HomePage_Banner
HomePage_Banner
HomePage_Banner
HomePage_Banner

ಎಸ್‌ಎಸ್‌ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ದಿ|ಎಂ.ಮಹಾಬಲ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಮರ್ಪಣೆ

ಜೀವನಕ್ಕೆ ಜ್ಞಾನ ದೀವಿಗೆಯ ಬೆಳಕನ್ನು ನೀಡಿ ಶಿಷ್ಯರ ಜೀವನವನ್ನು ಪ್ರಜ್ವಲಿಸುವವರು ಗುರು. ಗುರುಶ್ರೇಷ್ಠ ಪರಂಪರೆಯನ್ನು ಅನುಸರಿಸುವ ಮೂಲಕ ಶಿಷ್ಯರಿಗೆ ಗುರುಗಳ ಬೆಲೆಯನ್ನು ತಿಳಿಸಿಕೊಟ್ಟ ಶ್ರೇಷ್ಠರು ಸ್ಥಾಪಕ ಪ್ರಾಂಶುಪಾಲ ಮಹಾಬಲ ಶೆಟ್ಟರು.ಸ್ಥಿತ ಪ್ರಜ್ಞತೆ ಮೈಗೂಡಿಸಿಕೊಂಡು ಸಂತಸ ಮತ್ತು ನೋವಿನ ಪರಿಸ್ಥಿತಿಯನ್ನು ಯಥಾವತ್ತಾಗಿ ಕೊಂಡೊಯ್ಯುವ ಇವರದು ಶ್ರೇಷ್ಠ ವ್ಯಕ್ತಿತ್ವ.ಸರಳ ಸಜ್ಜನಿಕೆ ಮತ್ತು ಮಾರ್ಗದರ್ಶಿ ಮನೋಭಾವನೆಯ ಮೂಲಕ ಇವರು ವಿದ್ಯಾಸಂಸ್ಥೆ ಸೇರಿದಂತೆ ಊರಿನ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದವರು ಎಂದು ಎಸ್‌ಎಸ್‌ಪಿಯು ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ವಿದ್ವಾನ್ ಕೇಶವ ಭಟ್ ಹೇಳಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ದಿ.ಎಂ.ಮಹಾಬಲ ಶೆಟ್ಟಿ ಅವರಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಮತ್ತು ನುಡಿನಮನ ಅರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬದುಕನ್ನು ಕಾಯಕವನ್ನಾಗಿಸಿದ ಕಾಯಕ ಯೋಗಿ ಸ್ಥಾಪಕ ಪ್ರಾಂಶುಪಾಲರು. ಮನಸ್ಸಿನಲ್ಲಿ ಯೋಚಿಸಿದನ್ನು ಮೈಗೂಡಿಸಿಕೊಂಡು ನಡೆದ ಶ್ರಮಜೀವಿ. ಅಂತೆಯೇ ಬದುಕಿನುದ್ದಕ್ಕೂ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡವರು. ವಿದ್ಯಾರ್ಥಿಗಳ ಬದುಕಿನ ಉಜ್ವಲತೆಗೆ ಅಮೋಘ ಕೊಡುಗೆ ನೀಡಿದ ಅವರು ಶಿಷ್ಯರ ಔನತ್ಯಕ್ಕೆ ದಾರಿದೀಪವಾಗಿದ್ದರು.
ನುಡಿ ನಮನ:
ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ನಿವೃತ್ತ ಪ್ರಾಂಶುಪಾಲರಾದ ರಾಮಶರ್ಮ, ಎಸ್.ಎನ್.ಭಟ್, ವಸಂತ ಶೆಟ್ಟಿ, ನಿವೃತ್ತ ಉಪನ್ಯಾಸಕರಾದ ಮುತ್ತಯ್ಯ ಮಾಸ್ತರ್, ಕುಶಾಲಪ್ಪ ಮಾಸ್ತರ್, ಡಾ.ಕೆ.ಎಸ್.ಎನ್.ಉಡುಪ, ನಿವೃತ್ತ ಬೋಧಕೇತರ ಸಿಬ್ಬಂಧಿ ದುಗ್ಗಪ್ಪ ಅಗ್ರಹಾರ, ಉಪನ್ಯಾಸಕ ವಿಶ್ವನಾಥ ನಡುತೋಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಮೊದಲಾದವರು ನುಡಿನಮನ ಸಲ್ಲಿಸಿದರು.
ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್, ಹಿರಿಯ ಉಪನ್ಯಾಸಕ ಎ.ಆರ್.ಮುಲ್ಲಾ, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಕಛೇರಿ ಅಧೀಕ್ಷಕಿ ವಸಂತಿ.ಬಿ.ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಸದಸ್ಯ ನಾಗಸುಬ್ರಹ್ಮಣ್ಯ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಜೇಸಿಸ್‌ನ ನಿಕಟಪೂರ್ವ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ ನಾಯರ್, ಹಿರಿಯ ವಿದ್ಯಾರ್ಥಿಗಳಾದ ಪ್ರಕಾಶ್ ಸುಬ್ರಹ್ಮಣ್ಯ, ನಿತಿನ್ ಭಟ್, ದಿನೇಶ್ ಎಸ್.ಎನ್, ಸಿಬ್ಬಂಧಿ ಮಹೇಶ್ ಕೆ.ಎಚ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂಧಿಗಳು ಗುರುಗಳಾದ ದಿ| ಎಂ.ಮಹಾಬಲ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆ ಸಮರ್ಪಿಸಲಾಯಿತು. ಉಪನ್ಯಾಸಕ ರತ್ನಾಕರ ಎಸ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಕುಸುಮಾಧರ ಕಮಿಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.