HomePage_Banner
HomePage_Banner
Breaking News

ಸುಳ್ಯದಲ್ಲಿ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ

ಸುಳ್ಯದ ಗಾಂಧಿನಗರ ಶ್ರೀ ಕಲ್ಕುಡ ದೈವಸ್ಥಾನದ ಮುಂದುಗಡೆ ಇರುವ ರೋಹನ್ ಪೀಟರ್ ಮಾಲಕತ್ವದ ತ್ರೀವೇಣಿ ಕಾಂಪ್ಲೆಕ್ಸ್ ನಲ್ಲಿ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ., (ಸರಕಾರದ ಸಹಕಾರಿ ಇಲಾಖೆಯ ಕಾಯ್ದೆ 1959ರ ಅಧಿನಿಯಮಕ್ಕೆ ಒಳಪಟ್ಟ )ಇದರ ನೂತನ ಶಾಖೆಯು ಜು.11 ರಂದು ಪ್ರಾರಂಭಗೊಂಡಿತು.


ಪ್ರಾತ:ಕಾಲ ಗಣಪತಿ ಹವನವಾಗಿ ಸಂಸ್ಥೆಯ 32 ನೇ ಶಾಖೆಯ ಉದ್ಘಾಟನಾ ಸಮಾರಂಭ ನಡೆಯಿತು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಪದ್ಮರಾಜು ಮಂಡ್ಯರವರು ವಹಿಸಿದ್ದರು.ವೇದಿಕೆಯಲ್ಲಿ ದ.ಕ.ಜಿಲ್ಲಾ ನಿರ್ದೇಶಕ ಗಿರೀಶ್ ಬಿ.ಜಿ.ಪುತ್ತೂರು, ನಿತ್ಯಾನಂದ ಕೊಟ್ಟಾರಿ ಕುಂದಾಪುರ, ತಿರುಪತಿ ಎಂಟರ್ ಪ್ರೈಸಸ್ ಮಾಲಕ ಗುರುಸ್ವಾಮಿ ಸುಳ್ಯ, ಕಾಂಪ್ಲೆಕ್ಸ್ ಮಾಲಕ ರೋಹನ್ ಪೀಟರ್, ಮೈಸೂರು ಶಾಖೆಯ ವಲಯ ವ್ಯವಸ್ಥಾಪಕ ಸಂಜಯ್ ಮೈಸೂರು, ದ.ಕ.ವಲಯ ವ್ಯವಸ್ಥಾಪಕ ವಿನೋದ್ ಪಿ.ಪುತ್ತೂರು, ರಾಜೀವ್ ಕುಂದಾಪುರ ಉಪಸ್ಥಿತರಿದ್ದರು. ಪುತ್ತೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಪಾವನ ಎಂ. ಪ್ರಾರ್ಥಿಸಿದರು.ವಿಟ್ಲ ಶಾಖಾಧಿಕಾರಿ ಶ್ರೀಮತಿ ಉಷಾಪದ್ಯಾಣ ಸ್ವಾಗತಿಸಿದರು. ನಿರ್ದೇಶಕ ಗಿರಿಶ್ ಬಿ.ಜಿ.ವಂದಿಸಿದರು. ಸುದ್ದಿ ಪತ್ರಿಕೆಯ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಶಾಖಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿವರ್ಗದವರು ಸಹಕರಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಿಗೆ ಸಂಸ್ಥೆಯ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ಗ್ರಾಹಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.