗಳನ್ನು ನಡೆಸಿ, ರಕ್ತ ಸಂಗ್ರಹಿಸಲಾಗುತ್ತಿತ್ತು.
ಸುಳ್ಯದಲ್ಲಿ ಕೆವಿಜಿ ಬ್ಲಡ್‌ಬ್ಯಾಂಕಿ ನಲ್ಲಿ ಮಾತ್ರ ರಕ್ತ ನೀಡುವ ವ್ಯವಸ್ಥೆ ಇದೆ. ಸರಕಾರಿ ಆಸ್ಪತ್ರೆಯಲ್ಲಿ ಕೇವಲ ಸಂಗ್ರಹಣೆ ವ್ಯವಸ್ಥೆಯಷ್ಟೇ ಇದೆ.


ಸಾಧಾರಣವಾಗಿ ಯಾವುದೇ ರೋಗಿಗೆ ರಕ್ತ ಬೇಕಾದ ಸಂದರ್ಭದಲ್ಲಿ ಆಸ್ಪತ್ರೆಯವರು ರೋಗಿಯ ಕಡೆಯ ವರಿಗೆ ನಿರ್ದಿಷ್ಟ ಗುಂಪಿನ ರಕ್ತ ತರುವಂತೆ ಸೂಚನೆ ನೀಡುತ್ತಾರೆ. ಮತ್ತು ರೋಗಿಗೆ ಬ್ಲಡ್‌ಬ್ಯಾಂಕಿನಲ್ಲಿ ಅದಾಗಲೇ ಸಂಗ್ರಹಿಸಲ್ಪಟ್ಟ ರಕ್ತವನ್ನು ನೀಡುತ್ತಾರೆ. ರಕ್ತ ಬೇಕೆಂದು ಸೂಚನೆ ಪಡೆದ ರೋಗಿಯ ಕಡೆಯವರು ರಕ್ತದಾನಿಗಳ ಸಂಪರ್ಕದ ಕಾರ್ಯ ಆರಂಭಿಸುತ್ತಾರೆ. ಈಗ ಆ ಕಾರ್ಯವನ್ನು ವಾಟ್ಸಾಪ್ ಗ್ರೂಪ್‌ಗಳು ಕೈಗೆತ್ತಿಕೊಂಡಿವೆ. ಒಂದರಿಂದ ಒಂದು ಗುಂಪಿಗೆ ಈ ಮಾಹಿತಿಗಳು ಪೂರ್ಣ ವಿವರಗಳೊಂದಿಗೆ ಶೇರ್ ಆಗುತ್ತಾ ಹೋಗುತ್ತದೆ. ರಕ್ತದಾನಿಗಳು ಗ್ರೂಪ್ ಅಡ್ಮಿನ್‌ಗಳನ್ನು ಸಂಪರ್ಕಿಸಿ ಆ ಮೂಲಕ ಬ್ಲಡ್ ಬ್ಯಾಂಕಿಗೆ ತೆರಳಿ ರಕ್ತ ನೀಡುತ್ತಾರೆ. ಆ ರಕ್ತವನ್ನು ಶೇಖರಿ ಸಿಡಲಾ ಗುತ್ತದೆ.

ರಕ್ತ ದಾನಕ್ಕೂ ನಿರ್ದಿಷ್ಟ ವಾದ ನಿಬಂಧ ನೆಗಳಿವೆ. ರಕ್ತ ದಾನಕ್ಕೆ ಮುಂಚೆ ವಿವಿಧ ಪರೀಕ್ಷೆ ಗಳೂ ಕೂಡಾ ನಡೆ ಯುತ್ತದೆ. ರಕ್ತದ ಗುಂಪುಗಳಲ್ಲಿ ಹಲವು ವಿಧಗಳಿದ್ದು, ಕೆಲ ಗುಂಪಿನ ರಕ್ತ ಸಿಗು ವುದು ತೀರಾ ವಿರಳವಾಗಿರುತ್ತದೆ.
ಜೀವ ಉಳಿಸುವ ವಾಟ್ಸಾಪ್ ಗ್ರೂಪ್‌ಗಳು: ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ತನ್ನ ಪ್ರಭಾವ ಹೆಚ್ಚಿಸಿದ ಸಂದರ್ಭ ವಾಟ್ಸಾಪ್‌ಗಳಲ್ಲೇ ರಕ್ತ ದಾನಿಗಳ ಗುಂಪು ತೆರೆದು ಅವುಗಳ ಮೂಲಕ ಮಾಹಿತಿ ನೀಡಿ ರಕ್ತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸುಳ್ಯ ತಾಲೂಕಿನಲ್ಲಿ ಇಂತಹ ಹಲವಾರು ಗುಂಪುಗಳು ಕಾರ್ಯಾಚರಿಸುತ್ತಿದೆ. ಪ್ರತಿ ಗುಂಪಿನಲ್ಲೂ ಸಂಘ ಸಂಸ್ಥೆಗಳ ಪ್ರಮುಖರು, ರಕ್ತದಾನಿಗಳು ಮತ್ತು ರಕ್ತದಾನಕ್ಕೆ ಸಹಾಯ ಮತ್ತು ಮಾಹಿತಿ ನೀಡ ಬಹುದಾದ ವ್ಯಕ್ತಿಗಳು ಸದಸ್ಯ ರಾಗಿದ್ದಾರೆ. ಅವರು ಇತರ ಕಡೆಗೆ ಈ ಮಾಹಿತಿಯನ್ನು ಶೇರ್ ಮಾಡುವುದರಿಂದ ಅತಿ ಶೀಘ್ರವಾಗಿ ರಕ್ತ ದಾನಿಗಳು ಆಸ್ಪತ್ರೆಗಳಿಗೆ ತಲುಪಿ ರಕ್ತದಾನ ಮಾಡುತ್ತಾರೆ. ಸುಳ್ಯ ಮಾತ್ರವಲ್ಲದೇ ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಿಯೂ ರಕ್ತದಾನ ಮಾಡುತ್ತಾರೆ. ಹೀಗೆ ಒಂದು ಪುಟ್ಟ ಸಂದೇಶ ಎಷ್ಟೋ ಮಂದಿಯ ಜೀವ ಉಳಿಸಿದ ಕೀರ್ತಿ ಸುಳ್ಯದ ಈ ವಾಟ್ಸಾಪ್ ಗ್ರೂಪ್‌ಗಳಿಗೆ ಸಲ್ಲುತ್ತದೆ. ಆ ಮೂಲಕ ಇಲ್ಲಿ ಒಬ್ಬರಿಗೊಬ್ಬರು ರಕ್ತ ಸಂಬಂಧಿಗಳಾಗಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಕೆವಿಜಿ ಬ್ಲಡ್ ಡೋನರ‍್ಸ್ , ಯುವ ತೇಜಸ್ಸು, ಸಂಜೀವಿನಿ ರಕ್ತ ನಿಧಿ, ಅಮೃತ ಗಂಗಾ ರಕ್ತ ನಿಧಿ, ಡೊನೇಟ್ ಬ್ಲಡ್ ಸೇವ್ ಲೈಫ್ , ಗಿವ್ ಬ್ಲಡ್ ಸೇವ್, ಯುವ ಬ್ರಿಗೇಡ್, ಬ್ಲಡ್ ಹೆಲ್ಪ್ ಲೈನ್, ಜಯಕರ್ನಾಟಕ ರಕ್ತದಾನಿಗಳ ಗುಂಪು ಮೊದಲಾದ ರಕ್ತದಾನಿಗಳ ಗುಂಪು ಕಾರ್ಯಾಚರಿಸುತ್ತಿದೆ. ಪ್ರತಿಯೊಂದು ಗುಂಪಿನಲ್ಲೂ ಒಬ್ಬರಿಂದ ಐವರ ವರೆಗೆ ಅಡ್ಮಿನ್‌ಗಳಿದ್ದು, ೨೦೦ ರಿಂದ ೨೫೦ ರವರೆಗೆ ಸದಸ್ಯರಿರುತ್ತಾರೆ.
ಸುಳ್ಯದ ರಕ್ತದ ಬೇಡಿಕೆ ಈ ಗುಂಪುಗಳಿಗಷ್ಟೇ ಸೀಮಿತ ಗೊಳ್ಳದೆ ಹೊರಗಿನ ಗುಂಪು ಗಳಿಗೆ ಹಾಗೂ ಬ್ಲಡ್ ಹೆಲ್ಪ್‌ಲೈನ್‌ಗಳಿಗೂ ರವಾನೆ ಯಾಗುತ್ತದೆ. ಅನೇಕ ಗುಂಪುಗಳಲ್ಲಿ ರಕ್ತದಾನಿಗಳು ರಕ್ತ ನೀಡುವ ಸಂದರ್ಭ ಅದರ ಫೋಟೋ ತೆಗೆದು ಗುಂಪಿನಲ್ಲಿ ಪ್ರಕಟಿಸಿ ರಕ್ತದಾನಿಗಳಿಗೆ ಪ್ರೋತ್ಸಾಹ ನೀಡುವ ಸಂದರ್ಭಗಳೂ ಇದೆ. ಹೀಗೇ ವಾಟ್ಸಾಪ್ ಗುಂಪಿನ ಮೂಲಕ ನಿರಂತರವಾಗಿ ಮಾಹಿತಿ ವಿನಿ ಮಯ ನಡೆಸಿ, ರಕ್ತದಾನದ ವ್ಯವಸ್ಥೆ ಮಾಡುವ ಒಂದು ಪ್ರಕ್ರಿಯೆ ಸಮಾಜಕ್ಕೆ ಆದರ್ಶವಾದ ಸಂದೇಶ ನೀಡುತ್ತಿದೆ ಮತ್ತು ಇದರಲ್ಲಿ ಸುಳ್ಯ ಮುಂಚೂಣಿ ಯಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ.

ನೂರಕ್ಕೂ ಅಧಿಕ ಅಡ್ಮಿನ್‌ಗಳು…1500ಕ್ಕೂ ಹೆಚ್ಚು ಸದಸ್ಯರು…

ಸುಳ್ಯದ ಹಲವು ಗ್ರೂಪ್‌ಗಳ ಅಡ್ಮಿನ್‌ಗಳ ಮಾಹಿತಿ ಮತ್ತು ಸದಸ್ಯರ ಸಂಖ್ಯೆ ಇಲ್ಲಿದೆ. ಕೆವಿಜಿ ಬ್ಲಡ್ ಡೋನರ‍್ಸ್ ವಾಟ್ಸಾಪ್ ಗುಂಪಿನಲ್ಲಿ ಪಿ.ಬಿ. ಸುಧಾಕರ ರೈ, ಗೌತಮ್ ಭಟ್, ರಫೀಕ್ ಪಡು, ಗುರುಪ್ರಸಾದ್ ಪಂಜ, ಪ್ರಸಾದ್ ಕಾಟೂರು, ಗಗನ್ ನಾಲ್ಗುತ್ತು, ಅಲ್ತಾಫ್ ಅಡ್ಮಿನ್‌ಗಳಾಗಿದ್ದು ಈ ಗುಂಪಿನಲ್ಲಿ 255 ಸದಸ್ಯರಿದ್ದಾರೆ. ಪಂಜದ ಯುವತೇಜಸ್ಸು ರಕ್ತನಿಧಿ ವಾಟ್ಸಾಪ್ ಗುಂಪಿನಲ್ಲಿ ೨೪೦ ಸದಸ್ಯರಿದ್ದು ಆಶಿತ್ ಕಲ್ಲಾಜೆ, ಗುರುಪ್ರಸಾದ್ ಪಂಜ, ಜನಾರ್ಧನ ನಾಗತೀರ್ಥ, ಬಾಲಕೃಷ್ಣ ಪಲ್ಲೋಡಿ, ಪವನ್ ಪಲ್ಲತಡ್ಕ ಸೇರಿದಂತೆ ೨೦ಕ್ಕೂ ಅಧಿಕ ಅಡ್ಮಿನ್‌ಗಳಿದ್ದಾರೆ.

ಬ್ಲಡ್ ಹೆಲ್ಪ್ ಲೈನ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ರಫೀಕ್ ಪಡು, ಪಿ.ಬಿ.ಸುಧಾಕರ ರೈ, ಅಲ್ತಾಫ್, ಸಿರಾಜುದ್ದೀನ್ ಪರ್ಲಡ್ಕ, ಇಕ್ಬಾಲ್ ಕನಕಮಜಲು ಅಡ್ಮಿನ್‌ಗಳಾಗಿದ್ದು 230 ಸದಸ್ಯರಿದ್ದಾರೆ. ಗಿವ್ ಬ್ಲಡ್ ಸೇವ್ ಲೈಫ್ ವಾಟ್ಸಾಫ್ ಗ್ರೂಪ್‌ನ್ನು ಸುರೇಶ್ ಕರೆಮರಡ್ಕ ಅಡ್ಮಿನ್ ಆಗಿ ನಿಭಾಯಿಸುತ್ತಿದ್ದು 254 ಸದಸ್ಯರಿದ್ದಾರೆ.

ಅಮೃತಗಂಗಾ ರಕ್ತನಿಧಿ ವಾಟ್ಸಾಪ್ ಗ್ರೂಪ್ ನಲ್ಲಿ 2೦೦ ಸದಸ್ಯರಿದ್ದು ಉದಯ ಭಾಸ್ಕರ್ ಇದರ ಅಡ್ಮಿನ್ ಆಗಿದ್ದಾರೆ. ಯುವ ಬ್ರಿಗೇಡ್ ವಾಟ್ಸಾಫ್ ಗುಂಪಿನಲ್ಲಿ ಲೋಕೇಶ್ ಕೆರೆಮೂಲೆ , ಶರತ್ ಪರಿವಾರ್, ಮನೀಶ್ ಅಡ್ಮಿನ್ ಆಗಿದ್ದು, ಸುಮಾರು ೨೦೦ ಸದಸ್ಯರಿದ್ದಾರೆ. ಜಯಕರ್ನಾಟಕ ರಕ್ತದಾನಿಗಳು ವಾಟ್ಸಾಪ್ ಗುಂಪಿನಲ್ಲಿ ೨೪೬ ಸದಸ್ಯರಿದ್ದು, ಸುಧಾಕರ ರೈ ಸೇರಿದಂತೆ ಹಲವರು ಅಡ್ಮಿನ್ ಆಗಿದ್ದಾರೆ.
ಪುತ್ತೂರು, ಮಂಗಳೂರು ಹಾಗೂ ಬೆಂಗಳೂರನ್ನು ಕೇಂದ್ರವಾಗಿಟ್ಟು ಕಾರ್ಯಾಚರಿಸುತ್ತಿರುವ ಹಲವು ರಕ್ತದಾನದ ವಾಟ್ಸಾಪ್ ಗ್ರೂಪ್‌ಗಳಲ್ಲಿ ಕೂಡಾ ಸುಳ್ಯದ ಅನೇಕರು ಸಕ್ರಿಯರಾಗಿದ್ದಾರೆ. ಬಹುತೇಕ ಗ್ರೂಪ್ ಗಳಲ್ಲಿ ನಿಯಮಿತವಾಗಿ ರಕ್ತದಾನ ಮಾಡುವ ವಿವಿಧ ಗುಂಪಿನ ರಕ್ತದಾನಿಗಳ ಪಟ್ಟಿಯನ್ನೂ ಹಾಕಲಾಗುತ್ತದೆ.

ಸುಳ್ಯದಲ್ಲಿ ಇಷ್ಟು ಅಧಿಕ ಸಂಖ್ಯೆ ಯಲ್ಲಿ ರಕ್ತದಾನದ ವಾಟ್ಸಾಪ್ ಗ್ರೂಪ್‌ಗಳು ಮತ್ತು ಇಷ್ಟು ದೊಡ್ಡಸಂಖ್ಯೆಯ ಸದಸ್ಯರು ಇರುವ ಹಿನ್ನಲೆಯಲ್ಲಿ ಇವರನ್ನು ಒಂದೆಡೆ ಸೇರಿಸುವ ಪ್ರಯತ್ನ ಒಳ್ಳೆಯದಲ್ಲವೇ ಎಂಬ ಸಲಹೆಯನ್ನು ಗೌತಮ ಭಟ್ ಹಳೆಗೇಟು ನೀಡಿದ್ದಾರೆ.
ರಕ್ತ ಸಂಬಂಧಿ ಗಳೇ ದೂರವಾಗುವ ಇಂದಿನ ಕಾಲಘಟ್ಟದಲ್ಲಿ ರಕ್ತದ ಮೂಲಕ ಸಂಬಂಧ ಬೆಳೆಸಲು ಕಾರಣರಾದವರು ಒಂದು ಕಡೆ ಸೇರಿದರೆ ಅದೊಂದು ಮಾದರಿ ಕಾರ್ಯವಾಗಬಲ್ಲದು. ಆರಂಭದಲ್ಲಿ ಎಲ್ಲಾ ಗುಂಪುಗಳ ಅಡ್ಮಿನ್‌ಗಳು ಒಂದೆಡೆ ಕುಳಿತು ಈ ಕುರಿತು ಸಮಾಲೋಚನೆ ಮಾಡಿದರೆ ಇಂತಹ ಮಾದರಿ ಕಾರ‍್ಯಕ್ಕೆ ಮುನ್ನುಡಿ ಬರೆಯಬಹುದು. ಸುಳ್ಯದ ಸಂಘಟನೆಗೆ ಅಂತಹ ತಾಕತ್ತಿದೆ.

ರಕ್ತ ದಾನ ಕ್ರಾಂತಿಯ ಸುಧಾರಕ ಈ ಸುಧಾಕರ !

ಸಾಧಾರಣವಾಗಿ ಆರೋಗ್ಯವಂತ ಮನುಷ್ಯನಿಗೆ ಹತ್ತಾರು ಬಾರಿ ರಕ್ತದಾನ ಮಾಡುವುದೇ ಕಠಿಣ ಸಂಗತಿ. ಹೀಗಿರುವಾಗ ಕಳೆದ ೪ ದಶಕಗಳಿಂದ ಬರೋಬ್ಬರಿ 105 ಬಾರಿ ರಕ್ತದಾನ ಮಾಡಿದ ಸುಳ್ಯದ ಸುಧಾಕರ ರೈಯವರು ಈ ಕಾರ್ಯದಲ್ಲಿ ದಾಖಲೆ ಮಾಡಿದ್ದಾರೆ. ಅವರು ದಾಖಲೆ ಮಾಡಿದ್ದಾರೆ ಅನ್ನುವುದಕ್ಕಿಂತಲೂ ಅವರ ಮಾದರಿ ಕಾರ್ಯದಿಂದ ನೂರಾರು ಮಾನವ ಜೀವಗಳು ಉಳಿದಿವೆ ಎಂಬುವುದು ಹೆಚ್ಚು ಸರಿ ಮತ್ತು ಹೆಚ್ಚು ಆದರ್ಶವಾದುದು.


ಪಿ.ಬಿ. ಸುಧಾಕರ ರೈ ಯವರ ಬಗ್ಗೆ ಗೊತ್ತಿಲ್ಲದವರಿಲ್ಲ. ಪೆರಾಜೆಯ ಪ್ರತಿಷ್ಠಿತ ರೈ ಕುಟುಂಬದ ನಾಲ್ವರು ಸಹೋದರರಲ್ಲಿ ಒಬ್ಬರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ರಾಗಿರುವ ರೈ ಯವರು ಪ್ರಸ್ತುತ ಸುಳ್ಯ ವರ್ತಕರ ಸಂಘದ ಅಧ್ಯಕ್ಷರು. ವರ್ಷಕ್ಕೆ ೩ ಅಥವಾ ೪ ಬಾರಿ ರಕ್ತದಾನ ಮಾಡುವ ಇವರು ತನ್ನ ೫೮ನೇ ವಯಸ್ಸಿನಲ್ಲೂ ಈ ಮಾದರಿ ಕಾರ್ಯ ಮುಂದುವರೆಸಿದ್ದಾರೆ.
ಪಿಯುಸಿ ಯಲ್ಲಿ ದ್ದಾಗ ಸುಧಾಕರ ರೈ ಯವರು ಮೊದಲ ಬಾರಿ ರಕ್ತ ನೀಡಿದ್ದರು. ತನ್ನ ಸಹಪಾಠಿಯ ಸಹೋದರಿಯ ಜೀವ ಉಳಿಸಲು ಸುಳ್ಯದಿಂದ ಲಾರಿ ಹತ್ತಿ ಮಂಗಳೂರಿಗೆ ತೆರಳಿ ರಕ್ತದಾನ ಮಾಡಿದ್ದರಂತೆ. ಬಳಿಕ ಪದವಿ ಶಿಕ್ಷಣಕ್ಕೆ ಮಂಗಳೂರಿಗೆ ಹೋದಾಗ ಅಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ವಾಸವಿದ್ದು ನಿರಂತರ ರಕ್ತ ನೀಡುವ ಹವ್ಯಾಸ ಬೆಳೆಸಿಕೊಂಡರಲ್ಲದೆ ಮಿತ್ರರನ್ನೂ ರಕ್ತದಾನಕ್ಕೆ ಪ್ರೇರೇಪಿಸಿದರು.
೧೯೮೫ ರಲ್ಲಿ ವೃತ್ತಿಗಾಗಿ ಅವರು ದುಬೈಗೆ ತೆರಳಿದರು. ಅಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ. ರಕ್ತದಾನ ಮಾಡುವವರಿಗೆ ಸ್ವಾಗತ ಎಂಬ ಫಲಕ ಆಸ್ಪತ್ರೆಗಳಲ್ಲಿ, ಕಂಪೆನಿಗಳಲ್ಲಿ ಹಾಕುತ್ತಿದ್ದರು. ಇದನ್ನು ಗಮನಿಸಿದ ಸುಧಾಕರ ರೈಗಳು ಅಲ್ಲಿಯೂ ರಕ್ತದಾನ ಆರಂಭಿಸಿದರು. ೪೦ ಕ್ಕೂ ಹೆಚ್ಚು ಮಂದಿಯ ರಕ್ತದಾನಿಗಳ ಗುಂಪು ಕಟ್ಟಿದರು. ದುಬೈ ಸರಕಾರ ನೀಡುತ್ತಿದ್ದ ರಕ್ತ ದಾನಿಗಳ ಕಾರ್ಡ್ ಅವರಲ್ಲಿ ಈಗಲೂ ಇದೆ. ವಿದೇಶದಲ್ಲಿದ್ದ ಒಂದೂವರೆ ದಶಕ ಕಾಲವು ರಕ್ತದಾನ ಮಾಡುತ್ತಲೇ ಬಂದರು.
೨೦೦೦ ದಲ್ಲಿ ವಿದೇಶದಿಂದ ಬಂದು ಕುರುಂಜಿ ಭಾಗ್‌ನಲ್ಲಿ ಉದ್ಯೋಗ ಆರಂಭಿಸಿದ ಬಳಿಕ ಕೆವಿಜಿ ಕ್ಯಾಂಪಸ್ ವಿದ್ಯಾರ್ಥಿಗಳ ತಂಡ ಕಟ್ಟಿ ರಕ್ತ ಕ್ರಾಂತಿ ಮುಂದುವರೆಸಿದರು. ಕೆವಿಜಿ ಮೆಡಿಕಲ್ ಕಾಲೇಜು ಆರಂಭಗೊಂಡ ಮೇಲೆ ನಿರಂತರ ರಕ್ತದಾನ ಮಾಡುತ್ತಿದ್ದಾರೆ. ತನ್ನ ಮತ್ತು ಮಕ್ಕಳ ಜನ್ಮದಿನದಂದು ರಕ್ತದಾನ ಮಾಡುವ ವಿಶೇಷ ಹವ್ಯಾಸ ಇವರದು. ರಕ್ತ ಬೇಕಾಗಿದೆ ಎಂಬ ಮಾಹಿತಿ ಎಲ್ಲಿಂದ ಬಂದರೂ ತಕ್ಷಣ ಸ್ಪಂದಿಸುವ ಇವರು ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡಲು ಮುಂಚೂಣಿಯಲ್ಲಿರುತ್ತಾರೆ.
ಇವರು ಮಾತ್ರವಲ್ಲದೇ ಇವರ ಹಿರಿಯ ಸಹೋದರ ಪಿ.ಬಿ. ದಿವಾಕರ ರೈ ಸೇರಿ ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರು ಹಲವು ಬಾರಿ ರಕ್ತದಾನ ಮಾಡಿದ್ದು ಪುತ್ರ ಸ್ವಸ್ತಿಕ್ ಕೂಡಾ ಈ ಕಾರ್ಯದಲ್ಲಿ ಮುಂದುವರೆಸಿದ್ದಾರೆ.
ಪುಸ್ತಕದಲ್ಲಿ ರಕ್ತದಾನ ಮಾಡುವರ ಹೆಸರು ವಿಳಾಸ, ರಕ್ತದ ಗುಂಪು, ರಕ್ತದಾನ ಮಾಡಿದ ದಿನಾಂಕ ದಾಖಲಿ ಸುತ್ತಾರೆ. ಕೆವಿಜಿ ಮೆಡಿಕಲ್ ಕಾಲೇಜು ವತಿಯಿಂದ ಪ್ರತಿ ಬಾರಿ ರಕ್ತದಾನ ಮಾಡಿದಾಗಲೂ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಆರಂಭಿಸಿದ್ದಾರೆ. ಹಲವಾರು ರಕ್ತದಾನ ಗ್ರೂಪ್‌ಗಳನ್ನೂ ಇವರ ನೇತೃತ್ವದಲ್ಲಿ ಸಂಘಟಿಸಿದ್ದಾರೆ. ವಾಟ್ಸ್‌ಆಪ್ ಬಂದ ಮೇಲಂತೂ ಇವರ ರಕ್ತದಾನ ಕಾರ್ಯ ಇನ್ನಷ್ಟು ವಿಸ್ತಾರಗೊಂಡಿದೆ.

Advt_NewsUnder_1
Advt_NewsUnder_1

About The Author

Related posts

1 Comment

  1. M. Gopalakrishna, Hosagadde

    Tನಮ್ಮ ಕ್ಷೇತ್ರದ ಶಾಸಕರು ಸಚಿವರಾಗುವ ಎಲ್ಲ ಅಹ್ರತೆ, ಯೋಗ್ಯತೆ ಇದ್ದರೂ ವಂಚನೆಗೊಳಗಾಗಿದ್ದು ಇದು ನಮ್ಮ ಕ್ಷೇತ್ರಕ್ಕೆ ಅಗುರುವ ಅವಮಾನ ಖಂಡಿತ ಸರಿ. ಹಾಗೆಂದು ಈಗ ತಾನೇ ಅಧಿಕಾರಕ್ಕೆ ಬಂದಿರುವ ಪಕ್ಷಕ್ಕೆ ಮುಜುಗರ ಆಗುವ ರೀತಿ ಶ್ರೀ ಅಂಗಾರರು ನಡೆಯಲಾರರು ಎಂದೆನಿಸುತ್ತಿದೆ. ಈಗ ಅವರನ್ನು ಪ್ರಚೋದನೆಗೆ ಒಳಪಡಿಸುತ್ತಿರುವುದು ಸರಿಯಲ್ಲ. ಇತರ ಪಕ್ಷಗಳು ಇದರ ಸಂಪೂರ್ಣ ಲಾಭ ಪಡೆಯಲು ಅವಕಾಶ ಕೊಟ್ಟಂತಾಗುತ್ತದೆ. ಅವರು ಇಂತಹ ಅವಕಾಶಗಳನ್ನು ಕಾಯುತ್ತಲೇ ಇರುತ್ತಾರೆ. ಈಗ ಅವರು ಕೇಳುವ ಪ್ರಶ್ನೆಗಳಲ್ಲಿ ಎರಡು ಪ್ರಶ್ನೆ ಕಡಿಮೆ ಆಗಿದೆ. ಒಂದು ತ್ರಿವಳಿ ತಲಾಕ್ ಇನ್ನೊಂದು ೩೭೦ ವಿಧಿ, ಈಗ ಉಳಿದಿರುವುದು ಬಹು ಪತ್ನಿತ್ವ, Rama ಮಂದಿರ ನಿರ್ಮಾಣ, Kutumbaka Yojana ಅನುಷ್ಠಾನ ಇವುಗಳ ಬಗ್ಗೆ ಅಪಹಾಸ್ಯ. ಇವುಗಳಿಗೂ ಉತ್ತರ ಸಿಗುವ ಕಾಲ ದೂರವಿಲ್ಲ ಎಂದೆನಿಸುತ್ತಿದೆ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.