HomePage_Banner
HomePage_Banner

ಸುಳ್ಯದ ಈ ಟಿಕ್‌ಟಾಕ್ ಫ್ರೆಂಡ್ಸ್ ಫುಲ್ ಫೇಮಸ್ !: ಇವರು ತಯಾರಿಸಿದ ವಿಡಿಯೋಗಳಿಗೆ ಲಕ್ಷಗಟ್ಟಲೆ ವೀಕ್ಷಕರು…ಸೋಷಿಯಲ್ ಮೀಡಿಯಾದಲ್ಲಿ ಹಳ್ಳಿ ಹೈದರ ಹವಾ…

(ಬರಹ : ದುರ್ಗಾಕುಮಾರ್ ನಾಯರ್‌ಕೆರೆ)

ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿಲ್ಲದ ಚರ್ಚೆ, ಅಸಂಬದ್ಧ ಕಮೆಂಟ್‌ಗಳಿಗೋ, ತಮಗಾಗದವರಿಗೆ ಬಯ್ಯಲೆಂದೋ ಬಳಸುವ ಪ್ರವೃತ್ತಿಯ ಮಧ್ಯೆಯೇ ಸುಳ್ಯದ ಈ ನಾಲ್ವರು ಮಿತ್ರರು ತಮ್ಮ ಸೃಜನಶೀಲವಾದ ಸೃಷ್ಟಿಗಳಿಂದ ಮನರಂಜನೆ ನೀಡುತ್ತಿದ್ದಾರೆ. ಮೊಬೈಲ್‌ನಲ್ಲಿರುವ ಆಪ್ ಉಪಯೋಗಿಸಿ ತಮ್ಮ ಪ್ರತಿಭೆಯನ್ನು ಬಳಸಿ ಜನರ ಮನಸ್ಸು ರಿಲ್ಯಾಕ್ಸ್‌ಗೊಳಿಸುತ್ತಿದ್ದಾರೆ.

ಸುಳ್ಯ ಬಿಎಸ್‌ಎನ್‌ಎಲ್ ಕಚೇರಿ ಬಳಿ ಶ್ರೀರಾಮ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ಹೊಂದಿರುವ ಪೈಲಾರಿನ ಜೀವನ್ ಕೆರೆಮೂಲೆ ಇದರ ಮುಖ್ಯ ರೂವಾರಿ. ಇವರ ಮಿತ್ರರಾದ ಚೇತನ್ ಗಬ್ಬಲಡ್ಕ, ಪ್ರಶಾಂತ್ ಅಜ್ಜಾವರ, ದೀಕ್ಷಿತ್ ಜಯನಗರ ಈ ನಾಲ್ವರು ಸೇರಿ ತಯಾರಿಸಿದ ಟಿಕ್‌ಟಾಕ್ ವಿಡಿಯೋಗಳು ಪ್ರಸಿದ್ಧವಾಗಿದ್ದು ಲಕ್ಷಾಂತರ ಜನ ಇದನ್ನು ನೋಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಮನುಷ್ಯ ಬದುಕಿಗೆ ಪೂರಕವಾಗಿಸಿದರೆ ಅವುಗಳಲ್ಲಿ ಅಸಂಖ್ಯ ಅವಕಾಶ ಮತ್ತು ಸಾಧ್ಯತೆಗಳಿವೆ. ಕೆಲ ಸಮಯದ ಹಿಂದೆ ಡಬ್‌ಸ್ಮ್ಯಾಶ್ ಎಂಬ ಆಪ್ ಇತ್ತು. ಆಗಲೇ ಇವುಗಳ ಹವಾ ಜೋರಾಗಿತ್ತು. ಬಳಿಕ ಟಿಕ್‌ಟಾಕ್ ಆಪ್ ಬಂತು. ಈಗ ಇದು ಫುಲ್ ಫೇಮಸ್. ಪ್ರಾಯ ಬೇಧ ಲೆಕ್ಕಿಸದೆ ಇದನ್ನು ಮೆಚ್ಚುವವರಿದ್ದಾರೆ.

ಡಬ್‌ಸ್ಮ್ಯಾಶ್ ಇರುವಾಗಲೇ ಜೀವನ್ ಹಾಗೂ ಮಿತ್ರರು ಹಲವು ವೀಡಿಯೋ ದೃಶ್ಯಗಳನ್ನು ತಯಾರಿಸಿದ್ದರು. ಆದರೆ ಟಿಕ್‌ಟಾಕ್ ಬಂದ ಮೇಲೆ ಕಳೆದ ಐದಾರು ತಿಂಗಳುಗಳಿಂದ ತಮ್ಮದೇ ಆದ ಯೋಚನೆಯ ಅನೇಕ ವೀಡೀಯೋಗಳನ್ನು ತಯಾರಿಸಿದ್ದಾರೆ.
ಹಾಗಂತ ಈ ಯುವಕರು ಇದನ್ನೇ ಪೂರ್ಣ ಕಾಯಕ ಮಾಡಿಕೊಂಡವವರೇನಲ್ಲ. ಎಲ್ಲರಿಗೂ ಬೇರೆ ಬೇರೆ ಕೆಲಸಗಳಿವೆ. ಜೀವನ್ ಕೆರೆಮೂಲೆ ಕಳೆದ ಎರಡೂವರೆ ವಷಗಳಿಂದ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಚೇತನ್ ಗಬ್ಬಲಡ್ಕ ಪುತ್ತೂರಿನಲ್ಲಿ ಎಲ್‌ಜಿ ಕಂಪೆನಿಯಲ್ಲಿದ್ದಾರೆ. ಪ್ರಶಾಂತ್ ಅಜ್ಜಾವರ ರೊಟ್ಟಿ ತಯಾರಿ ಉದ್ಯಮ ನಡೆಸುತ್ತಿದ್ದಾರೆ. ದೀಕ್ಷಿತ್ ಕೃಷಿಕರಾಗಿದ್ದಾರೆ.

ಸಂಜೆ ಅಥವಾ ರಾತ್ರಿಯ ಬಿಡುವಿನ ವೇಳೆಯಲ್ಲಿ ಇವರು ಜತೆ ಸೇರುತ್ತಾರೆ. ತಮ್ಮ ತಮ್ಮ ಯೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಐಡಿಯಾ, ಸಂಭಾಷಣೆ, ಅಭಿನಯ, ಸಂಕಲನ ಎಲ್ಲವೂ ಇವರದ್ದೇ. ಆರಂಭದಲ್ಲಿ ಹೊಳೆದ ಐಡಿಯಾಗಳಿಗೆ ಸಂಭಾಷಣೆ ರಚಿಸಿ ಆಪ್‌ನಲ್ಲಿ ಧ್ವನಿ ನೀಡುತ್ತಾರೆ. ಆ ಬಳಿಕ ಅಭಿನಯದ ಚಿತ್ರೀಕರಣ ನಡೆಸಿ ಅದನ್ನು ಸೇರಿಸಿ ಎಡಿಟ್ ಮಾಡುತ್ತಾರೆ. ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವ ಅವಶ್ಯಕತೆ ಇದ್ದರೆ ಆದಿತ್ಯವಾರ ರಜಾದಿನದಂದು ಮಾಡುತ್ತಾರೆ.
ಚಿತ್ರೀಕರಣವನ್ನು ಮೊಬೈಲ್‌ನಲ್ಲಿ ಮಾತ್ರ ಮಾಡುವುದರಿಂದ ಕೇವಲ 15 ಸೆಕುಂಡುಗಳ ದೃಶ್ಯವನ್ನು ಸೆರೆ ಹಿಡಿಯಲು ಮಾತ್ರ ಸಾಧ್ಯವಾಗುತ್ತದೆ. ಇವುಗಳ ಎಡಿಟ್‌ಗೆಂದೇ ಸುಮಾರು 1 ಗಂಟೆ ಬೇಕಾಗುತ್ತದೆ. ಕಂಪ್ಯೂಟರ್ ಸಹಾಯವನ್ನೂ ಪಡೆದುಕೊಳ್ಳಲಾಗುತ್ತದೆ.

ಹಾಗೆ ತಯಾರಿಸಲಾದ ವೀಡೀಯೋಗಳನ್ನು ತಮ್ಮ ಟಿಕ್‌ಟಾಕ್ ಅಕೌಂಟ್‌ನಲ್ಲಿ ಹಾಕುತ್ತಾರೆ. ಹಲೋ, ಇನ್‌ಸ್ಟಾಗ್ರಾಗಳಲ್ಲೂ ಹಂಚಿಕೊಳ್ಳುತ್ತಾರೆ. ಹಾಗೆ ದೊರೆಯುವ ಈ ವೀಡೀಯೋಗಳನ್ನು ಸಾವಿರಾರು ಮಂದಿ ಡೌನ್ಲೋಡ್ ಮಾಡಿ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಶೇರ್ ಮಾಡುತ್ತಾರೆ. ಸಾವಿರಾರು ಮಂದಿ ಸ್ಟೇಟಸ್ ಆಗಿಯೂ ಹಂಚಿಕೊಳ್ಳುತ್ತಾರೆ.
ಆರಂಭದಲ್ಲಿ ಈ ತಂಡ ತಮಗೆ ಲಭ್ಯವಿರುವ ನಗೆಹನಿಗಳನ್ನು ಇದಕ್ಕಾಗಿ ಉಪಯೋಗಿಸುತ್ತಿದ್ದರು. ಆದರೆ ಈಗ ಇವರದ್ದೇ ಆದ ಸ್ವಂತ ಯೋಚನೆಗಳಿಂದ ವೀಡೀಯೋ ತಯಾರಿಸುತ್ತಾರೆ. ವರ್ತಮಾನದ ಸಾಮಾಜಿಕ ಸಂಗತಿಗಳು, ನಗೆ ಚಟಾಕಿಗಳು, ಸಂದೇಶಗಳು, ಮಾನವೀಯತೆ, ಕೌಟುಂಬಿಕವಾದ ಸಂಗತಿಗಳು ಇದರಲ್ಲಿ ಅಡಕಗೊಂಡಿವೆ, ಇವುಗಳನ್ನು ನೋಡಿದರೆ ಮುಖದಲ್ಲಿ ನಗು ಮೂಡುತ್ತದೆ. ಮನಸ್ಸುಗಳು ಒಂದಷ್ಟು ರಿಲ್ಯಾಕ್ಸ್ ಆಗುತ್ತದೆ.

ಇವರ ಟಿಕ್‌ಟಾಕ್ ವೀಡೀಯೋಗಳನ್ನು ಲಕ್ಷಾಂತರ ಜನ ನೋಡಿದ್ದಾರೆ. ಜೀವನ್ ಕೆರೆಮೂಲೆಯವರು ಇದುವರೆಗೆ 93 ವೀಡಿಯೋ ತಯಾರಿಸಿ ಅಪ್‌ಲೋಡ್ ಮಾಡಿದ್ದು, 16 ಲಕ್ಷ ವೀಕ್ಷಣೆಗಳು ಬಂದಿವೆ. ಇವರ ಅಕೌಂಟ್‌ನಲ್ಲಿ 72,೦೦೦ ಫಾಲೋವರ‍್ಸ್ ಇದ್ದಾರೆ. ಪ್ರಶಾಂತ್ ಅಜ್ಜಾವರರವರು 16 ವೀಡಿಯೋ ಅಪ್‌ಲೋಡ್ ಮಾಡಿದ್ದು, 4 ಲಕ್ಷ ವೀಕ್ಷಣೆ ಹೊಂದಿದೆ. 22೦೦೦ ಫಾಲೋವರ‍್ಸ್ ಇದ್ದಾರೆ. ಚೇತನ್ ಗಬ್ಬಲಡ್ಕ ಅವರು 83 ವೀಡಿಯೋ ಅಪ್‌ಲೋಡ್ ಮಾಡಿದ್ದು, 6 ಲಕ್ಷ ವೀಕ್ಷಣೆಗಳು ಬಂದಿವೆ. 32೦೦೦ ಫಾಲೋವರ‍್ಸ್ ಇದ್ದಾರೆ. ದೀಕ್ಷಿತ್ 14  ವೀಡಿಯೋ ಅಪ್‌ಲೋಡ್ ಮಾಡಿದ್ದು, 2 ಲಕ್ಷ ವೀಕ್ಷಣೆಗಳು ಬಂದಿವೆ. 1೦೦೦೦ ಫಾಲೋವರ‍್ಸ್ ಇದ್ದಾರೆ.
ಸಂಗೀತದ, ಜಾಹೀರಾತಿನ ಟಿಕ್‌ಟಾಕ್ ಮಾಡಿದರೆ ಅವುಗಳನ್ನು ಹೆಚ್ಚು ಜನ ವೀಕ್ಷಿಸುತ್ತಾರೆ. ಅವುಗಳಿಗೆ ಭಾಷೆಯ ಹಂಗಿರುವುದಿಲ್ಲ. ಜಗತ್ತಿನಾದ್ಯಂತ ನೋಡುತ್ತಾರೆ ಎನ್ನುತ್ತಾರೆ ಜೀವನ್.

ಒತ್ತಡದ ಬದುಕಿನ ಮಧ್ಯೆ ಸಣ್ಣದೊಂದು ರಿಲ್ಯಾಕ್ಸ್ ನೀಡುವುದಷ್ಟೇ ನಮ್ಮ ಉದ್ದೇಶ.ನಮ್ಮ ಟಿಕ್‌ಟಾಕ್‌ಗಳನ್ನು ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಇವರು ಹೇಳುತ್ತಾರೆ.
ಏನೇ ಇರಲಿ, ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಠಿಸಿರುವ ನಮ್ಮೂರಿನ ಹೈದರಿಗೊಂದು ಹ್ಯಾಟ್ಸಾಪ್ ಹೇಳೋಣ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.