ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಕೆಎ ೯-ಎಫ್ ೨೪೫೧ ನಂಬರ್) ಮತ್ತು ಪಂಜದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಹೀರೋ ಹೋಂಡಾ ದ್ವಿಚಕ್ರವಾಹನ (ಕೆಎ ೨೧ ಕೆ೫೮೮೬) ಪರಸ್ಪರ ಢಿಕ್ಕಿಯಾಗಿದ್ದು, ಬೈಕ್ ಸವಾರ ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತ ಸುಳ್ಯದ ಶೀನಪ್ಪ ರೈಯವರಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಪಂಜದ ಕೃಷ್ಣನಗರ ಬಳಿ ಸಂಭವಿಸಿದೆ.
ಗಾಯಾಳುವನ್ನು ಪಂಜದ ವಿಜಯ ಕ್ಲಿನಿಕ್ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.