HomePage_Banner
HomePage_Banner
HomePage_Banner
Breaking News

ವಾಲ್ತಾಜೆ : ಸೀತಾರಾಮರವರಿಗೆ ಮಾಶಾಶನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯದ ವಾಲ್ತಾಜೆ ಎಂಬಲ್ಲಿರುವ ಸೀತಾರಾಮರವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಔಷದಿ ವೆಚ್ಚಕ್ಕಾಗಿ ಧರ್ಮಸ್ಥಳಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿ ಪ್ರತೀ ತಿಂಗಳು ೭೫೦/-ರಂತೆ ಧರ್ಮಾಧಿಕಾರಿಗಳು ಹಣ ಮಂಜೂರು ಮಾಡಿದರು.


ಇದರ ಮೊದಲ ಕಂತನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಧರ್ಮಸ್ಥಳ ಧರ್ಮಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದಕ್ಕಾಗಿ ಧನ್ಯವಾದ ತಿಳಿಸಿ, ಯೋಜನೆಯ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು ಈ ವರ್ಷ ಹೊಸ ಯೋಜನೆಯಾಗಿ ಮೈಕ್ರೋ ಬಚತ್ ಇನ್ಶೂರೆನ್ಸ್,ಅಂಗವಿಕಲರಿಗೆ ವೀಲ್ ಚಯರ್, ವಾಟರ್ ಬೆಡ್, ಊರುಗೋಲು ಶ್ರವಣ ಸಾಮಗ್ರಿಗಳನ್ನು ಸರಕಾರದಿಂದ ನೀಡದಿದ್ದಲ್ಲಿ ನಮ್ಮ ಕಡೆಯಿಂದ ನೀಡಲಾಗುವುದು. ಕೃಷಿಯೇತರ ಸ್ವಉದ್ಯೋಗ ಮಾಡುವವರಿಗೆ ಸಿಡ್ಬಿ ಯೋಜನೆಯಡಿಯಲ್ಲಿ ೩ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು. ಸಂಘ ಸೇರಲು ಬಾಕಿ ಇರುವ ಬಡ ಮತ್ತು ಮದ್ಯಮ ವರ್ಗದ ಕುಟುಂಬ ಸಂಘ ರಚನೆ ಮಾಡಿಕೊಂಡು ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಮನವಿಯನ್ನು ಮಾಡಿಕೊಂಡರು. ತೀರಾ ಬಡ ಕುಟುಂಬವು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿ ಹಾನಿ ಆದ ಸಂದರ್ಭ ಧರ್ಮಸ್ಥಳದಿಂದ ಸಹಾಯವನ್ನು ನೀಡಿ ನೆರವಾಗುತ್ತೇವೆ ಎಂದು ತಿಳಿಸಿದರು. ಮಾಶಾಶನ ವಿತರಣೆಯನ್ನು ಒಕ್ಕೂಟ ಅಧ್ಯಕ್ಷರಾದ ಪುರುಷೋತ್ತಮ ಮುಂಡೋಡಿ ಮಾಡಿದರು. ಈ ಸಂದರ್ಭ ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ, ಒಕ್ಕೂಟ ಸದಸ್ಯರಾದ ಪುಷ್ಪ ಮೀನಾಜೆ, ರೇಣುಕಾ ಕೊಂಬೆಟ್ಟು, ಪ್ರಮೀಳಾ ಮೀನಾಜೆ, ಲಲಿತಾರವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.