HomePage_Banner
HomePage_Banner
Breaking News

ಅಪಘಾತದ ಗಾಯಾಳು ಶೀನಪ್ಪ ರೈ ನಿಧನ

 
ಇಂದು ಸಂಜೆ ಪಂಜದಲ್ಲಿ ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಜಖಂಗೊಂಡ ಗಾಯಾಳು ಶೀನಪ್ಪ ರೈಯವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಇಂದು ಸಂಜೆ ಪಂಜದ ಕೃಷ್ಣ ನಗರದಲ್ಲಿ ನಡೆದ ಅಪಘಾತದ ಬಳಿಕ ಶೀನಪ್ಪ ರೈ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿ ಪುತ್ತೂರಿಗೆ ಕೊಂಡೊಯ್ಯಲಾಗಿತ್ತು. ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಗಾಯಾಳುವನ್ನು ಮಂಗಳೂರಿಗೆ ಕರೆದೊಯ್ಯಲು ತಿಳಿಸಿದ ಮೇರೆಗೆ ಸಂಬಂಧಿಕರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ತಲುಪುವ ಮೊದಲೇ ಶೀನಪ್ಪ  ರೈ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಆಸ್ಪತ್ರೆಯ ವೈದ್ಯರು ಆಂಬ್ಯುಲೆನ್ಸ್ ನಲ್ಲೇ ಗಾಯಾಳುವನ್ನು ಪರೀಕ್ಷಿಸಿದಾಗ ಕೊನೆಯುಸಿರೆಳೆದಿರುವ ದೃಡಪಟ್ಟಿತು. ಇದೀಗ ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಯ ಶೀತಲೀಕೃತ ಘಟಕದಲ್ಲಿ ಇರಿಸಲು ಮಂಗಳೂರಿನಿಂದ ತರಲಾಗುತ್ತಿದೆ. ನಾಳೆ ಇಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಲಾಗುವುದು.

ಶೀನಪ್ಪ ರೈ ಸುಬ್ರಹ್ಮಣ್ಯದವರು:

ಕಳೆದ 29 ವರ್ಷಗಳಿಂದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನಲ್ಲಿ ಲೆಕ್ಕಪತ್ರ ವಿಭಾಗದ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಶೀನಪ್ಪ ರೈಯವರು ಸುಬ್ರಹ್ಮಣ್ಯದ ದೇವರಗದ್ದೆಯ ದಿ. ಅಮ್ಮು ಶೆಟ್ಟಿಯವರ ಪುತ್ರ. ಅವರ ಪತ್ನಿ ಶ್ರೀಮತಿ ಚಿತ್ರಾರವರು ಪೆರ್ನಾಜೆಯ ಸೀತಾರಾಘವ ಪ್ರೌಢಶಾಲೆಯಲ್ಲಿ ಕ್ಲರ್ಕ್ ಆಗಿರುವುದರಿಂದ ಅವರು ಸುಳ್ಯದ ಕಾನತ್ತಿಲದಲ್ಲಿ ಮನೆ ಮಾಡಿದ್ದರು. ಪುತ್ರ ಕೌಶಿಕ್ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗಿದ್ದ ಅವರು ಹತ್ತು ದಿನಗಳ ರಜೆಯಲ್ಲಿ ಕೆಲ ದಿನಗಳ ಹಿಂದೆ ಊರಿಗೆ ಬಂದಿರುತ್ತಾರೆ. ಎರಡನೇ ಪುತ್ರ ಕಾರ್ತಿಕ್ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.